• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್‌ಜೆಟ್ ವಿಮಾನ ಹಾರಾಟ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾ

|
Google Oneindia Kannada News

ನವದೆಹಲಿ, ಜುಲೈ 18: ಸ್ಪೈಸ್‌ಜೆಟ್ ಏರ್‌ಲೈನ್‌ನ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ವೃತ್ತಿಪರ ಮತ್ತು ಸುರಕ್ಷತಾ ಕಟ್ಟುಪಾಡುಗಳನ್ನು ಉಲ್ಲಂಘಿಸಿ ತನ್ನ ವಿಮಾನಯಾನ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.

''ಸಾರ್ವಜನಿಕ ಹಿತಾಸಕ್ತಿ ಮತ್ತು ಪತ್ರಿಕಾ ವರದಿಗಳ ಆಧಾರದ ಮೇಲೆ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡುವಂತಿಲ್ಲ'' ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠವು ತಿಳಿಸಿದೆ.

ವಕೀಲ ರಾಹುಲ್ ಭಾರದ್ವಾಜ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ಪೀಠವು, ಕಾನೂನು ವಾಯುಯಾನ ಉದ್ಯಮಕ್ಕೆ "ದೃಢವಾದ ಕಾರ್ಯವಿಧಾನವನ್ನು" ಒದಗಿಸಿದೆ ಮತ್ತು ಪ್ರಸ್ತುತ ಪ್ರಕರಣದಲ್ಲಿ ಕೇಳಿ ಬಂದ ಆರೋಪ ಕುರಿತಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನ್ನ ನಿಲುವನ್ನು ದಾಖಲಿಸಿದೆ ಮತ್ತು ಘಟನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮವನ್ನು ಪ್ರಾರಂಭಿಸಿದೆ ಮತ್ತು ಶೋಕಾಸ್ ನೋಟಿಸ್ ನೀಡಿದೆ.

ಹಾರಾಟ ಸ್ಥಗಿತಕ್ಕೆ ಅರ್ಜಿ ಏಕೆ?:
ಇತ್ತೀಚಿಗೆ, ಸ್ಪೈಸ್‌ಜೆಟ್ ವಿಮಾನದ "ಲ್ಯಾಂಡಿಂಗ್", ಪ್ರಯಾಣಿಕರ ಸಾಮಾನು ಸರಂಜಾಮು ಇಲ್ಲದೆ ವಿಮಾನ ಟೇಕ್ ಆಫ್ ಆಗಿರುವುದು ಮತ್ತು ಉದ್ಯೋಗಿಗಳಿಗೆ ಸಂಬಳ ನೀಡದಿರುವುದು ಸೇರಿದಂತೆ ಅನೇಕ ಉದಾಹರಣೆಗಳನ್ನು ಉಲ್ಲೇಖಿಸಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಸೇವೆಯಲ್ಲಿ "ನಿಯಮಿತ ಉಲ್ಲಂಘನೆಗಳು" ನಡೆದಿವೆ ಮತ್ತು ಸ್ಪೈಸ್‌ಜೆಟ್ ಪ್ರವರ್ತಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಅರ್ಜಿದಾರರು ವಾದಿಸಿದ್ದರು.

"ಪಿಐಎಲ್ ಮತ್ತು ಪ್ರೆಸ್ ಕ್ಲಿಪ್ಪಿಂಗ್‌ಗಳ ಆಧಾರದ ಮೇಲೆ ದೇಶದಲ್ಲಿ ಕಾರ್ಯನಿರ್ವಹಿಸಲು ನಿರ್ದಿಷ್ಟ ವಿಮಾನಯಾನವನ್ನು ನ್ಯಾಯಾಲಯವು ತಡೆಯಲು ಸಾಧ್ಯವಿಲ್ಲ" ವಿಮಾನ ಕಾಯಿದೆಯು ಸಾಮಾನ್ಯ ಹಾರಾಟ ಮತ್ತು ಸುರಕ್ಷತಾ ಪರಿಸ್ಥಿತಿಗಳು ಹಾಗೂ ವಿಮಾನದ ವಾಯು ಯೋಗ್ಯತೆಯನ್ನು ಒದಗಿಸುತ್ತದೆ ಮತ್ತು ಅರ್ಜಿದಾರರು ಆರೋಪಿಸಿರುವ ಘಟನೆಗಳನ್ನು ಪರಿಶೀಲಿಸಲು DGCA ಸಮರ್ಥ ಅಧಿಕಾರವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಸ್ಪೈಸ್‌ಜೆಟ್‌ನ ಕಾರ್ಯಾಚರಣೆಯನ್ನು ನಿಲ್ಲಿಸುವ ಮಧ್ಯಂತರ ಪರಿಹಾರವನ್ನು ನೀಡುವಂತೆ ಅರ್ಜಿದಾರರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದಾಗ, ನ್ಯಾಯಾಲಯವು "ಹಾಗಾದರೆ ನಾವು ವಿಮಾನಯಾನವನ್ನು ಪ್ರಾರಂಭಿಸುತ್ತೇವೆಯೇ?" ಎಂದು ಟೀಕಿಸಿತು. "ಅದು ನಮ್ಮ ಕಾರ್ಯಕ್ಷೇತ್ರವಲ್ಲ, ಅದಕ್ಕಾಗಿ ಪರಿಣಿತ ಸಂಸ್ಥೆಯಾಗಿ -- DGCA ಇದೆ... ಪರಿಹಾರವನ್ನು ಕಾನೂನು ಚೌಕಟ್ಟಿನ ಅಡಿಯಲ್ಲಿ ಮಾತ್ರ ಕ್ಲೈಮ್ ಮಾಡಬಹುದು" ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ, ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳ ಶೇಕಡಾವಾರು ಪ್ರಮಾಣವು ವಾಯುಯಾನ ವಲಯಕ್ಕಿಂತ ಹೆಚ್ಚಾಗಿದೆ ಮತ್ತು ಪ್ರತಿ ವಿಮಾನವು ಟೇಕ್ ಆಫ್ ಆಗುವ ಮೊದಲು ಅದನ್ನು ಪರಿಶೀಲಿಸಲಾಗುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.

ಅರ್ಜಿಯಲ್ಲಿ ಉಲ್ಲೇಖಿಸಿರುವ ಕಳವಳಕಾಗಿ ಎನ್ನಬಹುದಾದ ಅಂಶಗಳನ್ನು ಪರಿಶೀಲಿಸಲು ಮತ್ತು ಈ ಮಧ್ಯೆ ಸ್ಪೈಸ್‌ಜೆಟ್ ಕಾರ್ಯಾಚರಣೆಯನ್ನು ನಿಲ್ಲಿಸಲು ವಾಯುಯಾನ ತಜ್ಞರ ವಿಶೇಷ ಆಯೋಗವನ್ನು ರಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನವನ್ನು ಅರ್ಜಿದಾರರು ಕೋರಿದ್ದಾರೆ. ಜೀವಿಸುವ ಹಕ್ಕು ವಿಮಾನ ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣದ ಹಕ್ಕನ್ನು ಒಳಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. (ಪಿಟಿಐ)

English summary
The Delhi High Court on Monday rejected public interest litigation (PIL) seeking to stop the operation of SpiceJet airline for allegedly flying its aircraft in breach of professional and safety obligations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X