ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ ಸಾಮಾಗ್ರಿ, ಸಿಬ್ಬಂದಿಗಳು ಸೋಂಕು ರಹಿತ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡುತ್ತಿರುವವರು, ವಿತರಣೆ ಪ್ರತಿನಿಧಿಗಳು ಮತ್ತು ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ನಮ್ಮ ಎಲ್ಲಾ ಗೋದಾಮುಗಳು ಮತ್ತು ವಿತರಣೆ ಪಾಲುದಾರರು ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಸುರಕ್ಷತೆ ಮತ್ತು ಕೈಗಳ ನೈರ್ಮಲ್ಯ ಸೇರಿದಂತೆ ಮತ್ತಿತರೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ವಿತರಣೆ ವೇಳೆಯಲ್ಲಿ ಮತ್ತು ಸಪ್ಲೈ ಚೈನ್ ವೇಳೆಯಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ನಮ್ಮ ಎಲ್ಲಾ ನೌಕರರು ಮತ್ತು ವಿತರಣೆ ಪ್ರತಿನಿಧಿಗಳಿಗೆ ಥರ್ಮಲ್ ಸ್ಕ್ಯಾನ್/ಥರ್ಮಲ್ ಗನ್ ಗಳಿಂದ ತಪಾಸಣೆ ಮಾಡುವ ಮೂಲಕ ಅವರ ಆರೋಗ್ಯವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿದ್ದೇವೆ.

ನಮ್ಮ ಸಪ್ಲೇ ಚೈನ್ ಮತ್ತು ಲಾಜಿಸ್ಟಿಕ್ ನೆಟ್ ವರ್ಕ್ ಗೆ ನಾವು 3,000 ಕ್ಕೂ ಅಧಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದು, ನಮ್ಮ ಕಚೇರಿ ಮತ್ತು ಗೋದಾಮುಗಳಲ್ಲಿನ 100ಕೆಗೂ ಅಧಿಕ ಸಿಬ್ಬಂದಿಗೆ ಮತ್ತು ಪಾಲುದಾರರಿಗೆ ಜಾಗೃತಿ ಮೂಡಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿ ಆತ್ಮಹತ್ಯೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿ ಆತ್ಮಹತ್ಯೆ

ನೌಕರರು ಮತ್ತು ಪಾಲುದಾರರ ಆರೋಗ್ಯ ಸುರಕ್ಷತೆಗಾಗಿ ನಾವು ಈ ಕೆಳಗಿನ ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ:-

 ಮುಂಜಾಗ್ರತಾ ಕ್ರಮಗಳು

ಮುಂಜಾಗ್ರತಾ ಕ್ರಮಗಳು

· ಇನ್ ಫ್ರಾ-ರೆಡ್ ಥರ್ಮೋಮೀಟರ್ ಗಳಿಂದ ನಮ್ಮೆಲ್ಲಾ ಸಿಬ್ಬಂದಿ, ವೆಂಡರ್ ಗಳು ಮತ್ತು ವೀಕ್ಷಕರಿಗೆ ಉಷ್ಣಾಂಶ ತಪಾಸಣೆ ಮಾಡುವುದನ್ನು ಕಡ್ಡಾಯ ಮಾಡಿದ್ದೇವೆ. ಫ್ಲೂ ಲಕ್ಷಣಗಳಿರುವವರನ್ನು ಕೂಡಲೇ ಮನೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗುತ್ತಿದೆ.

· ನಮ್ಮ ಎಲ್ಲಾ ಕಚೇರಿಗಳು ಮತ್ತು ದಾಸ್ತಾನು ಗೋದಾಮುಗಳನ್ನು ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಈ ಮೂಲಕ ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಲಾಗುತ್ತಿದೆ. ನಿಯಮಿತವಾಗಿ ಈ ಸ್ಥಳಗಳಲ್ಲಿ ಔಷಧಿಯನ್ನು ಸಿಂಪಡಿಸಲಾಗುತ್ತಿದೆ.

 ಸ್ಯಾನಿಟೈಸರ್ ಬಳಕೆ

ಸ್ಯಾನಿಟೈಸರ್ ಬಳಕೆ

* ಪ್ರತಿ ಕಚೇರಿಯ ಪ್ರವೇಶದ್ವಾರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಸಾಬೂನುಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಇಡಲಾಗುತ್ತಿದೆ.

* ಕಚೇರಿಗಳಿಗೆ, ದಾಸ್ತಾನು ಗೋದಾಮುಗಳ ಒಳಗೆ ಪ್ರವೇಶಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳುವುದು ಸೇರಿದಂತೆ ಎಲ್ಲಾ ಸ್ವಚ್ಛತಾ ಕ್ರಮಗಳನ್ನು ಪಾಲಿಸುವಂತೆ ನಮ್ಮ ಎಲ್ಲಾ ನೌಕರರು ಮತ್ತು ಸಿಬ್ಬಂದಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ.

* ಪ್ರವೇಶ ದ್ವಾರದಲ್ಲಿ ನಿಯಮಿತವಾಗಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದಲ್ಲದೇ, ಟ್ರಾಲಿಗಳ ಹ್ಯಾಂಡಲ್ ಗಳು, ಲಿಫ್ಟ್ ಸ್ವಿಚ್ ಗಳು, ಯಂತ್ರೋಪಕರಣಗಳು ಮತ್ತು ಡೋರ್ ನಾಬ್ ಗಳನ್ನೂ ಸಹ ಸ್ಯಾನಿಟೈಸ್ ಮಾಡಲಾಗುತ್ತಿದೆ.

 ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟರ್

ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟರ್

* ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರದಲ್ಲಿ ಸಿಬ್ಬಂದಿಯು ಒಟ್ಟಾಗಿ ನಿಲ್ಲುವುದು ಅಥವಾ ಸೇರುವುದನ್ನು ನಿರ್ಬಂಧಿಸಲಾಗಿದ್ದು, ನೌಕರರ ನಡುವೆ ಕನಿಷ್ಠ 6 ಅಡಿಗಳ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ.

* ಸುರಕ್ಷತಾ ಕ್ರಮಗಳನ್ನು ಸಿಬ್ಬಂದಿಗೆ ನೆನಪಿಸುವ ಉದ್ದೇಶದಿಂದ ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟರ್ ಗಳನ್ನು ಹಾಕಲಾಗಿದೆ.
* ನಮ್ಮ ಕೇಂದ್ರಿತ ಭದ್ರತಾ ತಂಡವು ಸೋಂಕುಪೀಡಿತ ಪ್ರದೇಶಗಳ ಮೇಲೆ ನಿಗಾ ಇಟ್ಟಿದೆ. ಈ ಪ್ರದೇಶಗಳಲ್ಲಿ ನಮ್ಮ ಸಿಬ್ಬಂದಿ ಎಕ್ಸ್ ಪೋಸ್ ಆಗುವುದನ್ನು ತಪ್ಪಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 ಡಿಜಿಟಲ್ ಪೇಮೆಂಟ್ ಗೆ ಹೆಚ್ಚು ಒತ್ತು

ಡಿಜಿಟಲ್ ಪೇಮೆಂಟ್ ಗೆ ಹೆಚ್ಚು ಒತ್ತು

ಕ್ಯಾಶ್-ಆನ್-ಡೆಲಿವರಿ (ಸಿಒಡಿ) ಶಿಪ್ ಮೆಂಟ್ ಗಳಿಗೆ ಡಿಜಿಟಲ್ ಪೇಮೆಂಟ್ ಗೇಟ್ ವೇಗಳು ಮತ್ತು ಯುಪಿಐ ಅನ್ನು ಬಳಸುವಂತೆ ಗ್ರಾಹಕರಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಇದೇ ಗ್ರಾಹಕರು ಸಹ ತಾವು ಆರ್ಡರ್ ಮಾಡಿದ ಉತ್ಪನ್ನಗಳನ್ನು ತಮ್ಮ ಮನೆಗಳ ಭದ್ರತಾ ಕೊಠಡಿ ಬಳಿ ವಿತರಣೆ ಮಾಡುವಂತೆ ವಿತರಣಾ ಪ್ರತಿನಿಧಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಈ ಮೂಲಕ ಗ್ರಾಹಕರೂ ಸಹ ಸಂಪರ್ಕ-ರಹಿತ ವಿತರಣೆಗೆ ಆದ್ಯತೆ ನೀಡುತ್ತಿದ್ದಾರೆ.

ನಮ್ಮ ಪ್ರತಿನಿಧಿಗಳಿಗೆ (ಖಾಯಂ ನೌಕರರು ಮತ್ತು ಗುತ್ತಿಗೆ ನೌಕರರು) ಜೀವ ವಿಮೆ ಮತ್ತು ವೈದ್ಯಕೀಯ ವಿಮೆಯನ್ನು ಮಾಡಿಸಲಾಗಿದೆ. ಯಾರಾದರೂ ಕೊವಿಡ್-19 ಗೆ ತುತ್ತಾದರೆ ಅಥವಾ ಕ್ವಾರಂಟೈನ್ ಗೆ ಒಳಗಾದರೆ ಅವರಿಗೆ ವೇತನ ಸಹಿತ ರಜೆಯನ್ನು ನೀಡಲಾಗುತ್ತದೆ. ಇದರ ಜತೆಗೆ ಇನ್ನಿತರೆ ಪ್ರಯೋಜನಗಳನ್ನು ನೀಡಲಾಗುತ್ತದೆ.

English summary
Flipkart stringent hygiene measures to keep its network and employees safe amid of covid pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X