ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಿಗೆ ಸಿಹಿಸುದ್ದಿ; ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ

|
Google Oneindia Kannada News

ನವದೆಹಲಿ, ಜೂ. 13: ಮೇ ತಿಂಗಳ ಚಿಲ್ಲರೆ ಹಣದುಬ್ಬರವು ಶೇಕಡಾ 7.04 ರಷ್ಟಾಗಿದೆ ಎಂದು ಸೋಮವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳು ಹೇಳಿವೆ. ಹಣದುಬ್ಬರವು ಏಪ್ರಿಲ್‌ನಲ್ಲಿ ದಾಖಲಾದ ಸುಮಾರು 8 ವರ್ಷಗಳ ಗರಿಷ್ಠ 7.79 ಶೇಕಡಾದಿಂದ ಕಡಿಮೆಯಾಗಿದೆ.

ರಾಷ್ಟ್ರೀಯ ಅಂಕಿ ಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಚಿಲ್ಲರೆ ಹಣದುಬ್ಬರವು ಈ ವರ್ಷದ ಮೇ ತಿಂಗಳಲ್ಲಿ ಶೇಕಡಾ 7.97 ರಷ್ಟಿತ್ತು. ಇದು ಹಿಂದಿನ ತಿಂಗಳಿನಲ್ಲಿ ಶೇಕಡಾ 8.31 ಕ್ಕಿಂತ ಸ್ವಲ್ಪ ಕಡಿಮೆಯಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ವಾರ ಪ್ರಸಕ್ತ ಹಣಕಾಸು ವರ್ಷದ ಹಣದುಬ್ಬರ ಸೂಚನೆಯನ್ನು ಏಪ್ರಿಲ್‌ನಲ್ಲಿ 5.7 ಶೇಕಡಾ ಮುನ್ಸೂಚನೆಯಿಂದ ಶೇಕಡಾ 6.7ಕ್ಕೆ ಹೆಚ್ಚಿಸಿದ ನಂತರ ಈ ಇಳಿಕೆ ನಡೆದಿದೆ.

ಚಿನ್ನ ಎನ್ನುವ ಮುನ್ನ ಎಚ್ಚರ: ಜೂನ್ 11ರಂದು ಅಷ್ಟಾಗಿದೆ ಬಂಗಾರ-ಬೆಳ್ಳಿ ದರ! ಚಿನ್ನ ಎನ್ನುವ ಮುನ್ನ ಎಚ್ಚರ: ಜೂನ್ 11ರಂದು ಅಷ್ಟಾಗಿದೆ ಬಂಗಾರ-ಬೆಳ್ಳಿ ದರ!

ಏತನ್ಮಧ್ಯೆ ಇಂಧನ, ತರಕಾರಿಗಳು ಮತ್ತು ಅಡುಗೆ ಎಣ್ಣೆಯವರೆಗಿನ ಎಲ್ಲಾ ವಸ್ತುಗಳ ಬೆಲೆಯ ಏರಿಕೆಯು ಸಗಟು ಬೆಲೆ ಹಣದುಬ್ಬರವು ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 15.08 ಶೇಕಡಾಕ್ಕೆ ಮತ್ತು ಚಿಲ್ಲರೆ ಹಣದುಬ್ಬರವು ಸುಮಾರು ಎಂಟು ವರ್ಷಗಳ ಗರಿಷ್ಠ ಮಟ್ಟವಾದ 7.79 ಶೇಕಡ ಇತ್ತು. ಚಿಲ್ಲರೆ ಖರೀದಿದಾರರ ದೃಷ್ಟಿಕೋನದಿಂದ ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕ (CPI)ವು ಬೆಲೆಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ.

Decline in Retail Inflation in India

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಣದುಬ್ಬರದ ಅಪಾಯವು ಮುಂದುವರೆದಿದೆ. ಟೊಮೆಟೋ ಬೆಲೆಗಳ ಇತ್ತೀಚಿನ ಏರಿಕೆಯು ಆಹಾರ ಹಣದುಬ್ಬರವನ್ನು ಹೆಚ್ಚಿಗೆ ಮಾಡಿವೆ. ಅಲ್ಲದೆ, ಹೆಚ್ಚಿನ ಜಾಗತಿಕ ಕಚ್ಚಾ ತೈಲ ಬೆಲೆಯು ಹಣದುಬ್ಬರದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದ ದ್ವೀಪರಾಷ್ಟ್ರ ಶ್ರೀಲಂಕಾಗೆ ಬೆಳಕು ನೀಡಿದ್ದೇ ಭಾರತಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದ ದ್ವೀಪರಾಷ್ಟ್ರ ಶ್ರೀಲಂಕಾಗೆ ಬೆಳಕು ನೀಡಿದ್ದೇ ಭಾರತ

ದೇಶಿಯ ಚಿಲ್ಲರೆ ಹಣದುಬ್ಬರವು ಸತತವಾಗಿ ನಾಲ್ಕು ತಿಂಗಳ ಕಾಲ ಆರ್‌ಬಿಐನ ಸಾಮಾನ್ಯ ಮಟ್ಟವಾದ 6 ಪ್ರತಿಶತಕ್ಕಿಂತ ಹೆಚ್ಚಿರುವುದರಿಂದ ಹಣದುಬ್ಬರ ಸೂಚನೆಯಲ್ಲಿ ಮೇಲ್ಮುಖವಾದ ಏರಿಕೆ ಕಂಡು ಬರುತ್ತದೆ. ಮುಖ್ಯವಾಗಿ ರಷ್ಯಾ-ಉಕ್ರೇನ್ ಯುದ್ಧವು ಜಗತ್ತಿನಾದ್ಯಂತ ಸರಕುಗಳ ಬೆಲೆಗಳ ಏರಿಕೆ ಮೇಲೆ ಪ್ರಭಾವ ಬೀರಿದೆ.

ದ್ವೈಮಾಸಿಕ ವಿತ್ತೀಯ ನೀತಿಯಲ್ಲಿ ಶಕ್ತಿಕಾಂತ್‌ ದಾಸ್ ನಡೆಯುತ್ತಿರುವ ಹಣಕಾಸು ವರ್ಷದಲ್ಲಿ ಹಣದುಬ್ಬರ ಸೂಚಕವನ್ನು ಶೇಕಡಾ 6.7ಕ್ಕೆ ಹೆಚ್ಚಿಸಿದ್ದಾರೆ. ಇದು ಜೂನ್ ತ್ರೈಮಾಸಿಕದಲ್ಲಿ ಹಣದುಬ್ಬರವನ್ನು 7.5 ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 7.4 ಎಂದು ಅಂದಾಜು ಮಾಡಿದೆ. ಹಣದುಬ್ಬರವು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 6.2ಕ್ಕೆ ಇಳಿಯುವ ನಿರೀಕ್ಷೆಯಿದ್ದು, ಈ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 5.8 ಶೇಕಡಾಕ್ಕೆ ಇಳಿಯುತ್ತದೆ ಎನ್ನಲಾಗಿದೆ.

Decline in Retail Inflation in India

ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಖಾರಿಫ್ ಬಿತ್ತನೆ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಜಾಗತಿಕ ಭೌಗೋಳಿಕ- ರಾಜಕೀಯ ಪರಿಸ್ಥಿತಿಯು ದ್ರವವಾಗಿ ಉಳಿದಿದ್ದು, ಸರಕು ಮಾರುಕಟ್ಟೆ ಅಂಚಿನಲ್ಲಿ ಉಳಿದಿದೆ ಎಂದು ದಾಸ್ ಹೇಳಿದರು.

ಆರ್‌ಬಿಐ ಏಪ್ರಿಲ್‌ನಲ್ಲಿ ತನ್ನ ವಿತ್ತೀಯ ನೀತಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 5.7ರಷ್ಟಿದೆ, ಪ್ರಥಮ ತ್ರೈಮಾಸಿಕದಲ್ಲಿ ಶೇಕಡಾ 6.3, ದ್ವಿತೀಯ ತ್ರೈಮಾಸಿಕದಲ್ಲಿ 5.8, ತೃತೀಯ ತ್ರೈಮಾಸಿಕದಲ್ಲಿ 5.4 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 5.1 ಶೇಕಡಾ ಆಗಿತ್ತು. ಆರ್‌ಬಿಐ ಹಣದುಬ್ಬರವನ್ನು ಶೇಕಡ 4 ರಲ್ಲಿ ಇರಿಸಲು ಬದ್ಧತೆಯನ್ನು ಹೊಂದಿದೆ.

English summary
Retail inflation in May was 7.04 per cent, government data released Monday showed. Inflation eased to an eight-year high of 7.79 percent in April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X