• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿಂಡಿಗಲ್ ಬಿರಿಯಾನಿಗೆ ಶುಕ್ರದೆಸೆ: 260 ಕೋಟಿ ರೂಗೆ ಷೇರು ಮಾರಾಟ

|

ಬೆಂಗಳೂರು, ಅಕ್ಟೋಬರ್ 21: ತಮಿಳುನಾಡು ಮೂಲದ ಪ್ರಸಿದ್ಧ ದಿಂಡಿಗಲ್ ದಲಪ್ಪಕಟ್ಟಿ ಬಿರಿಯಾನಿಗೆ ಭರ್ಜರಿ ಬೇಡಿಕೆ ಕುದುರಿದೆ. ಖಾಸಗಿ ಈಕ್ವಿಟಿ ಸಂಸ್ಥೆ ಸಿಎಕ್ಸ್ ಪಾರ್ಟ್‌ನರ್ಸ್ ಡಿಂಡಿಗಲ್ ಬಿರಿಯಾನಿ ರೆಸ್ಟೋರೆಂಟ್‌ನ ಬಹುಪಾಲು ಷೇರನ್ನು (ಶೇ 50.1) 260 ಕೋಟಿ ರೂ.ಗೆ ಖರೀದಿಸಿದೆ.

ಭಾರತದ ಸ್ಥಳೀಯ ರೆಸ್ಟೋರೆಂಟ್ ಸರಪಣಿಯೊಂದರಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ ಹೂಡಿಕೆಯಾಗಿದೆ. ತಮಿಳುನಾಡಿನ ತಿನಿಸುಗಳಲ್ಲಿ ದಿಂಡಿಗಲ್ ಬಿರಿಯಾನಿ ಖ್ಯಾತಿ ಗಳಿಸಿದೆ. 1957ರಲ್ಲಿ ತಮಿಳುನಾಡಿನ ಸಣ್ಣ ಪಟ್ಟಣವೊಂದರಲ್ಲಿ ಚಿಕ್ಕದಾಗಿ ಆರಂಭವಾಗಿದ್ದ ದಿಂಡಿಗಲ್ ಬಿರಿಯಾನಿ ರೆಸ್ಟೋರೆಂಟ್, ಪ್ರಸ್ತುತ ಅದರ ವಿಸ್ತರಣೆಗಾಗಿ ಹೊಸದಾಗಿ ಹೂಡಿರುವ ಬಂಡವಾಳವನ್ನು ಹೊರತುಪಡಿಸಿಯೂ ಸುಮಾರು 600 ಕೋಟಿ ರೂ. ಮೌಲ್ಯ ಹೊಂದಿದೆ.

ದಿಂಡಿಗಲ್ ದಲಪ್ಪಕಟ್ಟಿ ರೆಸ್ಟೋರೆಂಟ್‌ನ ಮಾಲೀಕರು ಈ ಬಂಡವಾಳವನ್ನು ಭಾರತದ ಇತರೆಡೆ ಹಾಗೂ ವಿದೇಶಗಳಲ್ಲಿ ಸಮೂಹದ ವಿಸ್ತರಣೆಗೆ ಬಳಸಿಕೊಳ್ಳುತ್ತಿದ್ದಾರೆ. ಹೈದರಾಬಾದಿ ಬಿರಿಯಾನಿ ಮತ್ತು ಲಕ್ನೋಯಿ ಬಿರಿಯಾನಿಗಳಿಗಿಂತ ವಿಭಿನ್ನ ಹಾಗೂ ಸ್ಥಳೀಯವಾಗಿ ಬಿರಿಯಾನಿ ತಯಾರಿಸುವುದರಲ್ಲಿ ಈ ರೆಸ್ಟೋರೆಂಟ್ ಹೆಸರುವಾಸಿ. ಹೀಗಾಗಿ ಇದು ಇತರೆ ಬಿರಿಯಾನಿ ಖಾದ್ಯಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಬೆಂಗಳೂರಿಗೂ ಬಿತ್ತು ಆರ್ಥಿಕ ಹಿಂಜರಿತದ ಪೆಟ್ಟು; ಮಕಾಡೆ ಮಗುಚಿದ ಕೈಗಾರಿಕೆಗಳು

ಬಾರ್ಬೆಕ್ಯೂ ನೇಷನ್‌ದಂತಹ ಸರಪಣಿ ರೆಸ್ಟೋರೆಂಟ್‌ಗಳಲ್ಲಿ ಕೂಡ ಹೂಡಿಕೆ ಮಾಡಿರುವ ಸಿಎಕ್ಸ್ ಪಾರ್ಟ್‌ನರ್ಸ್ ಸಂಸ್ಥೆಯು ದಿಂಡಿಗಲ್ ಬಿರಿಯಾನಿ ರೆಸ್ಟೋರೆಂಟ್ ಸಮೂಹದ ಆಡಳಿತವನ್ನು ಮತ್ತಷ್ಟು ವೃತ್ತಿಪರಗೊಳಿಸಲು ನೆರವು ನೀಡಲಿದೆ.

37ರ ನಾಗಸ್ವಾಮಿ ಮಾಲೀಕ

37ರ ನಾಗಸ್ವಾಮಿ ಮಾಲೀಕ

ದಿಂಡಿಗಲ್ ಬಿರಿಯಾನಿ ಸಮೂಹಕ್ಕೆ 37 ವರ್ಷದ ಡಿ. ನಾಗಸ್ವಾಮಿ ಮಾಲೀಕರಾಗಿದ್ದು, ಇದನ್ನು ಅವರ ಅಜ್ಜ ಆರಂಭಿಸಿದ್ದರು. ಅರ್ಧದಷ್ಟು ಷೇರುಗಳನ್ನು ಸಿಎಕ್ಸ್ ಪಾರ್ಟ್‌ನರ್ಸ್ ಖರೀದಿಸಿದ್ದರೂ, ನಾಗಸ್ವಾಮಿ ಅವರೇ ರೆಸ್ಟೋರೆಂಟ್ ಸಮೂಹವನ್ನು ನಡೆಸಲಿದ್ದಾರೆ. 2009ರಲ್ಲಿ ಲಂಡನ್‌ನಲ್ಲಿ ಆತಿಥ್ಯ ನಿರ್ವಹಣೆಯಲ್ಲಿ ಎಂಬಿಎ ಪದವಿ ಪಡೆದು ಮರಳಿದ ನಾಗಸ್ವಾಮಿ, ತಮ್ಮ ರೆಸ್ಟೋರೆಂಟ್‌ನ ಔಟ್ಲೆಟ್‌ಗಳನ್ನು ವಿಸ್ತರಿಸಲು ಆರಂಭಿಸಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಅವರು ಫ್ರಾನ್ಸ್, ಸಿಂಗಪುರ, ಅಮೆರಿಕ, ದುಬೈ ಮತ್ತು ಶ್ರೀಲಂಕಾದಲ್ಲಿ ಒಟ್ಟು 7 ಹೋಟೆಲ್ ಸೇರಿದಂತೆ 64 ಶಾಖೆಗಳನ್ನು ತೆರೆದಿದ್ದಾರೆ.

ದಕ್ಷಿಣ ಭಾರತದಲ್ಲಿ ಮಾರುಕಟ್ಟೆ

ದಕ್ಷಿಣ ಭಾರತದಲ್ಲಿ ಮಾರುಕಟ್ಟೆ

'ನಾವು ತಮಿಳು ಜನರನ್ನು ಮಾತ್ರ ಆಕರ್ಷಿಸುತ್ತಿಲ್ಲ. ಇಡೀ ದಕ್ಷಿಣ ಭಾರತ ಇಷ್ಟಪಡುತ್ತಿದೆ. ಅಮೆರಿಕವು ನಮಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಕ್ಯಾಲಿಫೋರ್ನಿಯಾದ ಮಿಲಿಪಟಾಸ್‌ನಲ್ಲಿ ಇರುವ ನಮ್ಮ ಏಕೈಕ ರೆಸ್ಟೋರೆಂಟ್, ತಿಂಗಳಿಗೆ 2 ಕೋಟಿ ರೂ. ಆದಾಯ ಸೃಷ್ಟಿಸುತ್ತಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ದೊಡ್ಡ ಬ್ರ್ಯಾಂಡ್ ಸ್ಥಾಪನೆಯಾಗಿದೆ' ಎಂದು ನಾಗಸ್ವಾಮಿ ತಿಳಿಸಿದ್ದಾರೆ.

ಸ್ಟೋನಿ ಬ್ರೂಕ್‌ನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತು ರುಚಿ ಭೋಜನ ಸವಿಯಿರಿ

200 ಶಾಖೆಗಳಿಗೆ ವಿಸ್ತರಣೆ

200 ಶಾಖೆಗಳಿಗೆ ವಿಸ್ತರಣೆ

ಹೊಸ ಬಂಡವಾಳದ ಹರಿವಿನೊಂದಿಗೆ ರೆಸ್ಟೋರೆಂಟ್ ಸಮೂಹವು ಭಾರತದಲ್ಲಿಯೇ ತನ್ನ ಶಾಖೆಗಳನ್ನು 200ಕ್ಕೆ ವಿಸ್ತರಿಸಲು ಗುರಿ ಹೊಂದಿದೆ. ಅದರಲ್ಲಿ ದಕ್ಷಿಣ ಭಾರತಕ್ಕೆ ಹೆಚ್ಚಿನ ಗಮನ ನೀಡಲಾಗುತ್ತದೆ. ಪುಣೆ, ದೆಹಲಿ ಮತ್ತು ಕೋಲ್ಕತಾಗಳಿಗೆ ಕೂಡ ಆದ್ಯತೆ ಕೊಡಲಾಗುತ್ತದೆ. ದುಬೈ, ಶ್ರೀಲಂಕಾ ಹಾಗೂ ಅಮೆರಿಕವನ್ನು ಮುಖ್ಯವಾಗಿ ಕೇಂದ್ರವಾಗಿಟ್ಟುಕೊಂಡು ವಿದೇಶಗಳಲ್ಲಿ 25ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ಹರಿಯುವ ನೀರಿನ ಝುಳು ಝುಳು ನಾದವುಳ್ಳ ಸ್ಟ್ರೀಂ ರೆಸ್ಟೋರೆಂಟ್‌ ಓಪನ್

350 ಕೋಟಿ ರೂ. ಆದಾಯದ ನಿರೀಕ್ಷೆ

350 ಕೋಟಿ ರೂ. ಆದಾಯದ ನಿರೀಕ್ಷೆ

ದಿಂಡಿಗಲ್ ದಲಪ್ಪಕಟ್ಟಿ ಲಾಭದಾಯಕವಾಗಿ ನಡೆಯುತ್ತಿದ್ದು, 2019ರ ಮಾರ್ಚ್ ಹಣಕಾಸು ವರ್ಷಾಂತ್ಯಕ್ಕೆ 250 ಕೋಟಿ ರೂ. ಆದಾಯ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ 350 ಕೋಟಿ ರೂ. ಆದಾಯದ ನಿರೀಕ್ಷೆ ಹೊಂದಲಾಗಿದೆ. ಅದರ ಆದಾಯದಲ್ಲಿ ಕಳೆದ ವರ್ಷ 60 ಕೋಟಿ ರೂ. ವಿದೇಶಿ ಶಾಖೆಗಳಿಂದ ಬಂದಿತ್ತು. ಅದರಲ್ಲಿ ಶೇ 50ರಷ್ಟು ಆದಾಯವು ಬಿರಿಯಾನಿ ತಿನಿಸುಗಳಿಂದಲೇ ದೊರೆತಿದೆ.

English summary
Private equity firm CX Partners has bought Rs 260 Crore with 50.1 per cent stake of Dindigul Thalappakatti Biriyani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X