ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಮೋಟಾರ್ಸ್‌ನಿಂದ ವಿಶಿಷ್ಟ ಕ್ರಮ: ಸೇಫ್ಟಿ ಬಬಲ್ ಮೂಲಕ ಕಾರುಗಳ ವಿತರಣೆ

|
Google Oneindia Kannada News

ನವದೆಹಲಿ, ನವೆಂಬರ್ 30: ಕೊರೊನಾವೈರಸ್ ಸೋಂಕಿನ ನಡುವೆ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಮತ್ತು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಟಾಟಾ ಮೋಟಾರ್ಸ್ ಅನೇಕ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಕಾರು ಖರೀದಿದಾರರಿಗೆ ಕಂಪನಿಯು ಹೊಸ ಉಪಕ್ರಮದ ಮೂಲಕ ಕಾರುಗಳನ್ನು ಮಾಲೀಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.

ಕಾರುಗಳನ್ನು ಸ್ವಚ್ಛಗೊಳಿಸುವ ವಿಶಿಷ್ಟ ವಿಧಾನದ ಮೂಲಕ ಟಾಟಾ ಮೋಟಾರ್ಸ್‌ ಗ್ರಾಹಕರನ್ನು ಆಕರ್ಷಿಸಿದೆ. ತನ್ನ ಗ್ರಾಹಕರಲ್ಲಿ ಕೊರೊನಾವೈರಸ್ ಭೀತಿ ಹೋಗಲಾಡಿಸಲು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷಾ ಮಾರ್ಗ ಒಂದನ್ನು ಅಳವಡಿಸಿಕೊಂಡಿದೆ. ಹೊಸ ವಾಹನಗಳ ವಿತರಣೆ ವೇಳೆ ಗ್ರಾಹಕರಿಗೆ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾದ ವಾಹನ ಒದಗಿಸುವ ಸಂಬಂಧ ಸೇಫ್ಟಿ ಬಬಲ್ ಬಳಕೆ ಮಾಡುತ್ತಿದೆ.

ಬರಲಿದೆ ಜೀಪ್ 7 ಸೀಟರ್ ಎಸ್‌ಯುವಿ: ಪವರ್‌ಫುಲ್ 2.0 ಡೀಸೆಲ್ ಎಂಜಿನ್ಬರಲಿದೆ ಜೀಪ್ 7 ಸೀಟರ್ ಎಸ್‌ಯುವಿ: ಪವರ್‌ಫುಲ್ 2.0 ಡೀಸೆಲ್ ಎಂಜಿನ್

ಸೇಫ್ಟಿ ಬಬಲ್ ಮೂಲಕ ವಾಹನಗಳನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಸ್ಯಾನಿಟೈಜ್ ಮಾಡಬಹುದಾಗಿದ್ದು, ಸಾಮಾನ್ಯ ಸ್ಯಾನಿಟೈಜ್ ಮಾದರಿಗಿಂತಲೂ ಸೇಫ್ಟಿ ಬಬಲ್ ಮೂಲಕ ಮಾಡಲಾದ ಸ್ಯಾನಿಟೈಜ್ ಪರಿಣಾಮಕಾರಿಯಾಗರಲಿದೆ.

Covid-19 Fears: Tata Motors Is Delivering Cars Within A Safety Bubble

ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಈಗಾಗಲೇ ವಿವಿಧ ಮಾದರಿಯ ಸ್ಯಾನಿಟೈಜ್ ಮೂಲಕ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಕಂಪನಿಯು ಕಾರು ವಿತರಣೆ ವೇಳೆ ಹೊಸ ಸುರಕ್ಷಾ ಮಾರ್ಗಸೂಚಿಯನ್ನು ಅನುಸರಿಸುತ್ತಿದೆ.

English summary
Tata motors is taking various steps to mitigate the spread of coronavirus, especially for its buyers. A new initiative by the company demonstrates a unique way of keeping cars sanitsed till the time of delivered to the customers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X