• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಎಫೆಕ್ಟ್‌:ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಶೇಕಡಾ 81ರಷ್ಟು ಕುಸಿತ

|

ನವದೆಹಲಿ, ಜೂನ್ 30: ದೇಶದಲ್ಲಿ ಕೊರೊನಾ ಎಫೆಕ್ಟ್‌ ಮಾಡಿರುವ ಅವಾಂತರ ಅಷ್ಟಿಷ್ಟಲ್ಲ. ಬಹುತೇಕ ಎಲ್ಲಾ ವ್ಯವಹಾರಗಳನ್ನು ಬುಡಮೇಲು ಮಾಡಿದೆ. ಇದರಿಂದ ರಿಯಲ್ ಎಸ್ಟೇಟ್ ಕೂಡ ಹೊರತಾಗಿಲ್ಲ.

   SSLC and PUC Result dates finalized,ಫಲಿತಾಂಶ ದಿನಾಂಕ ಹೇಳಿದ ಶಿಕ್ಷಣ ಸಚಿವರು | Oneindia Kannada

   ಪ್ರಾಪರ್ಟಿ ಕನ್ಸಲ್ಟೆಂಟ್ಸ್ ANAROCK ಅವರ ಇತ್ತೀಚಿನ ವರದಿಯ ಪ್ರಕಾರ, 2020 ರ ಎರಡನೇ ತ್ರೈಮಾಸಿಕಲ್ಲಿ ಸುಮಾರು 12,740 ವಸತಿ ಘಟಕಗಳು ಮಾರಾಟವಾಗಿವೆ. ಆದರೆ ಇದೇ ಅವಧಿಯಲ್ಲಿ 2019 ರ 2ನೇ ತ್ರೈಮಾಸಿಕದಲ್ಲಿ 68,600 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ವರ್ಷದಿಂದ ವರ್ಷಕ್ಕೆ ಅಗ್ರ ನಗರಗಳಲ್ಲಿ ಶೇಕಡಾ 81ರಷ್ಟು ಮಾರಾಟ ಇಳಿಕೆ ಕಂಡಿದೆ.

   ಲಾಕ್‌ಡೌನ್ ಎಫೆಕ್ಟ್: ಮೇ ತಿಂಗಳಿನಲ್ಲಿ ವಾಹನ ಮಾರಾಟ 90% ಇಳಿಕೆ

   2020 ರ ಮೊದಲ ತ್ರೈಮಾಸಿಕದಲ್ಲಿ 45,200 ಯುನಿಟ್‌ಗಳಿಂದ ಮಾರಾಟವಾಗಿದ್ದು ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡಾ 72ರಷ್ಟು ಕುಸಿದಿದೆ. 2020 ರ ಎರಡನೇ ತ್ರೈಮಾಸಿಕದಲ್ಲಿ(ಏಪ್ರಿಲ್-ಜೂನ್) ಭಾರತದ ಅಗ್ರ 7 ನಗರಗಳಲ್ಲಿ ವಸತಿ ಮಾರಾಟ ಮತ್ತು ಹೊಸ ಉಡಾವಣೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿವೆ.

   ದೆಹಲಿಯಲ್ಲಿ ವಸತಿ ಮಾರಾಟ ಶೇಕಡಾ 83ರಷ್ಟು ಕುಸಿತ

   ದೆಹಲಿಯಲ್ಲಿ ವಸತಿ ಮಾರಾಟ ಶೇಕಡಾ 83ರಷ್ಟು ಕುಸಿತ

   ಹಿಂದಿನ ವರ್ಷ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ದೆಹಲಿಯು ಗಮನಾರ್ಹವಾಗಿ ಕಡಿಮೆ ಮಾರಾಟವನ್ನು ಕಂಡಿದೆ. ಎನ್‌ಸಿಆರ್ ಮತ್ತು ಎಂಎಂಆರ್ ಮಾರಾಟವು 2ನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತಲಾ ಶೇಕಡಾ 83ರಷ್ಟು ಮತ್ತು ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 74ರಷ್ಟು ಕಡಿಮೆಯಾಗಿದೆ.

   ಎರಡನೇ ತ್ರೈಮಾಸಿಕದಲ್ಲಿ ಸರಿಸುಮಾರು 12,740 ಯುನಿಟ್‌ಗಳು ಮಾರಾಟವಾದವು, ಇದು ಶೇಕಡಾ 81ರಷ್ಟು ಕಡಿಮೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ವಸತಿ ಮಾರಾಟವು 45,200 ಯುನಿಟ್ಗಳಷ್ಟಿತ್ತು, ಹೀಗಾಗಿ ಶೇಕಡಾ 72ರಷ್ಟು ಕುಸಿಯಿತು

   ಮುಂಬೈನಲ್ಲಿ ಭಾರೀ ಪ್ರಮಾಣದಲ್ಲಿ ವಸತಿ ಮಾರಾಟ ಕುಸಿತ

   ಮುಂಬೈನಲ್ಲಿ ಭಾರೀ ಪ್ರಮಾಣದಲ್ಲಿ ವಸತಿ ಮಾರಾಟ ಕುಸಿತ

   ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೋವಿಡ್-19 ಎಫೆಕ್ಟ್‌ ಆಗಿರುವ ಮಹಾನಗರಿ ಮುಂಬೈ ದೇಶದಲ್ಲಿ ವಸತಿ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಇತರೆ ಎಲ್ಲಾ ನಗರಗಳಲ್ಲಿ ಗರಿಷ್ಠ 3,620 ಯುನಿಟ್‌ಗಳ ವಸತಿ ಮಾರಾಟ ಕುಸಿತ ಕಂಡಿದೆ. ಆದರೆ ಮುಂಬೈನಲ್ಲಿ ಇನ್ನೂ ಹೆಚ್ಚು ಪ್ರಮಾಣದ ಕುಸಿತ ಕಂಡಿದೆ. 2019 ರ ಎರಡನೇ ತ್ರೈಮಾಸಿಕದಲ್ಲಿ 2020ರ ಕ್ಯೂ 2 ರಲ್ಲಿ ಎಂಎಂಆರ್ ಮಾರಾಟವು ಶೇಕಡಾ 83ರಷ್ಟು ಕಡಿಮೆಯಾಗಿದೆ. ಪ್ರಸ್ತುತ ತ್ರೈಮಾಸಿಕ ಮಾರಾಟವು ಸುಮಾರು 3,620 ಯುನಿಟ್‌ಗಳಲ್ಲಿ ದಾಖಲಾಗಿದೆ.

   ವಲಸೆ ಕಾರ್ಮಿಕರಿಗೆ ಸರ್ಕಾರದ ಕೈಗೆಟುಕುವ ಬಾಡಿಗೆ ವಸತಿ ಯೋಜನೆ

   ಬೆಂಗಳೂರು, ಪುಣೆಗೂ ತಟ್ಟಿದ ಕೊರೊನಾ ಬಿಸಿ

   ಬೆಂಗಳೂರು, ಪುಣೆಗೂ ತಟ್ಟಿದ ಕೊರೊನಾ ಬಿಸಿ

   2020 ರ ಎರಡನೇ ತ್ರೈಮಾಸಿಕದಲ್ಲಿ ಕೇವಲ ನಾಲ್ಕು ಯೋಜನೆಗಳನ್ನು ಪ್ರಾರಂಭಿಸಲಾಯಿತು. ಬೆಂಗಳೂರಿನಲ್ಲಿ ಎರಡು ಮತ್ತು ಪುಣೆ ಮತ್ತು ಕೋಲ್ಕತ್ತಾದಲ್ಲಿ ತಲಾ ಒಂದು ಯೋಜನೆಗಳು. ಪುಣೆಯಲ್ಲಿ 2020 ರ ಏಪ್ರಿಲ್-ಜೂನ್ ಅವಧಿಯಲ್ಲಿ ಕೇವಲ 750 ಯುನಿಟ್‌ಗಳು (ಕೇವಲ ಒಂದು ಯೋಜನೆಯಲ್ಲಿ) ಮಾರಾಟವಾಗಿದೆ. ಆದರೆ ಇದೇ 2019 ರ ಕ್ಯೂ 2 ರಲ್ಲಿ 10,700 ಮತ್ತು ಕ್ಯೂ 1, 2020 ರಲ್ಲಿ 7,800 ಯುನಿಟ್‌ಗಳಿಗೆ ಹೋಲಿಸಿದರೆ, ಇದು ಕ್ರಮವಾಗಿ ಶೇಕಡಾ 93 ಮತ್ತು ಶೇಕಡಾ 90ರಷ್ಟು ಕುಸಿತವಾಗಿದೆ.

   ಅಂದಾಜು. 2020 ರ ಏಪ್ರಿಲ್-ಜೂನ್ ಅವಧಿಯಲ್ಲಿ ಬೆಂಗಳೂರಿನಲ್ಲಿ 2,990 ಯುನಿಟ್‌ಗಳು ಮಾರಾಟವಾದವು. ಆದರೆ ಒಂದು ವರ್ಷದ ಹಿಂದೆ 13,150 ಯುನಿಟ್‌ಗಳು ಮತ್ತು 2020 ರ ಕ್ಯೂ 1 ರ ಹಿಂದಿನ ತ್ರೈಮಾಸಿಕದಲ್ಲಿ 8,630 ಯುನಿಟ್‌ಗಳು ಮಾರಾಟವಾಗಿದ್ದುವ. ಕಳೆದ ವರ್ಷದಿಂದ ಈ ವರ್ಷಕ್ಕೆ ಶೇಕಡಾ 77 ಮತ್ತು ಕ್ಯೂ-ಒ-ಕ್ಯೂ ಶೇಕಡಾ 65ರಷ್ಟು ಇಳಿಕೆಯಾಗಿದೆ. ಹೊಸ ಪ್ರಾಜೆಕ್ಟ್‌ಗಳಲ್ಲಿ ಕೇವಲ ನಾಲ್ಕು ಯೋಜನೆಗಳಿಗೆ ಕಾರಣವಾಗಿವೆ . ಅಲ್ಲದೆ ಹೊಸದಾಗಿ ಪ್ರಾರಂಭಿಸುವ ವಸತಿ ಘಟಕಗಳ ಪ್ರಮಾಣವು ಶೇಕಡಾ 95ರಷ್ಟು ಕುಸಿದಿದೆ.

   ಕೊಲ್ಕತ್ತಾದಲ್ಲಿ 98 ಪರ್ಸೆಂಟ್ ಮಾರಾಟ ಇಳಿಕೆ

   ಕೊಲ್ಕತ್ತಾದಲ್ಲಿ 98 ಪರ್ಸೆಂಟ್ ಮಾರಾಟ ಇಳಿಕೆ

   ಕೋಲ್ಕತಾದಲ್ಲೂ ಕೊರೊನಾ ಎಫೆಕ್ಟ್‌ ಜೋರಾಗಿಯೇ ಪ್ರಭಾವ ಬೀರಿದೆ. 2020 ರ ಕ್ಯೂ 2 ರಲ್ಲಿ(ಏಪ್ರಿಲ್-ಜೂನ್) 50 ಯುನಿಟ್‌ಗಳು ಮಾತ್ರ ಮಾರಾಟವಾಗಿದೆ. ಈ ಮೂಲಕ ವರ್ಷದಿಂದ ವರ್ಷದ ಆಧಾರದ ಮೇಲೆ ಶೇಕಡಾ 98ರಷ್ಟು ಮತ್ತು 2020 ರ ಕ್ಯೂ 1 ಕ್ಕೆ ಹೋಲಿಸಿದರೆ ಶೇಕಡಾ 95ರಷ್ಟು ಕುಸಿದಿದೆ. ವಾರ್ಷಿಕವಾಗಿ ಪುಣೆ ಮತ್ತು ಕೋಲ್ಕತ್ತಾ ತಲಾ ಶೇಕಡಾ 79ರಷ್ಟು ಕುಸಿತ ಕಂಡಿದ್ದು, 2020 ರ ಕ್ಯೂ 2 ರಲ್ಲಿ ಶೇಕಡಾ 70ರಷ್ಟು ತ್ರೈಮಾಸಿಕ ಇಳಿಕೆ ಕಂಡಿದೆ.

   ಹೈದ್ರಾಬಾದ್ , ಚೆನ್ನೈನಲ್ಲೂ ವಸತಿ ಮಾರಾಟ ತೀವ್ರ ಕುಸಿತ

   ಹೈದ್ರಾಬಾದ್ , ಚೆನ್ನೈನಲ್ಲೂ ವಸತಿ ಮಾರಾಟ ತೀವ್ರ ಕುಸಿತ

   ಹೈದರಾಬಾದ್‌ನಲ್ಲಿ ಒಂದು ವರ್ಷದಲ್ಲಿ ಮಾರಾಟವು ಶೇಕಡಾ 85ರಷ್ಟು ಕಡಿಮೆಯಾಗಿದೆ. 2019 ರ ಏಪ್ರಿಲ್-ಜೂನ್ ಅವಧಿಯಲ್ಲಿ 4,430 ಯುನಿಟ್‌ಗಳಿಂದ 2020 ರ ಕ್ಯೂ 2 ರಲ್ಲಿ 660 ಯುನಿಟ್‌ಗಳಿಗೆ ಇಳಿದಿದೆ. ತ್ರೈಮಾಸಿಕ ಆಧಾರದ ಮೇಲೆ ಮಾರಾಟವು 75ರಷ್ಟು ಕುಸಿದಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ (ಮಾರ್ಚ್-ಮೇ) ನಗರದಲ್ಲಿ 2,680 ಮಾರಾಟ ಕಂಡಿದೆ.

   ಇನ್ನು ಚೆನ್ನೈ ಕೂಡ ಇದರಿಂದ ಹೊರತಾಗಿಲ್ಲ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಚೆನ್ನೈನಲ್ಲಿನ ವಸತಿ ಆಸ್ತಿಯ ಮಾರಾಟವು ಶೇಕಡಾ 79ರಷ್ಟು ಕಡಿಮೆಯಾಗಿದೆ, ಆದರೆ ಹೊಸ ಯೋಜನೆಗಳ ಪ್ರಾರಂಭದಲ್ಲಿ ಇದು ಶೇಕಡಾ 100 ರಷ್ಟು ಕುಸಿದಿದೆ ಮತ್ತು ಕ್ಯೂ 2 ಸಿವೈ 20 ನಲ್ಲಿ ಯಾವುದೇ ಹೊಸ ಯೋಜನೆಗಳು ರೂಪುಗೊಂಡಿಲ್ಲ.

   ಒಟ್ಟಾರೆ, ವಸತಿ ಮಾರಾಟ ಮತ್ತು ಹೊಸ ಯೋಜನೆಗಳ ಪ್ರಾರಂಭಗಳಲ್ಲಿ ಬೆಂಗಳೂರು ಸೇರಿದಂತೆ ಏಳು ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ವಸತಿ ಮಾರಾಟ ದರ ಕುಸಿತವನ್ನು ಕಂಡಿದೆ.

   English summary
   Coronavirus impact housing sales and new launches have plunged 81 percent year-on-year to 12,720 units across India’s top seven cities in the second quarter of 2020, ANAROCK said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more