ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟ: 10 ಸಾವಿರ ಕೋಟಿ ನೆರವು ಕೇಳಿದ ಎನ್‌ಬಿಎಫ್‌ಸಿ

|
Google Oneindia Kannada News

ನವದೆಹಲಿ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಆರ್ಥಿಕತೆಯ ಸಂದರ್ಭದಲ್ಲಿ ವಿಶೇಷ ನಗದು ಯೋಜನೆಯಡಿಯಲ್ಲಿ(Special Liquidity scheme) 10,000 ಕೋಟಿ ನೆರವು ನೀಡುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ಯೋಜನೆಯನ್ನು ಜುಲೈ 1 ರಂದು ಪ್ರಾರಂಭಿಸಲಾಯಿತು. ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ (ಎಸ್‌ಬಿಐಸಿಎಪಿ) ಸ್ಥಾಪಿಸಿದ ಟ್ರಸ್ಟ್ ಹೊರಡಿಸಿದ ಸರ್ಕಾರಿ ಖಾತರಿಯ ವಿಶೇಷ ಭದ್ರತೆಗಳಿಗೆ ಚಂದಾದಾರರಾಗುವ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಯೋಜನೆಗೆ ಹಣವನ್ನು ಒದಗಿಸಲಿದೆ.

Covid Impact:Stressed NBFCs, HFCs Seek About Rs 10000 Crore Financing Support

ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ:ಆರ್‌ಬಿಐಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ:ಆರ್‌ಬಿಐ

ಈಗಾಗಲೇ 9,875 ಕೋಟಿ ನೆರವು ನೀಡುವಂತೆ 'ಎಸ್‌ಬಿಐ ಸಿಎಪಿ'ಗೆ ಜುಲೈ 7ರಂದು 24 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲು ಬಂದ ಅರ್ಜಿಗಳಿಗೆ ಒಪ್ಪಿಗೆ ನೀಡಿದ್ದು, ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ.

English summary
The finance ministry on Sunday said financing requests of close to Rs 10,000 crore have been received under the special liquidity scheme worth Rs 30,000 crore for stressed NBFCs and HFCs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X