• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

52 ಲಕ್ಷ ದಾಟಿದ ಕೊರೊನಾ ಸಂಖ್ಯೆ: ಹೀಗಾದ್ರೆ ಭಾರತದ ಆರ್ಥಿಕ ಪರಿಸ್ಥಿತಿ ಗತಿ ಏನು?

|

ನವದೆಹಲಿ, ಸೆಪ್ಟೆಂಬರ್ 18: ಭಾರತದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಈಗಾಗಲೇ 52 ಲಕ್ಷ ಪ್ರಕರಣಗಳು ದಾಟಿದೆ. ಕೆಲವು ದಿನಗಳ ಹಿಂದೆ ರಷ್ಯಾ ಮತ್ತು ಬ್ರೆಜಿಲ್ ದಾಟಿದ್ದ ಭಾರತ, ಅಕ್ಟೋಬರ್ ವೇಳೆಗೆ ಯುಎಸ್ (69 ಲಕ್ಷ ಪ್ರಕರಣಗಳು) ದಾಟಿದರೂ ಆಶ್ಚರ್ಯವೇನಿಲ್ಲ. ಮತ್ತೊಂದೆಡೆ, ಭಾರತೀಯ ಆರ್ಥಿಕತೆಯು ತೀವ್ರವಾಗಿ ಹಾನಿಗೊಳಗಾಗಿದ್ದು, 2020-21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಒಟ್ಟಾರೆಯಾಗಿ ಶೇಕಡಾ 23.9 ರಷ್ಟು ಕುಸಿದಿದೆ.

ಪೂರ್ಣ ಹಣಕಾಸು ವರ್ಷದಲ್ಲಿ ಇದು ಮೈನಸ್ 9 ರಿಂದ ಮೈನಸ್ 14 ರವರೆಗೆ ಇರಬಹುದು ಎಂದು ವಿವಿಧ ರೇಟಿಂಗ್ ಏಜೆನ್ಸಿಗಳು ಹೇಳುತ್ತಿವೆ. ಆರ್ಥಿಕ ಚಟುವಟಿಕೆಗಳು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದರೂ, ಹೆಚ್ಚುತ್ತಿರುವ ಪ್ರಕರಣಗಳು ಆತಂಕಕಾರಿಯಾಗಿದೆ. ಲಾಕ್ ಡೌನ್ ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿರಬಹುದು ಎಂದು ಅವರು ಹೇಳುತ್ತಾರೆ. ಭಾರತ ಈಗ ಹೊಸ ಜಾಗತಿಕ ಹಾಟ್‌ಸ್ಪಾಟ್‌ ಆಗಿ ಮಾರ್ಪಟ್ಟಿದೆ.

ಭಾರತದ ಜಿಡಿಪಿ ಶೇ. 8.6ಕ್ಕೆ ಕುಸಿಯುವ ಸಾಧ್ಯತೆ, ಹಣಕಾಸಿನ ಉತ್ತೇಜನ ಅಗತ್ಯವಿದೆ : USB ಸೆಕ್ಯುರಿಟೀಸ್

ಅಂತರರಾಷ್ಟ್ರೀಯ ಅರ್ಥಶಾಸ್ತ್ರಜ್ಞರಾದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ಗೋಲ್ಡ್ಮನ್ ಸ್ಯಾಚ್ಸ್, ಕ್ರಿಸಿಲ್ ಮತ್ತು ಅನೇಕ ಅರ್ಥಶಾಸ್ತ್ರಜ್ಞರು ಈಗಾಗಲೇ ಭಾರತದ ಬೆಳವಣಿಗೆಯ ಮುನ್ಸೂಚನೆಗಳನ್ನು ಐತಿಹಾಸಿಕ ಕನಿಷ್ಠಕ್ಕೆ ಪರಿಷ್ಕರಿಸಿದ್ದಾರೆ. ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಜಿಡಿಪಿ ಬೆಳವಣಿಗೆಯನ್ನು ಮೈನಸ್ ಶೇಕಡಾ 14.8 ಎಂದು ಅಂದಾಜಿಸಿದೆ.

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮೈನಸ್ 9 ಎಂದು ಅಂದಾಜಿಸಿದ್ದು, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಶೇಕಡಾ -10.2 ಎಂದು ಹೇಳಿದೆ. ಮಹಾರಾಷ್ಟ್ರದಂತಹ ಪ್ರದೇಶಗಳಲ್ಲಿ ಕೊರೊನಾವೈರಸ್ ಹರಡುವುದನ್ನು ತಡೆಯುವಲ್ಲಿ ವಿಫಲವಾದರೆ ವ್ಯಾಪಾರ ಕಾರ್ಯಾಚರಣೆ ಮತ್ತು ಬಳಕೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಇದು ಆರ್ಥಿಕ ಬೆಳವಣಿಗೆಯ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

   ಏನು ಇಲ್ಲ ನಮ್ ಕೈಯಲ್ಲಿ ,ಎಲ್ಲಾ ದೊಡ್ಡೋರು decide ಮಾಡ್ಬೇಕು | Oneindia Kannada

   ಕೊರೊನಾ ಪ್ರಕರಣಗಳಲ್ಲಿ ಅಮೆರಿಕಾ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಒಟ್ಟು ಸಾವಿನ ಪ್ರಕರಣಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿದೆ. ಎರಡನೇ ಹಂತದ ವೈರಸ್ ಈಗಾಗಲೇ ವಿಶ್ವದಾದ್ಯಂತ ಕಳವಳ ವ್ಯಕ್ತಪಡಿಸಿದ್ದರೂ, ಮೊದಲ ಹಂತದ ಕೊರೊನಾ ಭಾರತದಲ್ಲಿ ಮುಗಿದಿಲ್ಲ ಎಂದು ಫಿಚ್ ರೇಟಿಂಗ್ಸ್ ಲಿಮಿಟೆಡ್ ಯುನಿಟ್ ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಲಿಮಿಟೆಡ್‌ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಕುಮಾರ್ ಸಿನ್ಹಾ ಹೇಳಿದ್ದಾರೆ. ಈ ಪರಿಸ್ಥಿತಿಗಳಲ್ಲಿ, ಭಾರತದ ಜಿಡಿಪಿ ಶೇಕಡಾ 11.8 ರಷ್ಟು ಕಡಿಮೆಯಾಗುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ.

   English summary
   India coronavirus cases spike will impact India’s growth projections from already historic lows as the virus continues to spread.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X