ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 8ರಷ್ಟು ರಿಟರ್ನ್ಸ್, ಅಕ್ಷಯ ತದಿಗೆಯಂದು ಚಿನ್ನದ ಖರೀದಿ ತರವೇ?

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿಎರಡು ತಿಂಗಳಲ್ಲೇ ಕಾಣದಂಥ ಏರಿಕೆ ಕಂಡ ಬಳಿಕ ಕುಸಿದ ಹಳದಿ ಲೋಹದ ಬೆಲೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಕ್ಷಯ ತೃತೀಯ ವೇಳೆ ಏರಿಳಿತ ಹೆಚ್ಚಾಗುವ ಸೂಚನೆ ಸಿಕ್ಕಿತ್ತು. ಹಿಂದು ಹಾಗೂ ಜೈನರಿಗೆ ಅಕ್ಷಯ ತೃತೀಯದಿನದಂದು ಚಿನ್ನ ಖರೀದಿಸುವುದು ಶುಭಕರ ಎಂದು ನಂಬಲಾಗಿದೆ. ಈ ವರ್ಷ ಕೋವಿಡ್ ಸಂಕಷ್ಟ ಲಾಕ್ ಡೌನ್ ನಡುವೆ ಅಕ್ಷಯ ತದಿಗೆ ಚಿನ್ನ ಖರೀದಿ ಜೋರಾಗಲಿದ್ದು, ಚಿನಿವಾರ ಪೇಟೆಯಲ್ಲಿ ಭರ್ಜರಿ ವ್ಯವಹಾರದ ನಿರೀಕ್ಷೆ ಹೊಂದಲಾಗಿದೆ.

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಇದೆಲ್ಲದರ ನಡುವೆ ಚಿನ್ನದ ವ್ಯಾಪಾರ ಹೆಚ್ಚಳ ಸಾಧ್ಯತೆಯಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಕಂಡು ಬಂದ ಏರಿಕೆ ಪರಿಸ್ಥಿತಿ ಈಗಲೂ ಕಾಣಬಹುದು ಎಂಬ ಮಾಹಿತಿ ಸಿಕ್ಕಿದೆ.

ಹಣ ದುಬ್ಬರ, ಸಾಲದ ಮೇಲೆ ಆರ್ಥಿಕ ಪ್ರಗತಿ ನಿರ್ಧಾರವಾಗುವಂಥ ಪರಿಸ್ಥಿತಿ ನಡುವೆ ಹಳದಿ ಲೋಹದ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ, ಇಂದಿಗೂ ಸುರಕ್ಷತಾ ಹೂಡಿಕೆಗೆ ಚಿನ್ನವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದ್ದಾರೆ.

Covid Pandemic: Should you buy gold this Akshaya Tritiya?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1800 ಡಾಲರ್ ಮಟ್ಟದಲ್ಲಿರುವ ದರ 2050 ರಿಂದ 2200 ಡಾಲರ್ ತನಕ ಏರುವ ಸೂಚನೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, 46,462 ರು ಗೆ ಕುಸಿದಿದೆ. ಎಂಸಿಎಕ್ಸ್ ಫ್ಯೂಚರ್ ಗೋಲ್ಡ್ ಪ್ರತಿ 10 ಗ್ರಾಂಗೆ 47,560 ರುನಂತಿದೆ. ಅಪರಂಜಿ ಬೆಲೆ 47, 807ರು ಇದೆ..

ಕೋವಿಡ್ ಪರಿಸ್ಥಿತಿಯಲ್ಲಿ ಖರೀದಿ ಹೇಗೆ?
ಕೊವಿಡ್ 19 ಲಾಕ್ ಡೌನ್ ನಡುವೆಯೂ ಚಿನಿವಾರ ಪೇಟೆ ವಹಿವಾಟು ನಿಂತಿಲ್ಲ. ಅಂಗಡಿಗೆ ಹೋಗಿ ಚಿನ್ನಾಭರಣ ಖರೀದಿ ಸಾಧ್ಯವಿಲ್ಲದಿದ್ದರೂ ಡಿಜಿಟಲ್ ಗೋಲ್ಡ್ ಖರೀದಿ ಕ್ರೇಜ್ ಹೆಚ್ಚಾಗುತ್ತಿದೆ. ಚಿನ್ನದ ಇಟಿಎಫ್ ಕೂಡಾ ಉತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಈ ದಿನದಂದು ಚಿನ್ನದ ನಾಣ್ಯ, ಬಾರ್, ಆಭರಣ ಖರೀದಿಸಲು ಮಳಿಗೆಗಳಿಗೆ ಜನರು ಮುಗಿ ಬೀಳುತ್ತಿದ್ದರು. ಆದರೆ, ಈಗ ಡಿಜಿಟಲ್ ಗೋಲ್ಡ್ ಜನಪ್ರಿಯತೆ ಗಳಿಸುತ್ತಿದ್ದು, 2020ರಲ್ಲಿ ಅಕ್ಷಯ ತೃತೀಯ ದಿನದಂದು 10 ಕೆಜಿ ಡಿಜಿಟಲ್ ಗೋಲ್ಡ್ ಮಾರಾಟವಾಗಿತ್ತು.

ಚಿನ್ನದ ಇಟಿಎಫ್ ಏಪ್ರಿಲ್ ತಿಂಗಳಲ್ಲಿ 680.15 ಕೋಟಿ ಒಳ ಹರಿವು ಕಂಡಿದ್ದರೆ, ಮಾರ್ಚ್ ತಿಂಗಳಾಲ್ಲಿ 662.45 ಕೋಟಿ ರು ಹೂಡಿಕೆ ಕಂಡಿತ್ತು. ಜನವರಿ 2020 ರಿಂದ ಏಪ್ರಿಲ್ 2021ರ ಅವಧಿಯಲ್ಲಿ ನಿವ್ವಳ ಒಳ ಹರಿವು 9,089.63 ಕೋಟಿ ರು ಬಂದಿದೆ.

English summary
Covid Pandemic:Buying gold on Akshaya Tritiya is considered auspicious in Hindu and Jain traditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X