ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಕ್ಸೆಡ್ ಡೆಪಾಸಿಟ್‌ ಮೊರೆ ಹೋದ ಅನಿವಾಸಿ ಭಾರತೀಯರು: ಏನು ಉಪಯೋಗ?

|
Google Oneindia Kannada News

ನವದೆಹಲಿ,ಜುಲೈ 23: ಸದ್ಯ ವಿಶ್ವದ ಯಾವ ಮೂಲೆಗೆ ಹೋದರೂ ಕೊರೊನಾವೈರಸ್ ಮತ್ತು ಅದರ ವ್ಯತಿರಿಕ್ತ ಪರಿಣಾಮಗಳೇ ಕಾಣಸಿಗುತ್ತವೆ. ಲಕ್ಷಾಂತರ ಸಾವು-ನೋವು, ಕೋಟ್ಯಾಂತರ ಉದ್ಯೋಗ ನಷ್ಟದ ಜೊತೆಗೆ ಆರ್ಥಿಕತೆಯು ಮಂದಗತಿಯಲ್ಲಿದೆ. ಹಲವು ದೇಶಗಳು ಲಾಕ್‌ಡೌನ್ ತೆರವುಗೊಳಿಸಿದರೂ ಜಾಗತಿಕ ಆರ್ಥಿಕತೆ ಚೇತರಿಕೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು.

Recommended Video

ಅಭಿಮಾನಿಗಳೊಂದಿಗೆ ಖುಷಿ ವಿಚಾರ ಹಂಚಿಕೊಂಡ ಸುಮಲತಾ | Oneindia Kannada

ಕೊರೊನಾಗೆ ಲಸಿಕೆ ಸಿಗದೇ ಇರುವುದು ಹೂಡಿಕೆದಾರರಲ್ಲಿ ಅನಿಶ್ಚಿತತೆ ಮನೆ ಮಾಡಿದೆ. ಸುರಕ್ಷಿತ ಹೂಡಿಕೆಗಳಾದ ಚಿನ್ನದ ಮೇಲಿನ ಹೂಡಿಕೆಗೆ ಒಲವು ತೋರಿದ್ದಾರೆ. ಇದರ ನಡುವೆ ಅನಿವಾಸಿ ಭಾರತೀಯರು ನಿಶ್ಚಿತ ಠೇವಣಿಗೆ ಮೊರೆ ಹೋಗಿದ್ದಾರೆ.

SBI ಫಿಕ್ಸೆಡ್ ಡೆಪಾಸಿಟ್ ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?SBI ಫಿಕ್ಸೆಡ್ ಡೆಪಾಸಿಟ್ ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

ನಿಶ್ಚಿತ ಠೇವಣಿಯ ಕಡೆಗೆ ಅನಿವಾಸಿ ಭಾರತೀಯರ ಆಸಕ್ತಿ

ನಿಶ್ಚಿತ ಠೇವಣಿಯ ಕಡೆಗೆ ಅನಿವಾಸಿ ಭಾರತೀಯರ ಆಸಕ್ತಿ

ಹೌದು, ಇತ್ತೀಚಿನ ಕೆಲ ತಿಂಗಳಲ್ಲಿ ನಿಶ್ಚಿತ ಠೇವಣಿಯಲ್ಲಿ ಅನಿವಾಸಿ ಭಾರತೀಯರ ಆಸಕ್ತಿ ಹೆಚ್ಚಾಗಿದೆ. ಇದಕ್ಕೆ ಒಂದು ಉದಾಹರಣೆ ಕೇರಳದ ಬ್ಯಾಂಕುಗಳಲ್ಲಿ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರುಪಾಯಿಗಳಷ್ಟು ನಿಶ್ಚಿತ ಠೇವಣಿಯನ್ನು ಇಡಲಾಗಿದೆ.

ಉಳಿತಾಯದ ಹಣವನ್ನು ಸುರಕ್ಷಿತವಾಗಿಸಲು ಬ್ಯಾಂಕುಗಳಲ್ಲಿ ಠೇವಣಿ

ಉಳಿತಾಯದ ಹಣವನ್ನು ಸುರಕ್ಷಿತವಾಗಿಸಲು ಬ್ಯಾಂಕುಗಳಲ್ಲಿ ಠೇವಣಿ

ಕೊರೊನಾವೈರಸ್ ವಿಶ್ವದ ಆರ್ಥಿಕತೆಯನ್ನು ನಲುಗುವಂತೆ ಮಾಡಿದ್ದು ಈ ಸಮಯದಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡುವ ಧೈರ್ಯ ಬಹುತೇಕರಲ್ಲಿ ಕಡಿಮೆ. ಹೀಗಾಗಿ ವಿದೇಶದಲ್ಲಿ ಕೆಲಸ ಮಾಡುವ ಅನೇಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಪರಿವರ್ತಿಸುತ್ತಿದ್ದಾರೆ.

ಹಿರಿಯ ನಾಗರಿಕರಿಗೆ SBI ವಿಶೇಷ ಫಿಕ್ಸೆಡ್ ಡೆಪಾಸಿಟ್ ವಿವರ ಇಲ್ಲಿದೆಹಿರಿಯ ನಾಗರಿಕರಿಗೆ SBI ವಿಶೇಷ ಫಿಕ್ಸೆಡ್ ಡೆಪಾಸಿಟ್ ವಿವರ ಇಲ್ಲಿದೆ

ಮನೆ, ಜಮೀನು ಖರೀದಿಸುತ್ತಿದ್ದವರು ನಿಶ್ಚಿತ ಠೇವಣಿಗಳ ಮೊರೆ

ಮನೆ, ಜಮೀನು ಖರೀದಿಸುತ್ತಿದ್ದವರು ನಿಶ್ಚಿತ ಠೇವಣಿಗಳ ಮೊರೆ

ಈ ಮೊದಲು ಅರಬ್ ರಾಷ್ಟ್ರಗಳು ಸೇರಿದಂತೆ ವಿದೇಶದಲ್ಲಿ ದುಡಿಯುತ್ತಿದ್ದ ಭಾರತೀಯರು ತಾವು ಕಷ್ಟಪಟ್ಟು ದುಡಿದ ಹಣವನ್ನು ಜಮೀನು, ಆಸ್ತಿ ಖರೀದಿಗೆ ಬಳಸುತ್ತಿದ್ದರು. ಆದರೆ ಇದೀಗ ಅದೆಲ್ಲವನ್ನು ಬಿಟ್ಟು ತವರಿನಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಸ್ವರೂಪದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ನಿಶ್ಚಿತ ಠೇವಣಿಯಿಂದ ಏನು ಉಪಯೋಗ?

ನಿಶ್ಚಿತ ಠೇವಣಿಯಿಂದ ಏನು ಉಪಯೋಗ?

ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರೀಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.

ಅನಿವಾಸಿ ಭಾರತೀಯರು ಕೂಡ ಕೊರೊನಾ ಬಿಕಟ್ಟಿನ ಈ ಸಮಯದಲ್ಲಿ ತಮ್ಮ ಹಣ ಸುರಕ್ಷಿತವಾಗಿರಲಿ ಎಂದು ನಿಶ್ಚಿತ ಠೇವಣಿಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಹಿರಿಯ ನಾಗರೀಕರ ಹೆಸರಿನಲ್ಲಿ ಇಟ್ಟರೆ ಹೆಚ್ಚುವರಿ 0.50 ಪರ್ಸೆಂಟ್ ಬಡ್ಡಿ ದೊರೆಯುತ್ತದೆ.

English summary
Covid-19 outbreak impact total NRI deposits increased in kerala and also several part of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X