ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಮೂಲಕ ಫಿಕ್ಸೆಡ್ ಡೆಪಾಸಿಟ್ ಮಾಡಿಸಿ: ಹೊಸ ಕೊಡುಗೆ

|
Google Oneindia Kannada News

ನವದೆಹಲಿ, ನವೆಂಬರ್ 19: ಭಾರತದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ಹೆಚ್ಚಿದಂತೆ, ನಾನಾ ರೀತಿಯ ಅವಕಾಶಗಳು ಸೃಷ್ಟಿಯಾಗಿವೆ. ಗ್ರಾಹಕರು ಮೊಬೈಲ್‌ನಲ್ಲಿಯೇ ಹಲವಾರು ಸೇವೆಗಳನ್ನು ಪಡೆಯುತ್ತಿದ್ದಾರೆ.

ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ ಗ್ರಾಹಕರಿಗೆ ಹಲವಾರು ವಾಟ್ಸಾಪ್ ಸೇವೆಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಒಂದು ನಿಶ್ಚಿತ ಠೇವಣಿ ಕೂಡ ಒಂದು. ಐಸಿಐಸಿಐ ಬ್ಯಾಂಕಿನ ಚಿಲ್ಲರೆ ಗ್ರಾಹಕರು ಈಗ ಎಫ್‌ಡಿಗಳನ್ನು ರಚಿಸಬಹುದು.

ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರ ಕಡಿತಗೊಳಿಸಿದ ಕೆನರಾ ಬ್ಯಾಂಕ್ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರ ಕಡಿತಗೊಳಿಸಿದ ಕೆನರಾ ಬ್ಯಾಂಕ್

ನೀವು ವಿದ್ಯುತ್, ಅಡುಗೆ ಅನಿಲ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಫೋನ್‌ ಬಿಲ್‌ ಹೀಗೆ ಹಲವು ಪಾವತಿಗಳನ್ನು ಕೆಲವು ಕ್ಲಿಕ್‌ಗಳಲ್ಲಿ ವಾಟ್ಸಾಪ್ ಮೂಲಕ ಬಿಲ್ ಪಾವತಿಸಬಹುದು. ಇದಕ್ಕಾಗಿಯೇ ಬೇರೆ ಅಪ್ಲಿಕೇಶನ್‌ಗಳಿಗೆ ಹೋಗಬೇಕಾಗಿಲ್ಲ.

Create FD Using WhatsApp: ICICI Bank Brings Services On Your Fingertips

ಇದೀಗ ಯುಟಿಲಿಟಿ ಬಿಲ್ ಪಾವತಿಗಳ ಹೊರತಾಗಿಯೂ ಐಸಿಐಸಿಐ ಬ್ಯಾಂಕಿನ ಗ್ರಾಹಕರು ವಾಟ್ಸಾಪ್ ಮೂಲಕ ನಿಶ್ಚಿತ ಠೇವಣಿ ಮತ್ತು ಟ್ರೇಡ್ ಫೈನಾನ್ಸ್‌ಗೆ ಸಂಬಂಧಿಸಿದ ಕೆಲಸವನ್ನು ಮಾಡಬಹುದು.

ವಾಟ್ಸಾಪ್ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಲು ನೀವು ಹೀಗೆ ಮಾಡಿ

* ಮೊದಲನೆಯದಾಗಿ ಐಸಿಐಸಿಐ ಬ್ಯಾಂಕ್ (ICICI Bank)ನ ಈ 86400 86400 ಸಂಖ್ಯೆಯನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿ.

* ಎರಡನೆಯದು ಬ್ಯಾಂಕಿಗೆ ಸಂಬಂಧಿಸಿದ ಈ ಎಲ್ಲಾ ಕಾರ್ಯಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಮಾಡಿ.

* ವಾಟ್ಸಾಪ್ ತೆರೆಯಿರಿ ಮತ್ತು ಈ ಸಂಖ್ಯೆಗೆ ಹಾಯ್ ಎಂದು ಕಳುಹಿಸಿ

* ನಂತರ ಎಲ್ಲಾ ಸಕ್ರಿಯ ಸೌಲಭ್ಯಗಳ ಪಟ್ಟಿಯನ್ನು ಬ್ಯಾಂಕ್ ನಿಮಗೆ ಕಳುಹಿಸುತ್ತದೆ

* ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದ ವೈಶಿಷ್ಟ್ಯವನ್ನು ಆಯ್ಕೆ ಮಾಡಿ

* ನೀವು ಎಲ್ಲಾ ಸೇವೆಗಳು ಮತ್ತು ಸಂಬಂಧಿತ ಮಾಹಿತಿಯನ್ನು ವಾಟ್ಸಾಪ್‌ನಲ್ಲಿಯೇ ಪಡೆಯುತ್ತೀರಿ.

ವಾಟ್ಸಾಪ್‌ನಲ್ಲಿ ಎಫ್‌ಡಿ ರಚಿಸುವ ವಿಧಾನ

ಈ ಸೇವೆಯು ಗ್ರಾಹಕರಿಗೆ ಸ್ಥಿರವಾದ ಠೇವಣಿಯನ್ನು ತ್ವರಿತವಾಗಿ ವಾಟ್ಸಾಪ್‌ನಲ್ಲಿ ರಚಿಸಲು ಅನುವು ಮಾಡಿಕೊಡುತ್ತದೆ. , ನಂತಹ ಕೀವರ್ಡ್ ಟೈಪ್ ಮಾಡಿ ಮತ್ತು ಎಫ್‌ಡಿ ಮೊತ್ತವನ್ನು ಆರಿಸಿ . 10,000 ರೂಪಾಯಿನಿಂದ - ರೂ. 1 ಕೋಟಿವರೆಗೂ ಡೆಪಾಸಿಟ್ ಮಾಡಬಹುದು ಜೊತೆಗೆ ಅವಧಿಯನ್ನು , ಬಡ್ಡಿದರವನ್ನು ನಿಮಗೆ ತೋರಿಸುತ್ತದೆ.

English summary
ICICI Bank recently has launched a host of whatsapp services for customers, one of which allows them to even create fixed deposits
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X