• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್-ಫ್ಯೂಚರ್ ಒಪ್ಪಂದಕ್ಕೆ ತಡೆ, ಅಮೆಜಾನ್‌ಗೆ ಶುಭ ಸುದ್ದಿ

|
Google Oneindia Kannada News

ನವದೆಹಲಿ, ಮಾರ್ಚ್ 19: ರಿಲಯನ್ಸ್ ರೀಟೇಲ್ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವಿನ 24,713 ಕೋಟಿ ಮೊತ್ತದ ಡೀಲ್ ವಿರುದ್ಧ ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ಗೆ ಭಾರಿ ಗೆಲುವು ಸಿಕ್ಕಿದೆ. ರಿಲಯನ್ಸ್-ಫ್ಯೂಚರ್ ಒಪ್ಪಂದ ಕುರಿತಂತೆ ದೆಹಲಿ ಹೈಕೋರ್ಟ್ ನೀಡಿದ್ದ ತುರ್ತು ಆದೇಶವನ್ನು ಎತ್ತಿ ಹಿಡಿದಿದೆ. ಈ ಮೂಲಕ ಅಮೆಜಾನ್‌ ಪಾಲಿಗೆ ಮಹತ್ವದ ಗೆಲುವು ದಕ್ಕಿದೆ. ಫ್ಯೂಚರ್‌ -ರಿಲಯನ್ಸ್‌ ಒಪ್ಪಂದವನ್ನು ತಡೆ ಹಿಡಿಯಲು ಈ ಹಿಂದೆ ಮಧ್ಯಂತರವಾಗಿ ತುರ್ತು ಆದೇಶವನ್ನು ದೆಹಲಿ ಹೈಕೋರ್ಟ್‌ ಹೊರಡಿಸಿತ್ತು.

ಫ್ಯೂಚರ್‌ ರಿಟೇಲ್‌, ಫ್ಯೂಚರ್‌ ಕೂಪನ್ಸ್‌, ಕಿಶೋರ್‌ ಬಿಯಾನಿ ಮತ್ತು ಇತರರು ತುರ್ತು ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಜೆ ಆರ್‌ ಮಿಧಾ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ. ಅಲ್ಲದೆ, ಫ್ಯೂಚರ್‌ ಸಮೂಹಕ್ಕೆ 20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡುವಂತೆ ಸುಪ್ರೀಂಕೋರ್ಟ್ ತಿಳಿಸಿದೆ.

ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್ ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್

ಫ್ಯೂಚರ್‌ ರಿಟೇಲ್‌, ಫ್ಯೂಚರ್‌ ಕೂಪನ್ಸ್‌, ಕಿಶೋರ್‌ ಬಿಯಾನಿ ಮತ್ತು ಇತರರು ತುರ್ತು ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಜೆ ಆರ್‌ ಮಿಧಾ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ. ಬಿಯಾನಿ ಮತ್ತು ಇತರರಿಗೆ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿರುವ ನ್ಯಾಯಾಲಯವು ಅವರನ್ನು ಏಕೆ ಕಾರಾಗೃಹದಲ್ಲಿ ಇಡಬಾರದು ಎಂದು ಪ್ರಶ್ನಿಸಿದೆ.

   Dinesh Kallahalli ಯಾರೋ ಹೇಳಿದಕ್ಕೆ ನಾನು ಆ ಅಸಯ್ಯದ ಕೆಲಸ ಮಾಡಿಬಿಟ್ಟೆ | Oneindia Kannada

   ಎಫ್‌ಆರ್‌ಎಲ್‌ನ ಷೇರುದಾರ ಮತ್ತು ಶೇ 49 ಪಾಲನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಿಗೆ, ಅನುಮತಿ ಇಲ್ಲದೆ ಫ್ಯೂಚರ್ ಕೂಪನ್ಸ್ ಲಿಮೆಟೆಡ್ ಜೊತ ರಿಲಯನ್ಸ್ ಒಪ್ಪಂದ ಮಾಡಿಕೊಂಡಿದ್ದನ್ನು ಅಮೆಜಾನ್ ಪ್ರಶ್ನಿಸಿತ್ತು. draft scheme of arrangement ಮಾದರಿ ಪ್ರಸ್ತಾವಿಕ ವ್ಯವಹಾರವನ್ನು ಪರಿಗಣಿಸುವಂತೆ ನ್ಯಾಯಾಲಯದಲ್ಲಿ ಅಮೆಜಾನ್ ವಾದಿಸಿತ್ತು. ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ. ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ.

   English summary
   Delhi High Court on Thursday upheld the Emergency Award passed against the $3.4-billion Future-Reliance deal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X