ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಷೇರುಪೇಟೆ ತಲ್ಲಣ; ಕೊಚ್ಚಿಹೋಯಿತು 2.2 ಲಕ್ಷ ಕೋಟಿ ಸಂಪತ್ತು

|
Google Oneindia Kannada News

ಭಾರತೀಯ ಷೇರು ಮಾರುಕಟ್ಟೆ ಪಾಲಿಗೆ ಶುಕ್ರವಾರ (ಡಿಸೆಂಬರ್ 21) ಕರಾಳವಾಗಿತ್ತು. ಜಾಗತಿಕ ಮಾರುಕಟ್ಟೆಯ ಪರಿಣಾಮ, ಅಮೆರಿಕ ಸರಕಾರದ ಸ್ಥಗಿತ ಸಾಧ್ಯತೆ ಹಾಗೂ ಅಮೆರಿಕ ಫೆಡರಲ್ ರಿಸರ್ವ್ ನಿಂದ ಮುಂದಿನ ವರ್ಷ ಮತ್ತಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇರುವುದರಿಂದ ಸೆನ್ಸೆಕ್ಸ್ 689.60 ಹಾಗೂ ನಿಫ್ಟಿ 197.70 ಅಂಶಗಳ ಕುಸಿತ ಕಂಡಿತು. 2.2 ಲಕ್ಷ ಕೋಟಿ ಸಂಪತ್ತು ಕೊಚ್ಚಿಹೋಯಿತು.

ಆ ಮೂಲಕ ದಿನಾಂತ್ಯಕ್ಕೆ ಸೆನ್ಸೆಕ್ಸ್ 35,742.07 ಮತ್ತು ನಿಫ್ಟಿ ಸೂಚ್ಯಂಕ 10,754 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ದಿನದ ಕನಿಷ್ಠ ಮಟ್ಟದಲ್ಲಿ ಸೆನ್ಸೆಕ್ಸ್ 730 ಅಂಶ ಹಾಗೂ ನಿಫ್ಟಿ 200 ಅಂಶಗಳ ಕುಸಿತ ಕಂಡಿತ್ತು. ಫೈನಾನ್ಷಿಯಲ್ ಹಾಗೂ ಮಾಹಿತಿ ತಂತ್ರಜ್ಞಾನ ಕಂಪನಿ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿದವು.

ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ: ಷೇರು ಸೂಚ್ಯಂಕ ಗಡಗಡಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ: ಷೇರು ಸೂಚ್ಯಂಕ ಗಡಗಡ

ನಿಫ್ಟಿ ಸೂಚ್ಯಂಕದ ಐವತ್ತು ಗುಚ್ಛಗಳನ್ನು ಒಳಗೊಂಡ ಷೇರುಗಳ ಪೈಕಿ ನಲವತ್ತೈದು ಇಳಿಕೆ ದಾಖಲಿಸಿದವು. ಇಂಡಿಯನ್ ಆಯಿಲ್, ಯುಪಿಎಲ್, ಅದಾನಿ ಪೋರ್ಟ್ಸ್, ಝೀಲ್, ಮಾರುತಿ ಕಂಪನಿ ಷೇರುಗಳು ಅತಿ ಹೆಚ್ಚು ನಷ್ಟ ಅನುಭವಿಸಿದವು.

Dalal Street lost Rs 2.2 lakh crore on Friday

ಇನ್ನು ಸೆನ್ಸೆಕ್ಸ್ ನಲ್ಲಿ ವಿಪ್ರೋ, ಅದಾನಿ ಪೋರ್ಟ್ಸ್, ಮಾರುತಿ, ಇನ್ಫೋಸಿಸ್, ಟಿಸಿಎಸ್ ಹಾಗೂ ಭಾರ್ತಿ ಏರ್ ಟೆಲ್ ಷೇರುಗಳ ಬೆಲೆಗಳು ನೆಲ ಕಚ್ಚಿದವು.

English summary
Equity investors on Dalal Street lost Rs 2.2 lakh crore on Friday as a sudden downturn in the benchmark indices cut combined market capitalisation of the BSE-listed companies to Rs 143.30 lakh crore from Rs 145.56 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X