ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದ್ಧೂರಿ ಬಿಡುಗಡೆ ಕಂಡ ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್'

|
Google Oneindia Kannada News

ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್' ಅದ್ಧೂರಿ ಬಿಡುಗಡೆ ಕಂಡಿದೆ. ಟಿಕ್‌ಟಾಕ್ ವಿಡಿಯೋ ಆ್ಯಪ್ ನಿಷೇಧಗೊಂಡ ಬಳಿಕ ಬೇಸರದಲ್ಲಿದ್ದವರಿಗೆ ಈ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್' ಕಂಡಿತವಾಗಿಯೂ ಖುಷಿ ನೀಡಲಿದೆ.

ಬುಧವಾರ ಮಧ್ಯಾಹ್ನ 1 ಗಂಟೆಗೆ ಆ್ಯಪ್ 'ಜೋಷ್' ವಿಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಒಟ್ಟು 10 ಭಾಷೆಯಲ್ಲಿ ಈ ವಿಡಿಯೋ ಆ್ಯಪ್ ಲಭ್ಯವಿರಲಿದೆ. ಈಗಾಗಲೇ 201 ಲೈಕ್ಸ್‌ಗಳು ಬಂದಿವೆ. ಭಾರತದ ನಂಬರ್ ಒನ್ ಟ್ರೆಂಡಿಂಗ್ ಶಾರ್ಟ್ ವಿಡಿಯೋ ಆ್ಯಪ್ ಇದಾಗಿದೆ.

ಡೈಲಿಹಂಟ್ ನ ಸಂಸ್ಥಾಪಕರಾದ ವೀರೇಂದ್ರ ಗುಪ್ತಾ ಅವರು ಮಾತನಾಡಿ, ಜೋಷ್ ಮೂರು ದೊಡ್ಡ ಭರವಸೆಗಳಿಗೆ ನಮ್ಮ ಬದ್ಧತೆಯ ಅಭಿವ್ಯಕ್ತಿಯಾಗಿದೆ. ಮೊದಲನೆಯದಾಗಿ, ಡಿಜಿಟಲ್ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳಲ್ಲಿ ನಮ್ಮ ಪಾಲ್ಗೊಳ್ಳುವಿಕೆಯ ಪಾತ್ರ ವಹಿಸುವುದು, ಎರಡನೆಯದಾಗಿ, ನಮ್ಮ ದೇಶದ ಪ್ರತಿಯೊಂದು ಮೂಲೆಮೂಲೆಯಲ್ಲಿಯೂ ಇರುವ ದೊಡ್ಡ ಮತ್ತು ದೇಸೀಯವಾದ ಪರಿಸರ ವ್ಯವಸ್ಥೆಯಲ್ಲಿನ ಪ್ರತಿಭಾನ್ವಿತ ಕ್ರಿಯೇಟರ್ ಗಳನ್ನು ಸಬಲೀಕರಣಗೊಳಿಸುವುದು.

ಮೂರನೆಯದಾಗಿ, ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಉತ್ತೇಜನಗೊಳಿಸುವುದು ಮತ್ತು ಅದನ್ನು ದೊಡ್ಡ ಮಟ್ಟದಲ್ಲಿ ಕಾರ್ಯರೂಪಕ್ಕೆ ತರುವುದಾಗಿದೆ. ಜೋಶ್ ನಂತಹ ಪ್ಲಾಟ್ ಫಾರ್ಮ್ ನ ಯಶಸ್ಸು ಭಾರತ್ ನ ಯಶಸ್ಸಾದಂತೆ'' ಎಂದು ಅಭಿಪ್ರಾಯಪಟ್ಟರು.

Dailyhunt Launched Indias Short Video Application Josh

ಆತ್ಮ ನಿರ್ಭರ ಎನ್ನುವುದು ಮಂತ್ರವಾಗಿದ್ದು, ದೇಶದಲ್ಲೇ ಅಭಿವೃದ್ಧಿಪಡಿಸಿರುವ ಅಪ್ಲಿಕೇಷನ್ ಇದಾಗಿದೆ. ಈ ಕುರಿತು ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತಾ ಮಾತನಾಡಿ, 'ಹೌ ಈಸ್ ದಿ ಜೋಷ್ ' ಈ ಡೈಲಾಗ್‌ನ್ನು ಎಲ್ಲರೂ ನೀವು ಕೇಳಿಯೇ ಇರುತ್ತೀರಾ, ಇದನ್ನ ಕೇಳಿದರೆ ದೇಶಪ್ರೇಮ ಮತ್ತೊಮ್ಮೆ ಜಾಗೃತವಾಗುತ್ತದೆ. ಹಾಗೆಯೇ ನಾವು ಅಭಿವೃದ್ಧಿಪಡಿಸಿರುವ ಈ ಜೋಷ್ ಅಪ್ಲಿಕೇಷನ್ ಕೂಡ ದೇಶದ ಜನರಿಗಾಗಿಯೇ ಅಭಿವೃದ್ಧಿಪಡಿಸಲಾಗಿದೆ' ಜನರಿಗಾಗಿಯೇ ಅಭಿವೃದ್ಧಿಪಡಿಸಲಾಗಿದ್ದು, ಜೋಷ್ ಎನ್ನುವ ಮಂತ್ರ ಎಲ್ಲರ ಬಾಯಲ್ಲಿರುವಂತೆ ಆಗಲಿದೆಎಂದು ಹೇಳಿದರು.

ಭಾರತವು ಸಂಪದ್ಭರಿತವಾಗಿದೆ, ಉತ್ತಮ ಸಂಸ್ಕೃತಿಯನ್ನು ಹೊಂದಿದೆ, ಹೊಸ ಹೊಸ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಹಾಗೆಯೇ ಆತ್ಮ ನಿರ್ಭರ ಭಾರತದಡಿ ಡೈಲಿಹಂಟ್ ಈ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಒಟ್ಟು 10 ಭಾಷೆಗಳಲ್ಲಿ ಈ ಅಪ್ಲಿಕೇಷನ್ ಲಭ್ಯವಾಗಲಿದೆ.

ಡೈಲಿಹಂಟ್ ನ ಸಹ-ಸಂಸ್ಥಾಪಕ ಉಮಂಗ್ ಬೇಡಿ ಅವರು ಮಾತನಾಡಿ, ದೇಶದ ಅತ್ಯುತ್ತಮ ಕ್ರಿಯೇಟರ್ ಗಳು, ಅತಿ ದೊಡ್ಡ ಮ್ಯೂಸಿಕ್ ಲೇಬಲ್ ಗಳು, ಹಾಟ್ ಎಂಟರ್ ಟೇನ್ಮೆಂಟ್ ಮಾದರಿ, ಅಸಾಧಾರಣವಾದ ಬಳಕೆದಾರ ಜನಸಂಖ್ಯಾಶಾಸ್ತ್ರ ಮತ್ತು ಅತಿ ದೊಡ್ಡ ಸ್ಥಳೀಯ ಭಾಷೆಯ ಪ್ಲಾಟ್ ಫಾರ್ಮ್ ಆಗುವ ಮೂಲಕ ಜೋಶ್ ಒಂದು ಮಹಾಘಟ ಬಂಧನವಾಗಿದೆ.

ಇದು ನಿಜವಾಗಿಯೂ ಭಾರತ್ ಗಾಗಿ, ಭಾರತ್ ನಿಂದ ಭಾರತ ನಿರ್ಮಿತವಾಗಿದ್ದು, 10 ಭಾರತೀಯ ಭಾಷೆಗಳಲ್ಲಿ ಕಿರು ವಿಡಿಯೋ ಪ್ಲಾಟ್ ಫಾರ್ಮ್ ಆಗಿದೆ. ಅದು ಅಗಾಧವಾದ ಜನಪ್ರಿಯತೆಯನ್ನು ಗಳಿಸಿರುವುದಕ್ಕೆ ನಮಗೆ ಅತ್ಯಂತ ಆನಂದ ಉಂಟಾಗಿದೆ'' ಎಂದು ತಿಳಿಸಿದರು.

English summary
Josh Is the India's best “Made in India” short videos app to enjoy the most viral & trending short videos in your own Language that you can watch anytime anywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X