ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಗ್ರಾಹಕರ ಗಮನಕ್ಕೆ ಜೂನ್ ತಿಂಗಳಲ್ಲಿ ಈ 4 ದಿನ ರಜೆ

|
Google Oneindia Kannada News

ನವದೆಹಲಿ, ಜೂನ್ 9: ಜೂನ್ ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಹಾಗೂ ಕೆಲ ಖಾಸಗಿ ಬ್ಯಾಂಕುಗಳು ಸಾಲು ಸಾಲು ರಜೆಗಳನ್ನು ನೀಡುತ್ತಿವೆ. ಒಟ್ಟಾರೆ 8 ದಿನಗಳು ಬ್ಯಾಂಕ್ ಬಂದ್ ಆಗಲಿದ್ದು, ಈ ಪೈಕಿ 6 ದಿನ ವಾರಾಂತ್ಯದ ರಜೆ ಸೇರಿವೆ. ಇದಲ್ಲದೆ, ಪಿಂಚಣಿ ಮತ್ತು ವಾರಕ್ಕೆ ಐದು ದಿನಗಳ ಕೆಲಸದ ಮುಂತಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರು ಜೂನ್ 27 ರಂದು ಮುಷ್ಕರ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ಯಾಲೆಂಡರ್ ಪ್ರಕಾರ, ಜೂನ್‌ನಲ್ಲಿ ಬ್ಯಾಂಕ್ ರಜೆಯು ಎರಡು ಇದೆ. ಉಳಿದವುಗಳು ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರವಾಗಿದೆ. ಇದನ್ನು ಹೊರತುಪಡಿಸಿ ಜೂನ್ 27ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಸೋಮವಾರ (ಜೂನ್ 27) ಮುಷ್ಕರ ನಡೆಯುವ ಕಾರಣದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಬಂದ್ ಆಗುವ ಸಾಧ್ಯತೆ ಇದೆ. ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜೂನ್ 25 ಮತ್ತು ಜೂನ್ 26 ರಂದು ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ ಇರುತ್ತದೆ. ಬ್ಯಾಂಕ್‌ಗಳು ಸತತ ಮೂರು ದಿನಗಳವರೆಗೆ ಮುಚ್ಚಲಿದೆ. ಇದರಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಬಹುದು.

Customers Alert: Banks to remain closed for 4 days between in June Check full list

ಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ನವೀಕರಣ ಮಾಡುವುದು, ಪರಿಷ್ಕರಣೆ ಮಾಡುವುದು, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಹಾಕುವುದು, ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು ನೌಕರರ ಬೇಡಿಕೆಯಾಗಿದೆ ಎಂದು ಯುಎಫ್‌ಬಿಯು ಸಭೆಯ ನಂತರ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿದರು.

ರಜೆ ದಿನಗಳ ಪಟ್ಟಿ
ಜೂನ್ 11, 2022: ಎರಡನೇ ಶನಿವಾರ
ಜೂನ್ 12: ಭಾನುವಾರ
ಜೂನ್ 14: ಸಂತ ಗುರು ಕಬೀರ ಜಯಂತಿ (ಚಂದೀಗಢ, ಹಿಮಾಚಲ ಪ್ರದೇಶ,ಪಂಜಾಬ್ ಹಾಗೂ ಒಡಿಶಾ ರಾಜ್ಯಗಳಲ್ಲಿ ಬ್ಯಾಂಕ್ ರಜೆ)
ಜೂನ್ 15: ಗುರು ಹರ್ ಗೋವಿಂದ್ ಜೀ ಜಯಂತಿ, ರಾಜ ಸಂಕ್ರಾಂತಿ(ಐಜ್ವಾಲ್, ಭುವನೇಶ್ವರ, ಜಮ್ಮು, ಶ್ರೀನಗರ)

ಭಾರತೀಯ ರಿಸರ್ವ್ ಬ್ಯಾಂಕ್ ನಾಲ್ಕು ವಿಭಾಗಗಳಲ್ಲಿ ಬ್ಯಾಂಕ್ ರಜಾದಿನಗಳನ್ನು ಸೂಚಿಸುತ್ತದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ರಜಾದಿನಗಳು, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳು ಮತ್ತು ಬ್ಯಾಂಕ್ ಖಾತೆ ಮುಚ್ಚುವಿಕೆಗಳು. ರಾಷ್ಟ್ರೀಯ ರಜಾದಿನಗಳ ಜೊತೆಗೆ ಕೆಲವು ರಾಜ್ಯ-ನಿರ್ದಿಷ್ಟ ರಜಾದಿನಗಳಿವೆ. ಈ ರಜೆಗಳು ಎಲ್ಲಾ ಭಾನುವಾರಗಳು ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿರುತ್ತದೆ.

Bank Holidays In June 2022 : ಜೂನ್ ತಿಂಗಳಲ್ಲಿ ಬ್ಯಾಂಕ್‌ ರಜಾದಿನಗಳ ಪಟ್ಟಿBank Holidays In June 2022 : ಜೂನ್ ತಿಂಗಳಲ್ಲಿ ಬ್ಯಾಂಕ್‌ ರಜಾದಿನಗಳ ಪಟ್ಟಿ

ಜೂನ್ ತಿಂಗಳಿನಲ್ಲಿ ದೇಶಾದ್ಯಂತ 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಬ್ಯಾಂಕ್ ಉದ್ಯೋಗಿಗಳಿಗೆ ಒಟ್ಟು 12 ರಜೆಗಳು ಲಭ್ಯವಿವೆ. ಆದರೆ ಉತ್ತರ ಪ್ರದೇಶದಲ್ಲಿ ಕೇವಲ 6 ದಿನ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಜೂನ್‌ನಲ್ಲಿ ಯಾವುದೇ ವಿಶೇಷ ದಿನ ಅಥವಾ ಹಬ್ಬವಾಗಿರುವುದರಿಂದ, ಕೇವಲ ಆರು ರಜಾದಿನಗಳಿವೆ. ಈ ಪೈಕಿ 4 ಭಾನುವಾರ, 2 ಮತ್ತು 4ನೇ ಶನಿವಾರ ರಜೆ ಇರುತ್ತದೆ. ಒಂದು ರೀತಿಯಲ್ಲಿ, ಬ್ಯಾಂಕ್ ಇಡೀ ತಿಂಗಳು ತೆರೆದಿರುತ್ತದೆ.

English summary
Bank will remain close for 4 days between June 11 and 15, 2022. Many private and public sector banks across India will remain closed for a total of eight days this month. Out of these eight holidays, six are weekend leaves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X