ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಸರಕಾರದಿಂದ ಶೇ. 1 ಟಿಡಿಎಸ್; ಜುಲೈ 1ರಿಂದ ಕ್ರಮ

|
Google Oneindia Kannada News

ನವದೆಹಲಿ, ಜೂನ್ 27: ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರಕಾರ ಕ್ರಿಪ್ಟೋ ವಹಿವಾಟುಗಳಿಗೂ ತೆರಿಗೆ ವಿಧಿಸುತ್ತಿದೆ. ಡಿಜಿಟಲ್ ಕರೆನ್ಸಿಯನ್ನು ಖರೀದಿಸಿದರೆ ಶೇ. 30ರಷ್ಟು ತೆರಿಗೆ ವಿಧಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದ ಸರಕಾರ ಇದೀಗ ಪ್ರತಿಯೊಂದು ಕ್ರಿಪ್ಟೊಕರೆನ್ಸಿ ವಹಿವಾಟಿಗೂ ಟಿಡಿಎಸ್ ಹಿಡಿಯಲು ನಿರ್ಧರಿಸಿದೆ.

ಶೇ. 30ರ ತೆರಿಗೆಯ ಜೊತೆಗೆ ಹೆಚ್ಚುವರಿಯಾಗಿ ಟಿಡಿಎಸ್ ಹಾಕಲಾಗುತ್ತದೆ. ಕ್ರಿಪ್ಟೋಕರೆನ್ಸಿಯೂ ಒಳಗೊಂಡಂತೆ 10 ಸಾವಿರ ರೂ ಮೌಲ್ಯದ ಎಲ್ಲಾ ವರ್ಚುವಲ್ ಡಿಜಿಟಲ್ ಆಸ್ತಿ (ವಿಡಿಎ) ವಹಿವಾಟಿಗೂ ಟಿಡಿಎಸ್ ಅನ್ವಯವಾಗುತ್ತದೆ. ನಾನ್ ಫಂಜಿಬಲ್ ಟೋಕನ್ (ಎನ್‌ಎಫ್‌ಟಿ) ಗಳಿಗೂ ಇದು ಅನ್ವಯ ಆಗುತ್ತದೆ. ಶೇ. 1ರಷ್ಟು ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಮಾಡುವ ಕ್ರಮ ಜುಲೈ 1ರಿಂದ ಜಾರಿಗೆ ಬರಲಿದೆ.

ಮೊದಲ ತ್ರೈಮಾಸಿಕದಲ್ಲಿ 10.2 ಟ್ರಿಲಿಯನ್ ಮೌಲ್ಯದ ವಹಿವಾಟು ನಡೆಸಿದ ಯುಪಿಐಮೊದಲ ತ್ರೈಮಾಸಿಕದಲ್ಲಿ 10.2 ಟ್ರಿಲಿಯನ್ ಮೌಲ್ಯದ ವಹಿವಾಟು ನಡೆಸಿದ ಯುಪಿಐ

ಭಾರತದಲ್ಲಿ ಇತ್ತೀಚೆಗೆ ಬಿಟ್‌ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಮೇಲೆ ಜನರ ಹೂಡಿಕೆ ಹೆಚ್ಚಾಗಿದೆ. ಒಂದು ಅಂದಾಜು ಪ್ರಕಾರ, ಭಾರತದಲ್ಲಿ ಒಂದೂವರೆಯಿಂದ ಎರಡು ಕೋಟಿಯಷ್ಟು ಜನರು ಕ್ರಿಪ್ಟೋ ಮೇಲೆ ಹೂಡಿಕೆ ಮಾಡಿದ್ದಾರೆ. ಇವರ ಒಟ್ಟಾರೆ ಹೂಡಿಕೆ ಮೌಲ್ಯ 40 ಸಾವಿರ ಕೋಟಿ ಎಂಬ ಅಂದಾಜು ಇದೆ.

ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಕಡಿವಾಣ ಹಾಕಿ ಆರ್‌ಬಿಐನಿಂದಲೇ ಬಿಡುಗಡೆಯಾಗಲಿರುವ ಡಿಜಿಟಲ್ ಕರೆನ್ಸಿಗೆ ಉತ್ತೇಜನ ನೀಡಲು ಸರಕಾರ ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕ್ರಿಪ್ಟೋಕರೆನ್ಸಿಗಳಿಗೆ ಸರಕಾರ ತೆರಿಗೆಯ ಬರೆ ಹಾಕುತ್ತಿದೆ.

ಭಾರತದಲ್ಲಿ ಮಾಧ್ಯಮ-ಮನರಂಜನೆ ಉದ್ಯಮಕ್ಕೆ ವರ್ಷಕ್ಕೆ 7.5 ಲಕ್ಷಕೋಟಿ ಆದಾಯ: ಠಾಕೂರ್ಭಾರತದಲ್ಲಿ ಮಾಧ್ಯಮ-ಮನರಂಜನೆ ಉದ್ಯಮಕ್ಕೆ ವರ್ಷಕ್ಕೆ 7.5 ಲಕ್ಷಕೋಟಿ ಆದಾಯ: ಠಾಕೂರ್

ವಿಡಿಎ ಎಂದರೇನು?

ವಿಡಿಎ ಎಂದರೇನು?

ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸದಾಗಿ ಸೇರಿಸಲಾಗಿರುವ 47A ನಿಯಮದಲ್ಲಿ ವಿಡಿಎ ಬಗ್ಗೆ ವಿವರಿಸಲಾಗಿದೆ. ಭಾರತ ಅಥವಾ ವಿದೇಶೀ ಕರೆನ್ಸಿ ಹೊರತುಪಡಿಸಿ ಕ್ರಿಪ್ಟೋಗ್ರಾಫಿಕ್ ಅಥವಾ ಬೇರೆ ಸಾಧನದ ಮೂಲಕ ತಯಾರಾದ ಮಾಹಿತಿ, ಕೋಡ್, ನಂಬರ್ ಅಥವಾ ಟೋಕನ್ ಅನ್ನು ವರ್ಚುವಲ್ ಡಿಜಿಟಲ್ ಅಸೆಟ್ ಎನ್ನಲಾಗುತ್ತದೆ. ನಾನ್-ಫಂಜಿಬಲ್ ಟೋಕನ್ ಇತ್ಯಾದಿಯೂ ಇದರಲ್ಲಿ ಒಳಗೊಂಡಿರುತ್ತದೆ. ಎನ್‌ಎಫ್‌ಟಿ ಎನ್ನುವುದೂ ಕೂಡ ಕ್ರಿಪ್ಟೋಕರೆನ್ಸಿಯೇ ಆಗಿದ್ದರೂ ಮಾಲಕತ್ವದ ಹಕ್ಕು ಮತ್ತಿತರ ವಿವರವನ್ನು ಬ್ಲಾಕ್‌ಚೈನ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿರುವ ಆಸ್ತಿಯಾಗಿದೆ. ಅಂದರೆ ನಿರ್ದಿಷ್ಟ ವಹಿವಾಟು ಮತ್ತು ಮೌಲ್ಯವನ್ನು ಇಲ್ಲಿ ಸ್ಪಷ್ಟಪಡಿಸಲಾಗಿರುತ್ತದೆ.

ಐಟಿ ಇಲಾಖೆ ಗೊಂದಲ

ಐಟಿ ಇಲಾಖೆ ಗೊಂದಲ

ಶೇ. 1ರಷ್ಟು ಟಿಡಿಎಸ್ ಹೇರುವ ಕ್ರಮವನ್ನು ೨೦೨೨ರ ಕೇಂದ್ರ ಬಜೆಟ್‌ನಲ್ಲೇ ಘೋಷಿಸಲಾಗಿತ್ತು. ಆದರೆ, ಇದು ಜುಲೈ 1ರಿಂದ ಜಾರಿಗೆ ಬರಲಿದೆ. ಆದರೆ, ಟಿಡಿಎಸ್ ದರದ ವಿವಾರವಾಗಿ ಇತ್ತೀಚೆಗೆ ಕೇಂದ್ರ ಐಟಿ ಇಲಾಖೆ ಗೊಂದಲ ಸೃಷ್ಟಿಸಿತ್ತು.. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಟಿಡಿಎಸ್ ದರವನ್ನು ಶೇ. 1ರಿಂದ ಶೇ. 0.1ಕ್ಕೆ ಇಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ, ಜೂನ್ 22ರಂದು ಈ ಬಗ್ಗೆ ಸ್ಪಷ್ಟನೆ ನೀಡಿದ ಐಟಿ ಇಲಾಖೆ, ವಿಡಿಎ ಮೇಲೆ ಟಿಡಿಎಸ್ ಶೇ. 1ರಷ್ಟು ಇರಲಿದೆ ಎಂದು ತಿಳಿಸಿದೆ.

ಶೇ. 30ರಷ್ಟು ತೆರಿಗೆ

ಶೇ. 30ರಷ್ಟು ತೆರಿಗೆ

ಕೇಂದ್ರ ಬಜೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ಆಸ್ತಿಯ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸುವ ಕ್ರಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಲಾಟರಿ, ಗೇಮ್ ಶೋ ಇತ್ಯಾದಿಗಳಲ್ಲಿ ಗೆದ್ದರೆ ನೀಡಲಾಗುವ ಬಹುಮಾನಗಳಿಗೆ ವಿಧಿಸಲಾಗುವ ತೆರಿಗೆ ರೀತಿಯಲ್ಲಿ ಕ್ರಿಪ್ಟೋಕರೆನ್ಸಿ ಆಸ್ತಿಯ ಮಾರಾಟಕ್ಕೆ ವಿಧಿಸಲಾಗುತ್ತದೆ.

ಪಾವತಿ ಮಾಡುತ್ತಿರುವರಿಂದ ಟಿಡಿಎಸ್

ಪಾವತಿ ಮಾಡುತ್ತಿರುವರಿಂದ ಟಿಡಿಎಸ್

ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ಡಿಜಿಟಲ್ ಆಸ್ತಿಯನ್ನು ಖರೀದಿಸುವ ವ್ಯಕ್ತಿಯಿಂದ ಹಣದ ಪಾವತಿ ಆಗುತ್ತದೆ. ಈ ವೇಳೆ ಈತ ಟಿಡಿಎಸ್ ಕಡಿತಗೊಳಿಸಿ ಉಳಿದ ಹಣವನ್ನು ಮಾರಾಟಗಾರನಿಗೆ ಪಾವತಿಸಬೇಕು. ಮಾರಾಟದ ದರದಲ್ಲಿ ವ್ಯತ್ಯಾಸ ಇರುವುದಿಲ್ಲ. ಮಾರುವವ ಶೇ. 1ರಷ್ಟು ತೆರಿಗೆ ಕಟ್ಟಿದಂತಾಗುತ್ತದೆ.

ಬ್ರೋಕರ್ ಅಥವಾ ಎಕ್ಸ್‌ಚೇಂಜ್ ಮೂಲಕ ವಿಡಿಎ ವಹಿವಾಟು ಆಗುತ್ತಿದ್ದರೆ ಬ್ರೋಕರ್‌ನವರೇ ಟಿಡಿಎಸ್ ಹಣ ಮುರಿದುಕೊಂಡು ಮಾರಾಟಗಾರನಿಗೆ ಬಾಕಿ ಹಣ ಕೊಡಲಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Cryptocurrency sale transactions are set to attract additional TDS of 1 per cent from July 1 onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X