ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸ್ಟಮ್ಸ್ ಸುಂಕ ಏರಿಕೆ, ಮೊಬೈಲ್ ಫೋನ್ ದುಬಾರಿ

|
Google Oneindia Kannada News

ಮೊಬೈಲ್ ಫೋನ್ ಬೆಲೆಗಳಲ್ಲಿ ಏರಿಕೆ ಆಗುವುದು ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಖಾತ್ರಿ ಆಗಿದೆ. ಏಕೆಂದರೆ ಪರೋಕ್ಷ ತೆರಿಗೆ (ಇನ್ ಡೈರೆಕ್ಟ್ ಟ್ಯಾಕ್ಸ್) ಜಿಎಸ್ ಟಿ ಅಡಿ ಬಂದ ಮೇಲೆ ಕಸ್ಟಮ್ಸ್ ಸುಂಕದ ಏರಿಳಿತ ಮಾಡುವ ಅವಕಾಶ ಕೇಂದ್ರ ಹಣಕಾಸು ಸಚಿವರಿಗೆ ಇತ್ತು. ಅದನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆ ಕೂಡ ನಿಜವಾಗಿದೆ.

ಅಲ್ಲಿಗೆ ಮೊಬೈಲ್ ಫೋನ್ ಗಳ ಬೆಲೆ ಹೆಚ್ಚಾಗುವುದು ಸ್ಪಷ್ಟವಾಗಿದೆ. ಹಾಗಂತ ಎಲ್ಲದರ ಮೇಲೆ ಏರಿಕೆ ಆಗುತ್ತದೆ ಅಂತಲ್ಲ. ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಭಾರೀ ಬದಲಾವಣೆ ಆಗುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಏಕೆಂದರೆ ಕೇಂಡ್ರ ಬಜೆಟ್ ನಲ್ಲಿ ಮೊಬೈಲ್ ಫೋನ್ ಮೇಲಿನ ಕಸ್ಟಮ್ಸ್ ಸುಂಕವನ್ನು ಈಗಿನ ಶೇ 15ರಷ್ಟಿಂದ 20ಕ್ಕೆ ಏರಿಕೆ ಮಾಡಲಾಗಿದೆ.

Customs excise increase, mobile phones will be costlier

ಸಂಬಳದಾರರಿಗೆ ಸಂತಸದ ಸುದ್ದಿ ಕೊಟ್ಟ ಜೇಟ್ಲಿಸಂಬಳದಾರರಿಗೆ ಸಂತಸದ ಸುದ್ದಿ ಕೊಟ್ಟ ಜೇಟ್ಲಿ

ಅಲ್ಲಿಗೆ ಶೇ 5ರಷ್ಟು ಕಸ್ಟಮ್ಸ್ ಸುಂಕವನ್ನು ಏರಿಕೆ ಮಾಡಲಾಗಿದೆ. ಇದರಿಂದ ದೇಶಕ್ಕೆ ಆಮದು ಆಗುವ ಮೊಬೈಲ್ ಫೋನ್ ಗಳ ಬೆಲೆಯಲ್ಲೂ ಕನಿಷ್ಠ ಶೇ 5ರಷ್ಟು ಏರಿಕೆ ಆಗಬಹುದು. ಇಲ್ಲದಿದ್ದಲ್ಲಿ ಗ್ರಾಹಕರಿಗೆ ಹೊರೆ ಆಗಬಾರದು ಹಾಗೂ ಮಾರಾಟದಲ್ಲಿ ಕಡಿಮೆ ಆಗಬಾರದು ಎಂದರೆ ಉತ್ಪಾದಕರೇ ತಮ್ಮ ಲಾಭದ ಪ್ರಮಾಣದಲ್ಲಿ ಸ್ವಲ್ಪ ಬಿಟ್ಟುಕೊಡಬೇಕಾಗುತ್ತದೆ.

English summary
In union budget 2018 customs excise on mobile phones increased from 15 to 20 percent. So, in future imported mobile phones will be costlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X