ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಮೂಲಕ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 01: ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವಾಗ ನೋಂದಾಯಿತ ಮೊಬೈಲ್ ನಂಬರ್‌ನಿಂದ ಕರೆ ಮಾಡಿ ಸಿಲಿಂಡರ್ ಬುಕ್‌ ಮಾಡುವುದು ನಿಮಗೆಲ್ಲಾ ತಿಳಿದಿದೆ. ಆದರೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುವ ವಿಧಾನ ಮತ್ತು ನವೆಂಬರ್ 1 ರಿಂದ ಬದಲಾಗಿದೆ ಮತ್ತು ಗ್ಯಾಸ್ ರೀಫಿಲ್ ಬುಕ್ ಮಾಡಲು ಇಂಡೇನ್ ನೋಂದಾಯಿತ ಮೊಬೈಲ್ ಸಂಖ್ಯೆಯ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಒದಗಿಸಿದೆ.

ಎಲ್‌ಪಿಜಿ ಸಿಲಿಂಡರ್‌ಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಬುಕ್‌ ಮಾಡುವುದರ ಜೊತೆಗೆ ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ.

 ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ: ಪ್ರಮುಖ ನಗರಗಳ ದರ ಇಲ್ಲಿದೆ ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ: ಪ್ರಮುಖ ನಗರಗಳ ದರ ಇಲ್ಲಿದೆ

ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವ ಐದು ವಿಧಾನಗಳು

ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವ ಐದು ವಿಧಾನಗಳು

1. ಅನಿಲ ಸಂಸ್ಥೆ ಅಥವಾ ವಿತರಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಬುಕ್ ಮಾಡುವುದು


2. ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ, ನೇರವಾಗಿ ಸಿಲಿಂಡರ್ ಬುಕ್ ಮಾಡುವುದು


3. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಬುಕಿಂಗ್ ( https://iocl.com/Products/Indanegas.aspx)


4. ಕಂಪನಿಯ ವಾಟ್ಸಾಪ್ ಸಂಖ್ಯೆಯಲ್ಲಿ ಎಸ್‌ಎಂಎಸ್‌ ಕಳುಹಿಸುವ ಮೂಲಕ ಬುಕಿಂಗ್


5. ಇಂಡೇನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ಬುಕಿಂಗ್

ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ನೀವು ಇಂಡೇನ್ ಗ್ರಾಹಕರಾಗಿದ್ದರೆ, ಹೊಸ ಸಂಖ್ಯೆ 7718955555 ಗೆ ಕರೆ ಮಾಡುವ ಮೂಲಕ ನೀವು ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ವಾಟ್ಸಾಪ್‌ನಲ್ಲಿ ಸಹ ಬುಕಿಂಗ್ ಮಾಡಬಹುದು. ವಾಟ್ಸಾಪ್ ಮೆಸೆಂಜರ್‌ನಲ್ಲಿ REFILL ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಗೆ ಕಳುಹಿಸಿ. ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಂದೇಶವನ್ನು ಕಳುಹಿಸಬೇಕಾಗುತ್ತದೆ.

ದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂ

ನಿಮ್ಮ ಮೊಬೈಲ್‌ಗೆ ಕಳುಹಿಸಿದ ಡೆಲಿವರಿ ಕೋಡ್ ನೀಡಬೇಕಾಗುತ್ತದೆ

ನಿಮ್ಮ ಮೊಬೈಲ್‌ಗೆ ಕಳುಹಿಸಿದ ಡೆಲಿವರಿ ಕೋಡ್ ನೀಡಬೇಕಾಗುತ್ತದೆ

ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಡಿಲಿವರಿ ದೃಢೀಕರಣದ ಸಂಖ್ಯೆಯನ್ನು (ಡಿಎಸಿ) ಕಳುಹಿಸಲಾಗಿರುತ್ತದೆ. ತೈಲ ಕಂಪನಿಗಳು ಮೊದಲು 100 ನಗರಗಳಲ್ಲಿ ಈ ಕ್ರಮವನ್ನು ಜಾರಿಗೆ ತಂದಿವೆ. ಸಿಲಿಂಡರ್‌ ವಿತರಣೆ ಮಾಡಿದ ವ್ಯಕ್ತಿಗೆ ಒಟಿಪಿಯನ್ನು ಹಂಚಿಕೊಂಡ ನಂತರವೇ ಸಿಲಿಂಡರ್ ನೀಡಲಾಗುವುದು.

ಮೊಬೈಲ್ ಸಂಖ್ಯೆಯನ್ನು 2 ನಿಮಿಷಗಳಲ್ಲಿ ಅಪ್‌ಡೇಟ್ ಮಾಡಿ

ಮೊಬೈಲ್ ಸಂಖ್ಯೆಯನ್ನು 2 ನಿಮಿಷಗಳಲ್ಲಿ ಅಪ್‌ಡೇಟ್ ಮಾಡಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್‌ ಮಾಡಲು ಬಯಸಿದರೆ, ನಿಮಗೆ ಸಿಲಿಂಡರ್ ಡೆಲಿವರಿ ನೀಡುವ ವ್ಯಕ್ತಿಯ ಬಳಿ ಅಪ್ಲಿಕೇಶನ್ ಮೂಲಕ ಕೋಡ್ ಅನ್ನು ರಚಿಸಲು ಸಾಧ್ಯವಾಗುತ್ತದೆ. ಅಂದರೆ, ವಿತರಣೆಯ ಸಮಯದಲ್ಲಿ, ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಮೂಲಕ ನವೀಕರಿಸಬಹುದು. ಆದರೆ ತಪ್ಪಾದ ಮಾಹಿತಿ ನೀಡಿ ಗ್ಯಾಸ್ ಸಿಲಿಂಡರ್ ವಿತರಣೆ ಸ್ಥಗಿತಗೊಳ್ಳದಂತೆ ಗಮನವಹಿಸಿ.

English summary
The delivery and the way of booking LPG cylinders has changed from November 1 and Indane has also provided a new number via SMS. now the customers can book their cylinders through WhatsApp too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X