ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್‌: 130 ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಬೌನ್ಸ್‌

|
Google Oneindia Kannada News

ಬೆಂಗಳೂರು, ಜುಲೈ 1: ಸಿಲಿಕಾನ್ ಸಿಟಿ ಮೂಲದ ಬಾಡಿಗೆ ದ್ವಿಚಕ್ರ ವಾಹನ ಪೂರೈಸುವ ಸಂಸ್ಥೆ ಬೌನ್ಸ್‌ 130 ನೌಕರರನ್ನು ಅಥವಾ ಶೇಕಡಾ 22ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ವ್ಯವಹಾರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.

ಲಾಕ್ ಡೌನ್; 1,400 ಉದ್ಯೋಗ ಕಡಿತ ಓಲಾ ಘೋಷಣೆಲಾಕ್ ಡೌನ್; 1,400 ಉದ್ಯೋಗ ಕಡಿತ ಓಲಾ ಘೋಷಣೆ

"ದುರದೃಷ್ಟವಶಾತ್, ಈ ಬದಲಾಗುತ್ತಿರುವ ವಿಧಾನದ ಅರ್ಥವೇನೆಂದರೆ, ನಾವು ಯೋಜಿಸಿದ್ದ ಹಲವಾರು ಹೊಸ ವ್ಯಾಪಾರ ಮಾರ್ಗಗಳು, ಉತ್ಪನ್ನಗಳು ಮತ್ತು ಯೋಜನೆಗಳು ಮುಂಬರುವ ತ್ರೈಮಾಸಿಕಗಳಲ್ಲಿ ರೂಪಾಂತರಗೊಳ್ಳಬೇಕು ಅಥವಾ ತಡೆಹಿಡಿಯಬೇಕಾಗುತ್ತದೆ. ಏಕೆಂದರೆ ನಮ್ಮ ಮಧ್ಯಮ-ಅವಧಿಯ ಉದ್ಯೋಗಿಗಳ ಅಗತ್ಯತೆಗಳು ಬದಲಾಗಿವೆ" ಎಂದು ಸಹ ಸಂಸ್ಥಾಪಕ ಮತ್ತು ಸಿಇಒ ವಿವೇಕಾನಂದ ಹಲ್ಲಕೆರೆ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Covid-19 Impact: Bounce Lay Off 130 Workers

ಜೊತೆಗೆ ಕೆಲಸದಿಂದ ವಜಾಗೊಂಡ ನೌಕರರಿಗೆ ಕಂಪನಿಯು ಮೂರು ತಿಂಗಳ ವೇತನವನ್ನು ನೀಡಲಿದೆ ಎಂದಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಆ್ಯಪ್ ಆಧಾರಿತ ಸಂಸ್ಥೆ ಉಬರ್ 600 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಅದೇ ತಿಂಗಳು, ಓಲಾ ನಿರ್ಧಾರವು 1,400 ಉದ್ಯೋಗಿಗಳಿಗೆ ಪರಿಣಾಮ ಬೀರಿತು.

English summary
Scooter rental platform Bounce has laid off 130 employees, or 22% of its workforce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X