ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಹಾವಳಿ 'ದೇವರ ಆಟ' ಎಂದ ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಆಗಸ್ಟ್ 27: ಕೊರೊನಾ ವೈರಸ್ ಪಿಡುಗಿನಿಂದಾಗಿ ದೇಶದಲ್ಲಿ ಇದುವರೆಗೂ ಸರಕು ಮತ್ತು ಸೇವೆಗಳ ತೆರಿಗೆ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ರೂ ಕೊರತೆಯುಂಟಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೊನಾ ವೈರಸ್ ಹಾವಳಿಯ ಕಾರಣದಿಂದ ಸರಕು ಮತ್ತು ಸೇವೆಗಳ ತೆರಿಗೆ ಸಂಗ್ರಹಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಘೋಷಿಸಲಾಯಿತು.

Recommended Video

Fixed Deposit ಮೇಲಿನ ಬಡ್ಡಿ ದರ ಇಳಿಕೆ ಮಾಡಿದ HDFC Bank | Oneindia Kannada

ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ಹಾವಳಿ 'ದೇವರ ಆಟ' ಎಂದ ನಿರ್ಮಲಾ, ಪ್ರಸಕ್ತ ವರ್ಷದ ಹಣಕಾಸು ವರ್ಷದಲ್ಲಿ ಆರ್ಥಿಕತೆಗೆ ತೀವ್ರ ಹಿನ್ನಡೆಯುಂಟಾಗಲು ಕಾರಣವಾಗಿದೆ. ಹಿಂದೆಂದೂ ಯಾವುದೇ ಇಂತಹ ಸಂಗತಿ ಜಿಎಸ್‌ಟಿ ಸಂಗ್ರಹಕ್ಕೆ ತೊಂದರೆ ನೀಡಿರಲಿಲ್ಲ ಎಂದಿದ್ದಾರೆ.

41ನೇ ಜಿಎಸ್‌ಟಿ ಮಂಡಳಿ ಸಭೆ: ರಾಜ್ಯಗಳಿಗೆ GST ಪರಿಹಾರ 1.65 ಲಕ್ಷ ಕೋಟಿ ರೂಪಾಯಿ41ನೇ ಜಿಎಸ್‌ಟಿ ಮಂಡಳಿ ಸಭೆ: ರಾಜ್ಯಗಳಿಗೆ GST ಪರಿಹಾರ 1.65 ಲಕ್ಷ ಕೋಟಿ ರೂಪಾಯಿ

ಈ ವರ್ಷ ನಾವು ಅತಿಯಾದ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದೇವೆ. ನಾವು ನೋಡುತ್ತಿರುವುದು ದೇವರ ಆಟ. ಇದರಿಂದ ಆರ್ಥಿಕತೆ ಕುಗ್ಗುವಿಕೆ ಉಂಟಾಗುವ ಸಾಧ್ಯತೆ ಇದೆ. ನಾವು ನಿರೀಕ್ಷಿಸಿದ್ದ ಪ್ರಗತಿ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

 Covid-19 Is An Act Of God: Nirmala Sitharaman In GST Council Meeting

ವಾರ್ಷಿಕ ಜಿಎಸ್‌ಟಿ ಪರಿಹಾರ ಅಗತ್ಯವು ಸುಮಾರು 3 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿತ್ತು. ಸೆಸ್ ಸಂಗ್ರಹವು ಸುಮಾರು 65,000 ಕೋಟಿ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ನಮಗೆ 2.35 ಲಕ್ಷ ಕೋಟಿ ವಾರ್ಷಿಕ ಸಂಗ್ರಹ ಖೋತಾ ಉಂಟಾಗಿದೆ ಎಂದು ಹಣಕಾಸು ಸಚಿವಾಲಯದ ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದರು.

English summary
Finanance Minister Nirmala Sitharaman after GST Council meeting said, coronavirus pandemic is an act of god.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X