ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚ್ಚಾ ತೈಲ ದರ ಸತತ ಮೂರನೇ ಬಾರಿ ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 29: ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಕಾಣಿಸಿಕೊಂಡ ಬಳಿಕ ಶೇಕಡಾ 3ರಷ್ಟು ಕುಸಿತ ಕಂಡಿದ್ದ ಕಚ್ಚಾ ತೈಲ ದರವು, ಸತತವಾಗಿ ಮೂರನೇ ದಿನ ಏರಿಕೆ ದಾಖಲಿಸಿದೆ.

ಅಮೆರಿಕಾದಲ್ಲಿ ಕೋವಿಡ್-19 ಸಂಬಂಧಿತ ನೆರವು ಪಾವತಿಗಳ ವಿಸ್ತರಣೆ ಜೊತೆಗೆ ಯೂರೋಪ್ ಮತ್ತು ಬ್ರಿಟನ್‌ ನಡುವೆ ಬ್ರೆಕ್ಸಿಟ್ ಒಪ್ಪಂದದಿಂದಾಗಿ ಇಂಧನ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿಂದಾಗಿ ನಾಲ್ಕು ಅವಧಿಗಳಲ್ಲಿ ಮೂರನೇ ಬಾರಿಗೆ ತೈಲ ದರ ಏರಿಕೆ ಕಂಡಿದೆ.

ಬ್ರಿಟನ್‌ನಲ್ಲಿ ಹೊಸ ಕೊರೊನಾ ಭೀತಿ: ಕಚ್ಚಾ ತೈಲ ದರ ಶೇ. 3ರಷ್ಟು ಕುಸಿತಬ್ರಿಟನ್‌ನಲ್ಲಿ ಹೊಸ ಕೊರೊನಾ ಭೀತಿ: ಕಚ್ಚಾ ತೈಲ ದರ ಶೇ. 3ರಷ್ಟು ಕುಸಿತ

ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ (ಡಬ್ಲ್ಯುಟಿಐ) ಕಚ್ಚಾ ಭವಿಷ್ಯವು ಬ್ಯಾರೆಲ್‌ಗೆ 34 ಸೆಂಟ್ಸ್ ಅಥವಾ ಶೇಕಡಾ 0.7ರಷ್ಟು ಹೆಚ್ಚಾಗಿ 47.96 ಡಾಲರ್‌ಗೆ ತಲುಪಿದೆ.

Crude Oil Prices Rise For 3rd Time Over US Covid-19 Stimulus Payment

ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಾಂಕ್ರಾಮಿಕ ಪರಿಹಾರ ಪಾವತಿಗಳನ್ನು 600 ಡಾಲರ್‌ನಿಂದ 2,000 ಕ್ಕೆ ಏರಿಸಲು ಮತ ಚಲಾಯಿಸಿದ್ದರಿಂದ, ಜಪಾನಿನ ಷೇರುಗಳು 29 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದವು.

ಅಮೆರಿಕಾದ ಕಚ್ಚಾ ತೈಲ ದಾಸ್ತಾನುಗಳು ಕಳೆದ ವಾರ ಕುಸಿಯುವ ನಿರೀಕ್ಷೆಯಿತ್ತು. ಆದರೆ ಸಂಸ್ಕರಿಸಿದ ಉತ್ಪನ್ನಗಳ ದಾಸ್ತಾನು ಏರಿಕೆಯಾಗುವ ಸಾಧ್ಯತೆಯಿದೆ, ಎಂದು ಈ ವಾರದ ದತ್ತಾಂಶಕ್ಕಿಂತ ಮುಂಚಿತವಾಗಿ ರಾಯಿಟರ್ಸ್ ಸಮೀಕ್ಷೆಯು ಸೋಮವಾರ ತೋರಿಸಿದೆ. ರಾಯಿಟರ್ಸ್ ಸಮೀಕ್ಷೆ ನಡೆಸಿದ ಐದು ವಿಶ್ಲೇಷಕರ ಅಂದಾಜಿನ ಪ್ರಕಾರ, ಕಚ್ಚಾ ದಾಸ್ತಾನು ಡಿಸೆಂಬರ್ 25 ಕ್ಕೆ ವಾರದಲ್ಲಿ 2.1 ಮಿಲಿಯನ್ ಬ್ಯಾರೆಲ್‌ಗಳಷ್ಟು ಕುಸಿದಿದೆ.

ಬ್ರಿಟನ್‌ನ ಹೊಸ ವೈರಸ್ , ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಏಷ್ಯನ್ ದೇಶಗಳಲ್ಲಿ ಹೆಚ್ಚು ಆತಂಕವನ್ನು ಸೃಷ್ಟಿಸಿದ್ದು, ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುತ್ತಿದೆ.

English summary
Oil rose on Tuesday, for the third time in four sessions, on expectations for rising fuel demand as the United States may expand their pandemic aid payments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X