ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆಯಿಂದ ಆರ್‌ಬಿಐಗೆ ಆದ ಉತ್ಪಾದನಾ ನಷ್ಟ ಎಷ್ಟು?

|
Google Oneindia Kannada News

ನವದೆಹಲಿ, ಜೂನ್ 18: ಕೊರೊನಾ ಸೋಂಕು ಎಂಬುದು ದೇಶದ ಆರ್ಥಿಕತೆ ಮೇಲೆ ಅಗಾಧ ಪರಿಣಾಮ ಬೀರಿದೆ.

ಸಣ್ಣ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಯೂ ಕೂಡ ಹೊಡೆದ ಅನುಭವಿಸಿದ್ದಾರೆ. ಹಾಗೆಯೇ ಆರ್‌ಬಿಐ ಕೂಡ ಉತ್ಪಾದನಾ ನಷ್ಟ ಅನುಭವಿಸಿದೆ.

ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜಿಸಿದೆ.

RBI

ದೇಶೀಯ ಬೇಡಿಕೆಯಲ್ಲಿ ತೀವ್ರ ಹೊಡೆತ ಬಿದ್ದರೂ, ಒಟ್ಟಾರೆ ಪೂರೈಕೆಯ ಪರಿಸ್ಥಿತಿ ಸಮಾಧಾನಕರವಾಗಿದೆ. ಕೃಷಿ ಮತ್ತು ಸಂಪರ್ಕವಿಲ್ಲದ ಸೇವೆಗಳು ಮಾರುಕಟ್ಟೆ ಸ್ಥಿತಿಯನ್ನು ಹಿಡಿದಿಟ್ಟುಕೊಂಡಿವೆ. ಕೋವಿಡ್ ನಿರ್ಬಂಧಗಳ ಮಧ್ಯೆ ಕೈಗಾರಿಕೆ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಮಹತ್ವ ಸೂಚನೆಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಮಹತ್ವ ಸೂಚನೆ

ಈ ತಿಂಗಳ ಮಾಸಿಕ ಬುಲೆಟಿನ್ ನಲ್ಲಿ ಆರ್‌ಬಿಐ ಕೊರೊನಾ ವೈರಸ್ ನ ನಿರ್ಬಂಧದಿಂದಾಗಿ ಸಣ್ಣ ನಗರಗಳಿಗೆ ಮತ್ತು ಗ್ರಾಮಗಳಲ್ಲಿ ಕೂಡ ಬೇಡಿಕೆ ಕಡಿತಗೊಂಡಿದೆ. ಭಾರತದ ಆರ್ಥಿಕತೆ ಸಾಂಕ್ರಾಮಿಕದ ಎರಡನೇ ಅಲೆಯೊಂದಿಗೆ ಸೆಣಸಾಡುತ್ತಿದೆ ಎಂದು ಹೇಳಿದೆ.

ದೇಶದ ನಾಗರಿಕರಿಗೆ ಲಸಿಕೆ ನೀಡುವ ಪ್ರಮಾಣವು ಆರ್ಥಿಕ ವ್ಯವಸ್ಥೆ ಚೇತರಿಕೆ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಆರ್‌ಬಿಐ ಹೇಳಿದೆ.

ಹಣಕಾಸು ವರ್ಷ 2021ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 24ರಷ್ಟು ಅಂದರೆ ರಾಷ್ಟ್ರೀಯ ಉತ್ಪಾದನೆಯಲ್ಲಿ 11 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗಬಹುದು ಅಂದಾಜಿಸಲಾಗಿದ್ದು, ಆರ್ಥಿಕ ತಜ್ಞರ ಅಂದಾಜಿಗಿಂತ 5-6 ಲಕ್ಷ ಕಡಿಮೆಯಾಗಿದೆ.

ಎಸ್‌ಬಿಐ ರಿಸರ್ಚ್ ಪ್ರಸಕ್ತ ತ್ರೈಮಾಸಿಕದ ಜಿಡಿಪಿ ನಷ್ಟವನ್ನು 6 ಲಕ್ಷ ಕೋಟಿ ರೂ ಎಂದು ಪರಿಗಣಿಸಿಸಲಾಗಿದೆ. ಲಾಕ್‌ಡೌನ್‌ ಜೂನ್ ಅಂತ್ಯದವರೆಗೆ ಮುಂದುವರಿಯಬಹುದು.

English summary
The Reserve Bank of India on Wednesday said that the country’s economy could suffer a loss of Rs 2 lakh crore in output the current financial year as a result of the second wave of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X