ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಫ್ಲಿಪ್ ಕಾರ್ಟ್-ಮೆರು ಒಪ್ಪಂದ

|
Google Oneindia Kannada News

ಬೆಂಗಳೂರು, ಏಪ್ರಿಲ್ 29, 2020: ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ದೇಶದ ಪ್ರಮುಖ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮತ್ತು ದೇಶದ ಆ್ಯಪ್ ಆಧಾರಿತ ಕ್ಯಾಬ್ ಆಪರೇಟ್ ಸಂಸ್ಥೆಯಾಗಿರುವ ಮೆರು ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಮಹೀಂದ್ರ & ಮಹೀಂದ್ರ ಹೆಚ್ಚು ಪಾಲನ್ನು ಹೊಂದಿರುವ ಮೆರು ದೇಶದ ಪ್ರಮುಖ ಆ್ಯಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆಯಾಗಿದೆ. ಈ ಒಪ್ಪಂದದಿಂದಾಗಿ ಬೆಂಗಳೂರು, ದೆಹಲಿ ಎನ್ ಸಿಆರ್ ಮತ್ತು ಹೈದ್ರಾಬಾದ್ ನಗರಗಳ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಸುರಕ್ಷಿತ ಮತ್ತು ಸ್ಯಾನಿಟೈಸ್ಡ್ ಚೇನ್ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಫ್ಲಿಪ್ ಕಾರ್ಟ್ ಸಾಮಾಗ್ರಿ, ಸಿಬ್ಬಂದಿಗಳು ಸೋಂಕು ರಹಿತಫ್ಲಿಪ್ ಕಾರ್ಟ್ ಸಾಮಾಗ್ರಿ, ಸಿಬ್ಬಂದಿಗಳು ಸೋಂಕು ರಹಿತ

ಈ ಅನಿರೀಕ್ಷಿತ ಬಿಕ್ಕಟ್ಟಿನ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ನಾಗರಿಕರಿಗೆ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಮುಂದುವರಿದ ಭಾಗವಾಗಿ ಹಲವಾರು ವಿನೂತನವಾದ ಮಾದರಿಗಳನ್ನು ಪರಿಚಯಿಸುವ ಮುಂದುವರಿದ ಭಾಗವಾಗಿ ಈ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಈ ಒಪ್ಪಂದ ಬೆಂಬಲವಾಗಿ ನಿಂತಿದೆ. ಈ ಎರಡೂ ಸಂಸ್ಥೆಗಳ ನಡುವಿನ ಒಪ್ಪಂದವು ಚಾಲಕ-ಪಾಲುದಾರಿಕೆಯನ್ನು ಬೆಂಬಲಿಸುವುದರೊಂದಿಗೆ ಆದಾಯ ಅವಕಾಶಗಳನ್ನು ನೀಡುವ ಮೂಲಕ ಅಗತ್ಯ ವಸ್ತುಗಳ ಸಪ್ಲೈ ಚೇನ್ ಅನ್ನು ಸಕ್ರಿಯವಾಗಿಟ್ಟುಕೊಳ್ಳುವುದನ್ನು ಖಾತರಿಪಡಿಸುತ್ತದೆ.

ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್

ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್

ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಬಗ್ಗೆ ಮಾತನಾಡಿ, ''ಭಾರತ ಈ ಅನಿರೀಕ್ಷಿತವಾದ ಹೋರಾಟವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಗ್ರಾಹಕರಿಗೆ ನೆರವಾಗಲು ಬದ್ಧವಾಗಿದೆ. ನಮ್ಮ ಹೊಸ, ಆವಿಷ್ಕಾರಕ ಕ್ರಮಗಳನ್ನು ರೂಪಿಸುತ್ತಿರುವ ಯೋಜನೆಗಳ ಫಲಿತಾಂಶದಿಂದಾಗಿ ಮೆರು ಜತೆಗಿನ ಈ ಒಪ್ಪಂದ ಹೊರಹೊಮ್ಮಿದೆ. ಇದರ ಮೂಲಕ ಮಾರಾಟಗಾರರ ಇಕೋಸಿಸ್ಟಂ, ಬ್ರ್ಯಾಂಡ್ ಗಳು, ಪಾಲುದಾರರು ಮತ್ತು ಗ್ರಾಹಕರಿಗೆ ಸುರಕ್ಷಿತವಾದ ಮತ್ತು ತ್ವರಿತವಾದ ರೀತಿಯಲ್ಲಿ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಹಕಾರಿಯಾಗುತ್ತದೆ. ನಾವು ಅತ್ಯಂತ ಭದ್ರತೆಯ ಮತ್ತು ಸುರಕ್ಷಿತವಾದ ಪೂರೈಕೆ ಜಾಲವನ್ನು ಹೊಂದಿದ್ದೇವೆ ಮತ್ತು ಎಸ್ ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ದೇಶದ ಜತೆಗೆ ನಾವಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಯೋಗಕ್ಷೇಮ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದೇವೆ" ಎಂದು ತಿಳಿಸಿದರು.

ಮೆರು ಮೊಬಿಲಿಟಿ ಸಿಇಒ ನೀರಜ್ ಗುಪ್ತಾ

ಮೆರು ಮೊಬಿಲಿಟಿ ಸಿಇಒ ನೀರಜ್ ಗುಪ್ತಾ

ಈ ಒಪ್ಪಂದದ ಬಗ್ಗೆ ಮಾತನಾಡಿದ ಮೆರು ಮೊಬಿಲಿಟಿ ಟೆಕ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಸಿಇಒ ನೀರಜ್ ಗುಪ್ತಾ ಅವರು, ''ಫ್ಲಿಪ್ ಕಾರ್ಟ್ ನೊಂದಿಗೆ ನಾವು ಮಾಡಿಕೊಂಡಿರುವ ಒಪ್ಪಂದ ವಿನೂತನವಾಗಿದ್ದು, ಇದರಿಂದ ಗ್ರಾಹಕರಿಗೆ ಅತ್ಯುತ್ತಮವಾದ ರೀತಿಯಲ್ಲಿ ಪ್ರಯೋಜನವಾಗಲಿದೆ. ಮೆರು ಈ ಅವಕಾಶವನ್ನು ಬಳಸಿಕೊಂಡು ಫ್ಲಿಪ್ ಕಾರ್ಟ್ ನ ವಿಸ್ತಾರವಾದ ಗ್ರಾಹಕ ಸಮೂಹಕ್ಕೆ ತಡೆರಹಿತವಾಗಿ ಸಕಾಲದಲ್ಲಿ ಸುರಕ್ಷಿತವಾಗಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಿದೆ. ಈ ಸೇವೆಯು ನಮ್ಮ ಚಾಲಕ ಪಾಲುದಾರರಿಗೆ ಹೆಚ್ಚುವರಿ ಆದಾಯ ಗಳಿಕೆಯ ಅವಕಾಶವನ್ನು ಕಲ್ಪಿಸಲಿದೆ'' ಎಂದು ಹೇಳಿದರು.

ಫ್ಲಿಪ್ ಕಾರ್ಟ್ ಜೊತೆ ಉಬರ್ ಒಪ್ಪಂದ, ಅಗತ್ಯ ಸೇವೆ ಆರಂಭಫ್ಲಿಪ್ ಕಾರ್ಟ್ ಜೊತೆ ಉಬರ್ ಒಪ್ಪಂದ, ಅಗತ್ಯ ಸೇವೆ ಆರಂಭ

ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ

ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ

ಸರ್ಕಾರದ ಮಾರ್ಗಸೂಚಿಗಳ ಅನ್ವಯ, ಮೆರು ಫ್ಲಿಪ್ ಕಾರ್ಟ್ ವಿತರಣೆಗಳಿಗೆ ನೆರವಾಗುವ ನಿಟ್ಟಿನಲ್ಲಿ ತನ್ನ ಓಜೋನ್ ಸ್ಯಾನಿಟೈಸ್ಡ್ ಅನ್ನು ನೀಡುತ್ತಿದೆ. ಡಿಸ್ ಪ್ಯಾಚ್ ಹಬ್ ಗಳಲ್ಲಿ ಓಜೋನ್ ಏರ್ ಪ್ಯೂರಿಫೈಯರ್ ಅನ್ನು ಅಳವಡಿಸಲಾಗಿದ್ದು, ಎಲ್ಲಾ ಚಾಲಕ-ಪಾಲುದಾರರಿಗೆ ತಮ್ಮ ಕ್ಯಾಬ್ ಗಳನ್ನು ಸ್ಯಾನಿಟೈಸ್ ಮಾಡುವಂತೆ ಉತ್ತೇಜನ ನೀಡುತ್ತದೆ. ಈ ಮೂಲಕ ಅತ್ಯಂತ ಹೆಚ್ಚು ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಲಾಗುತ್ತದೆ. ಮೆರು ಚಾಲಕ-ಪಾಲುದಾರರು ಫ್ಲಿಪ್ ಕಾರ್ಟ್ ನ ದಿನಸಿ ಉತ್ಪನ್ನಗಳನ್ನು ಗ್ರಾಹಕರಿಗೆ ಸುರಕ್ಷಿತವಾಗಿ ಮತ್ತು ಸಕಾಲದಲ್ಲಿ ತಲುಪಿಸುವ ಬಗೆ ಹೇಗೆಂಬುದರ ಬಗ್ಗೆ ಫ್ಲಿಪ್ ಕಾರ್ಟ್ ನಿಂದ ತರಬೇತಿ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಮೆರು ಕೊರೋನಾವೈರಸ್ ಹರಡುವುದನ್ನು ತಪ್ಪಿಸಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಗಳನ್ನು ಧರಿಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತನ್ನ ಚಾಲಕರಿಗೆ ಅಗತ್ಯ ಜಾಗೃತಿಯನ್ನು ಮೂಡಿಸುತ್ತಿದೆ.

ಬೆಂಗಳೂರಲ್ಲಿ ಇ ಪಾಸ್ ಪಡೆಯಬಹುದು

ಬೆಂಗಳೂರಲ್ಲಿ ಇ ಪಾಸ್ ಪಡೆಯಬಹುದು

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆನ್ ಲೈನ್ ಡೆಲಿವರಿ ಮಾಡುವ ಸುಮಾರು 25ಕ್ಕೂ ಅಧಿಕ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ, ಇ ಪಾಸ್ ಪಡೆಯುವಂತೆ ಸೂಚಿಸಿದ್ದಾರೆ. ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ ಎಂದು ಪೊಲೀಸರು ಸೂಚಿಸಿದ್ದಾರೆ. ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

ಕೊರೊನಾ: ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?ಕೊರೊನಾ: ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?

English summary
E-commerce firm Flipkart and app-based ride-hailing cab operator Meru have tied up to deliver grocery and essential items to customers amid the nationwide lockdown amid of covid19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X