ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಪ್ರತಿ 3 ಕಿ.ಮೀ. ಅಂತರದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ ಸ್ಟೇಷನ್

|
Google Oneindia Kannada News

ನವದೆಹಲಿ, ಫೆಬ್ರವರಿ 05: ಪ್ರತಿ 3 ಕಿ.ಮೀ.ನಂತೆ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ ಸ್ಟೇಷನ್ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಗುರುವಾರ ಜಾಗತಿಕ ಶೃಂಗಸಭೆಯಲ್ಲಿ ಹೇಳಿದ್ದಾರೆ.

ವಿಶ್ವಬ್ಯಾಂಕ್ ಮತ್ತು ಡಬ್ಲ್ಯುಆರ್‌ಐ ರಾಸ್ ಸೆಂಟರ್ ಆಯೋಜಿಸಿದ್ದ ಜಾಗತಿಕ ಸಮಾರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ನೀತಿಯನ್ನು ವಿವರಿಸಿದ ರಾಜ್ಯ ಸಾರಿಗೆ ಸಚಿವ, 3 ಕಿ.ಮೀ ದೂರದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ಎಂಜಿನ್‌ನಲ್ಲಿ ದೋಷ: 1,577 ಥಾರ್ ಕಾರುಗಳನ್ನು ಹಿಂಪಡೆದ ಮಹೀಂದ್ರಾಎಂಜಿನ್‌ನಲ್ಲಿ ದೋಷ: 1,577 ಥಾರ್ ಕಾರುಗಳನ್ನು ಹಿಂಪಡೆದ ಮಹೀಂದ್ರಾ

ಮುಂದಿನ ಐದು ವರ್ಷಗಳವರೆಗೆ ದೆಹಲಿ ಸರ್ಕಾರವು ಬಹಳ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ನಗರದಲ್ಲಿ ಒಟ್ಟು ವಾಹನ ನೋಂದಣಿಯಲ್ಲಿ ಶೇಕಡಾ 25ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲು ಗುರಿಯನ್ನ ಹೊಂದಿದೆ ಎಂದು ಹೇಳಿದ್ದಾರೆ.

Delhi Aims To Set Up EV Charging Station In Every 3 KM Distance

''2020ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ದೆಹಲಿ ಎಲೆಕ್ಟ್ರಿಕ್ ವಾಹನಗಳ ಪಾಲಿಸಿಯಡಿಯಲ್ಲಿ ದೆಹಲಿಯಲ್ಲಿ ಸುಮಾರು 6,000 ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನಾವು ಸಬ್ಸಿಡಿ ಮತ್ತು ಪ್ರೋತ್ಸಾಹ ನೀಡಿದ್ದೇವೆ ಇದರಿಂದ ಹೆಚ್ಚಿನ ಜನರು ಪ್ರೇರಿತರಾಗುತ್ತಾರೆ "ಎಂದು ಅವರು ಹೇಳಿದರು.

ಇದರ ಜೊತೆಗೆ ಖಾಸಗಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲು ಬಯಸುವ ಯಾವುದೇ ವ್ಯಕ್ತಿಗೆ ನಾವು ಖರೀದಿ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ ಎಂದು ಗಹ್ಲೋಟ್ ಹೇಳಿದರು.

English summary
Transport Minister Kailash Gahlot on Thursday detailed the electric vehicle (EV) policy at a global summit and said the Delhi government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X