ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್19 ನಡುವೆ ಬೆಂಗಳೂರಿನ ವಸತಿ, ಅಪಾರ್ಟ್ಮೆಂಟ್ ಬೆಲೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಬೆಂಗಳೂರು ವಸತಿ ಆಸ್ತಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೊದಲ ತ್ರೈಮಾಸಿಕದಲ್ಲಿ ಶೇಕಡ 2.9ರಷ್ಟು ಹೆಚ್ಚಿದೆ.

ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಸಂಖ್ಯಾತ ಐಟಿ ಹಾಗೂ ಐಟಿಇಎಸ್ ಸಂಸ್ಥೆಗಳ ಇರುವಿಕೆ ಇದಕ್ಕೆ ಕಾರಣ ಎನ್ನುವ ಅಂಶ ಮ್ಯಾಜಿಕ್‍ಬ್ರಿಕ್ಸ್‍ನ ಪ್ರಾಪ್‍ಇಂಡೆಕ್ಸ್ ನಿಂದ ಬಹಿರಂಗವಾಗಿದೆ.

ಬೆಂಗಳೂರಲ್ಲಿ ಮುಂದಿನ 5 ವರ್ಷ ಹೊಸ ಅಪಾರ್ಟ್‌ಮೆಂಟ್ ಕಟ್ಟುವಂತಿಲ್ಲಬೆಂಗಳೂರಲ್ಲಿ ಮುಂದಿನ 5 ವರ್ಷ ಹೊಸ ಅಪಾರ್ಟ್‌ಮೆಂಟ್ ಕಟ್ಟುವಂತಿಲ್ಲ

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಿರುವುದು ಮತ್ತು ಲಾಕ್‍ಡೌನ್ ಹೇರಿಕೆ ಭಾರತದ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಿದ್ದರೂ, 2020ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ವಸತಿ ಆಸ್ತಿಗಳ ಬೇಡಿಕೆ ಶೇಕಡ 4.7ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.

ನಿರ್ಮಾಣ ಹಂತದಲ್ಲಿರುವ ಹಾಗೂ ಸರ್ವಸಜ್ಜಿತವಾಗಿರುವ ಆಸ್ತಿ ವರ್ಗಗಗಳಲ್ಲಿ ಧನಾತ್ಮಕ ಬೇಡಿಕೆ ಕಂಡುಬಂದಿದ್ದು, ಬೆಲೆಯಲ್ಲಿ ಕ್ರಮವಾಗಿ 1.8% ಹಾಗೂ 0.8% ಹೆಚ್ಚಳ ಕಂಡುಬಂದಿದೆ. ಅಚ್ಚರಿಯ ಅಂಶವೆಂದರೆ ನಿರ್ಮಾಣ ಹಂತದಲ್ಲಿರುವ ವರ್ಗದ ಎಲ್ಲ ವಲಯಗಳಲ್ಲಿ, ಸುಸಜ್ಜಿತವಾದ ಆಸ್ತಿಗಳಿಗೆ ಹೋಲಿಸಿದರೆ ಅಧಿಕ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಕಂಡುಬಂದಿದೆ. ಇದು ಬಿಲ್ಡರ್‍ಗಳ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.

ಅಧಿಕ ಬಜೆಟ್ ವಲಯದಲ್ಲಿ ಶೇಕಡ 1.9ರಷ್ಟು ಬೇಡಿಕೆ

ಅಧಿಕ ಬಜೆಟ್ ವಲಯದಲ್ಲಿ ಶೇಕಡ 1.9ರಷ್ಟು ಬೇಡಿಕೆ

2020ರ ಮೊದಲ ತ್ರೈಮಾಸಿಕದಲ್ಲಿ ಅಧಿಕ ಬಜೆಟ್ ವಲಯದಲ್ಲಿ ಶೇಕಡ 1.9ರಷ್ಟು ಬೇಡಿಕೆ ಹೆಚ್ಚಳ ದಾಖಲಾಗಿದೆ. ಅದರಲ್ಲೂ ಮುಖ್ಯವಾಗಿ ಪ್ರತಿ ಚದರ ಅಡಿಗೆ 5000 ರೂಪಾಯಿಗಿಂತ ಕಡಿಮೆ ಬೆಲೆಯ ಆಸ್ತಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದು ತಿಳಿದುಬರುತ್ತದೆ.

ಸಾಂಪ್ರದಾಯಿಕವಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಅಭಿವೃದ್ಧಿ ಕ್ಷೇತ್ರ ಹೆಚ್ಚಿನ ಪ್ರಗತಿ ಕಾಣುತ್ತಾ ಬಂದಿದ್ದರೂ, ಭೂ ಸುಧಾರಣಾ ಕಾಯ್ದೆ-1961ರ 109ನೇ ವಿಧಿಗೆ ತಿದ್ದುಪಡಿ ತಂದಿರುವುದು, 20 ಲಕ್ಷಕ್ಕಿಂತ ಕಡಿಮೆ ಬಜೆಟ್‍ನ ಮನೆಗಳಿಗೆ ಮುದ್ರಾಂಕ ಶುಲ್ಕವನ್ನು ಶೇ 5 ರಿಂದ ಶೇ 2ಕ್ಕೆ ಕಡಿಮೆ ಮಾಡಿರುವುದು ಹೀಗೆ ಹೊರವಲಯದಲ್ಲಿ ಕೈಗಾರಿಕಾ ಎಸ್ಟೇಟ್‍ಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನದಿಂದಾಗಿ, ನಗರದ ಹೊರವಲಯದಲ್ಲಿ ಕೂಡಾ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇದೆ.

ಮ್ಯಾಜಿಕ್‍ಬ್ರಿಕ್ಸ್ ಸಿಇಓ ಸುಧೀರ್ ಪೈ

ಮ್ಯಾಜಿಕ್‍ಬ್ರಿಕ್ಸ್ ಸಿಇಓ ಸುಧೀರ್ ಪೈ

ಪ್ರಾಪ್‍ಇಂಡೆಕ್ಸ್ ಬಗ್ಗೆ ಮಾತನಾಡಿದ ಮ್ಯಾಜಿಕ್‍ಬ್ರಿಕ್ಸ್ ಸಿಇಓ ಸುಧೀರ್ ಪೈ, "ಕೋವಿಡ್-19 ಸಾಂಕ್ರಾಮಿಕವನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದ್ದರೂ, ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲಿನ ಧೀರ್ಘಾವಧಿ ಪರಿಣಾಮ ಇನ್ನೂ ಅನಿಶ್ಚಿತವಾಗಿದೆ ಹಾಗೂ ಅದನ್ನು ಇನ್ನಷ್ಟೇ ಅಂದಾಜಿಸಬೇಕಿದೆ. ಆದರೆ ಗ್ರಾಹಕರ ಆಸಕ್ತಿಗೆ ಯಾವುದೇ ಕುಂದು ಆಗಿಲ್ಲ ಎನ್ನುವುದು ತಕ್ಷಣಕ್ಕೆ ತಿಳಿದು ಬರುತ್ತದೆ. ಸರ್ವಸಜ್ಜಾಗಿರುವ ಆಸ್ತಿಗಳಿಗೆ ಬೇಡಿಕೆ ಹೆಚ್ಚಳವಾಗಿದ್ದು, ನಮ್ಮ ಅಂಕಿ ಅಂಶಗಳಿಂದ ತಿಳಿದುಬರುವಂತೆ ಶೇಕಡ 80ರಷ್ಟು ಮಂದಿ ವಾಸಕ್ಕೆ ಸಜ್ಜಾದ ಆಸ್ತಿಗಳತ್ತ ಆಸಕ್ತಿ ಹೊಂದಿದ್ದಾರೆ. ಉಳಿದವರು ನಿರ್ಮಾಣ ಹಂತದಲ್ಲಿರುವ ಆಸ್ತಿಗಳನ್ನು ನೋಡುತ್ತಿದ್ದಾರೆ" ಎಂಧು ಹೇಳಿದ್ದಾರೆ.

ಗ್ರಾಹಕರ ಆದ್ಯತೆಗಳು ಕಡಿಮೆಯಾಗಿರುವುದು ಕಾಣುತ್ತದೆ

ಗ್ರಾಹಕರ ಆದ್ಯತೆಗಳು ಕಡಿಮೆಯಾಗಿರುವುದು ಕಾಣುತ್ತದೆ

ಉದ್ಯೋಗಾವಕಾಶಗಳು, ಕೈಗೆಟುವ ಮಾನದಂಡ, ವಿಮಾನ ನಿಲ್ದಾಣದ ಜತೆ ಸಂಪರ್ಕ ಮತ್ತಿತರ ಕಾರಣಗಳಿಂದಾಗಿ ವೈಟ್‍ಫೀಲ್ಡ್, ಸರ್ಜಾಪುರ ರಸ್ತೆ, ಬಳ್ಳಾರಿ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳು ನಗರದಲ್ಲಿ ಅಧಿಕ ಬೇಡಿಕೆ ಇರುವ ಅಗ್ರ ನಾಲ್ಕು ಸೂಕ್ಷ್ಮ ಮಾರುಕಟ್ಟೆಗಳಾಗಿಯೇ ಮುಂದುವರಿದಿದೆ. ಇಂದಿರಾನಗರ ಹಾಗೂ ಮಲ್ಲೇಶ್ವರಂನಂಥ ವೈಭವೋಪೇತ ಪ್ರದೇಶಗಳಲ್ಲಿ ಪ್ರತಿ ಚದರ ಅಡಿಗೆ 7000 ರೂಪಾಯಿಗಿಂತ ಅಧಿಕ ದರ ಇರುವ ಆಸ್ತಿಗಳ ಬಗ್ಗೆ ಗ್ರಾಹಕರ ಆದ್ಯತೆಗಳು ಕಡಿಮೆಯಾಗಿರುವುದು ಕಾಣುತ್ತದೆ.

ವಸತಿ ವಲಯ:ಮೂರು ಪ್ರಮುಖ ಅಂಶ

ವಸತಿ ವಲಯ:ಮೂರು ಪ್ರಮುಖ ಅಂಶ

ಮ್ಯಾಜಿಕ್‍ಬ್ರಿಕ್ಸ್ ಪ್ರಾಪ್‍ಇಂಡೆಕ್ಸ್ ಪ್ರಕಾರ, ವಸತಿ ವಲಯವು ಪ್ರಾಥಮಿಕವಾಗಿ ಮೂರು ಪ್ರಮುಖ ಅಂಶಗಳಿಂದ ಚಾಲಿತವಾಗಿದೆ:
• ನಗರದಲ್ಲಿ ವಾಣಿಜ್ಯ ಕ್ಷೇತ್ರದ ರಿಯಲ್ ಎಸ್ಟೇಟ್ ಆಕರ್ಷಕವಾಗಿ ಪ್ರಗತಿ ಹೊಂದಿರುವುದು ವಸತಿ ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
• 2 ಮತ್ತು 3ನೇ ಹಂತದ ಮೆಟ್ರೋ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ನಿವೇಶನಗಳ ಅಭಿವೃದ್ಧಿಯಾಗುತ್ತಿರುವುದು.
• ನಿರ್ಮಾಣ ಹಂತದಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತ ಹಳೆ ಮದ್ರಾಸ್ ರಸ್ತೆ ಮೂಲಕ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುವ ಹೊರ ವಲಯದ ವರ್ತುಲ ರಸ್ತೆಯು ಸುತ್ತಮುತ್ತಲ ಪ್ರದೇಶಗಳಲ್ಲಿ ವಸತಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರುವುದು.

ಆದಾಗ್ಯೂ, ಈ ಅಂಶಗಳು ಹೇಗೆ ಕೋವಿಡ್-19 ಸಾಂಕ್ರಾಮಿಕದಿಂದ ಮತ್ತು ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದ ಚೇತರಿಸಿಕೊಂಡ ಬಳಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಕುತೂಹಲದ ಅಂಶವಾಗಿದೆ.

ಅರ್ಧಕ್ಕೆ ನಿಂತಿರುವ ಹಲವು ಯೋಜನೆಗಳು

ಅರ್ಧಕ್ಕೆ ನಿಂತಿರುವ ಹಲವು ಯೋಜನೆಗಳು

ಮ್ಯಾಜಿಕ್‍ಬ್ರಿಕ್ಸ್ ನ ಸಂಶೋಧನೆಯಿಂದ ತಿಳಿದು ಬರುವಂತೆ, ಸ್ಥಿತಿ ಸಹಜತೆಯತ್ತ ಮರಳಿದ ಬಳಿಕ, ಮುಂದಿನ ಎರಡು ವರ್ಷಗಳು ವಸತಿ ವಲಯಕ್ಕೆ ಅತ್ಯಂತ ನಿರ್ಣಾಯಕ ಎನಿಸಲಿದೆ. ಏಕೆಂದರೆ ಅರ್ಧಕ್ಕೆ ನಿಂತಿರುವ ಹಲವು ಯೋಜನೆಗಳು 250 ಶತಕೋಟಿ ರೂಪಾಯಿಗಳ ಪುನಶ್ಚೇತನ ನಿಧಿಯನ್ನು ಆಧರಿಸಿದ್ದು, ಇದರಲ್ಲಿ ಇನ್ನೂ ಪೂರ್ಣಗೊಳ್ಳಬೇಕಿದೆ.

ಇದೇ ವೇಳೆ ಪ್ರಮುಖ ಮೆಟ್ರೋ ಲೇನ್‍ಗಳ ನಿರ್ಮಾಣ ಕಾರ್ಯವು ಸುತ್ತಮುತ್ತಲ ಪ್ರದೇಶಗಳನ್ನು ಮತ್ತು ವಾಣಿಜ್ಯ ಪ್ರದೇಶಗಳನ್ನು ಸರಾಗವಾಗಿ ಸಂಪರ್ಕಿಸಬೇಕಿದೆ. ಇದು ಪ್ರಗತಿಯ ಮುಂದಿನ ಹಂತವನ್ನು ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಕೊನೆಯದಾಗಿ, ಕೋವಿಡ್-19 ಪರಿಸ್ಥಿತಿ ಸುಧಾರಿತ ಬಳಿಕ ಈಗ ಎದುರಾಗಿರುವ ಸವಾಲುದಾಯಕ ಸನ್ನಿವೇಶವನ್ನು ಎದುರಿಸಿ, ಸರ್ವಸನ್ನದ್ಧವಾಗಿ ಮತ್ತು ಆಕರ್ಷಕವಾಗಿ ರಿಯಲ್ ಎಸ್ಟೇಟ್ ವಲಯ ಮೂಡಿಬರಬೇಕಾಗಿದೆ.

English summary
At the outset of the COVID-19, Bengaluru’s residential prices witnessed a YOY increase of 2.9% in the first quarter of 2020, fuelled by development in infrastructure and existence of numerous IT and ITES establishments, revealed the latest edition of Magicbricks’ PropIndex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X