ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಹೊಸ ಕೊರೊನಾ ಭೀತಿ: ಕಚ್ಚಾ ತೈಲ ದರ ಶೇ. 3ರಷ್ಟು ಕುಸಿತ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಇಂಗ್ಲೆಂಡ್‌ನಲ್ಲಿ ಕಂಡುಬಂದ ಕೊರೊನಾವೈರಸ್ ಹೊಸ ಸೋಂಕು ಇಡೀ ವಿಶ್ವವನ್ನೇ ಮತ್ತೊಮ್ಮೆ ಆತಂಕಕ್ಕೊಳಪಡಿಸಿದ್ದು, ಭಾರತ ಈಗಾಗಲೇ ಬ್ರಿಟನ್‌ಗೆ ವಿಮಾನ ಹಾರಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರ ಜೊತೆಗೆ ಯೂರೋಪಿಯನ್ ಹಲವು ರಾಷ್ಟ್ರಗಳು ಈ ನಿರ್ಧಾರಕ್ಕೆ ಮುಂದಾಗಿವೆ. ಕಚ್ಚಾ ತೈಲ ಬೆಲೆಯು ಭವಿಷ್ಯದ ಬೇಡಿಕೆ ಮೇಲೆ ಪರಿಣಾಮ ಬೀರುವುದರಿಂದ ಶೇಕಡಾ 3ರಷ್ಟು ಕುಸಿತ ಕಂಡಿದೆ.

ಹೊಸ ಬಗೆ ಕೊರೊನಾವೈರಸ್ ಪತ್ತೆಯಾದ ಬಳಿಕ ಬ್ರಿಟನ್ನಿನ ಬಹುತೇಕ ಕಡೆಯಲ್ಲಿ ವಹಿವಾಟುಗಳು ಸ್ಥಗಿತಗೊಂಡಿವೆ. ತೈಲ ಬೆಲೆಯಲ್ಲಿ ಚೇತರಿಕೆ ಕಾಣುವುದಿಲ್ಲ ಎಂಬ ಆತಂಕವು ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಸತತ 12 ದಿನಗಳಿಂದ ಪೆಟ್ರೋಲ್ ದರದಲ್ಲಿ ವ್ಯತ್ಯಾಸವೇ ಇಲ್ಲ!ಸತತ 12 ದಿನಗಳಿಂದ ಪೆಟ್ರೋಲ್ ದರದಲ್ಲಿ ವ್ಯತ್ಯಾಸವೇ ಇಲ್ಲ!

ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 1.74 ಅಮೆರಿಕನ್ ಡಾಲರ್‌ ಅಥವಾ ಶೇಕಡಾ 3ರಷ್ಟು ಇಳಿಕೆ ಆಗಿದೆ. ಶುಕ್ರವಾರದ ವಹಿವಾಟಿನಲ್ಲಿ ಶೇಕಡಾ 1.5ರಷ್ಟು ಬೆಲೆ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲವು ಸೋಮವಾರ ಶೇಕಡಾ 3.3ರಷ್ಟು ಕುಸಿತ ಕಂಡಿತು. ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ ಕಚ್ಚಾ ತೈಲದ ಬೆಲೆಯಲ್ಲಿ 1.66 ಡಾಲರ್ ಇಳಿಕೆಗೊಂಡಿದೆ.

Covid New Virus Fear: Oil Prices Drop 3%

ಕೊರೊನಾವೈರಸ್ ಲಸಿಕೆ ಸಿಗುವ ಆಶಾಭಾವದಿಂದಾಗಿ ತೈಲ ಬೆಲೆಯು ಸತತ ಏಳು ವಾರಗಳಿಂದ ಏರಿಕೆ ಕಂಡು ಬಂದಿತ್ತು. ಆದರೆ ಈಗ ಹೊಸ ಕೊರೊನಾವೈರಸ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದಂತೆ ಕಾಣುತ್ತಿದೆ.

English summary
Oil prices dropped about 3% on Monday as a fast-spreading new coronavirus strain that has shut down much of the United Kingdom fuelled worries over a slower recovery in fuel demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X