ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಾಟ ನಡೆಸದ ಏರ್ ಇಂಡಿಯಾಕ್ಕೆ ದಿನಕ್ಕೆ ಎಷ್ಟು ಕೋಟಿ ನಷ್ಟ ಗೊತ್ತಾ?

|
Google Oneindia Kannada News

ಮುಂಬೈ, ಮಾರ್ಚ್ 25: ಈ ಮೊದಲೇ ನಷ್ಟದಲ್ಲಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ಕೊರೊನಾ ಅದೆಂಥ ಗಾಯದ ಮೇಲೆ ಬರೆ ಎಳೆದಿದೆ ಗೊತ್ತೆ? ಎಲ್ಲ ವಿಮಾನಗಳ ದೇಶೀಯ ಹಾಗೂ ಅಂತರರಾಷ್ಟ್ರೀಯ ಹಾರಾಟವನ್ನು ಅಮಾನತು ಮಾಡಲಾಗಿದೆ. ಇದರಿಂದ ಏರ್ ಇಂಡಿಯಾಕ್ಕೆ ದಿನಕ್ಕೆ 30ರಿಂದ 35 ಕೋಟಿ ರುಪಾಯಿ ನಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ನಾನಾ ದೇಶಗಳು ಅಂತರರಾಷ್ಟ್ರೀಯ ವಿಮಾನ ಹಾರಾಟಗಳನ್ನು ನಿಲ್ಲಿಸಿವೆ. ಕೊರೊನಾ ದಿನದಿನಕ್ಕೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವು ಕೂಡ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. "ಸರ್ಕಾರಿ ಆದೇಶದ ಅನುಸಾರ, ನಾವು ಒಂದು ಕೂಡ ವಾಣಿಜ್ಯ ವಿಮಾನದ ಹಾರಾಟ ನಡೆಸುತ್ತಿಲ್ಲ. ಅದರ ಜತೆಗೆ ದೇಶೀಯ ವಿಮಾನ ಹಾರಾಟವೂ ಇಲ್ಲ. ಇದರಿಂದ ನಮಗೆ ನಿತ್ಯ 30-35 ಕೋಟಿ ನಷ್ಟವಾಗುತ್ತಿದೆ" ಎಂದು ಏರ್ ಇಂಡಿಯಾ ತಿಳಿಸಿದೆ.

ಇಂಧನ, ವಿಮಾನ ನಿಲ್ದಾಣ ಶುಲ್ಕ ಸೇರಿದಂತೆ ಈ ಅವಧಿಯಲ್ಲಿ ಇತರ ಶುಲ್ಕಗಳು ಬೀಳುತ್ತಿಲ್ಲ. ಆದರೆ ವೇತನ, ಇತರ ಭತ್ಯೆ, ಭೋಗ್ಯದ ಬಾಡಿಗೆ, ಕನಿಷ್ಠ ನಿರ್ವಹಣೆ, ಬಡ್ಡಿ ಪಾವತಿ ಇತ್ಯಾದಿ ವೆಚ್ಚವನ್ನೆಲ್ಲ ಸರಿದೂಗಿಸಲೇಬೇಕು ಎಂದು ಮೂಲಗಳು ತಿಳಿಸಿವೆ.

Corona: During Operation Suspension Govt Incurring Loss of 35 Crore Every Day

ಏರ್ ಇಂಡಿಯಾಗೆ ದಿನದ ಆದಾಯ 60ರಿಂದ 65 ಕೋಟಿ ರುಪಾಯಿ. ಅದರಲ್ಲಿ 90 ಪರ್ಸೆಂಟ್ ನಷ್ಟು ಪ್ರಯಾಣಿಕರ ಮೂಲಕ ಬರುವ ಆದಾಯ. ಹಾಗೆ ನೋಡಿದರೂ ವೆಚ್ಚ ಕೂಡ ಅಲ್ಲಿಗೆ ಅಲ್ಲೇ ಎಂಬಂತೆ ಸರಿಹೋಗುತ್ತದೆ.

ಏರ್ ಇಂಡಿಯಾದಿಂದ ವೇತನಕ್ಕೆ ಅಂತಲೇ 250 ಕೋಟಿ ರುಪಾಯಿ ತಿಂಗಳಿಗೆ ಪಾವತಿ ಮಾಡಬೇಕು. ಇನ್ನು ವಿಮಾನಗಳ ಭೋಗ್ಯವು ತಿಂಗಳಿಗೆ 210 ಕೋಟಿ ರುಪಾಯಿಗೂ ಹೆಚ್ಚು ಬೇಕು. ಇನ್ನು ಸಾಲಕ್ಕೆ ಬಡ್ಡಿಯಾಗಿ ಪ್ರತಿ ತಿಂಗಳು 225 ಕೋಟಿ ರುಪಾಯಿಯನ್ನು ಕಟ್ಟಬೇಕು.

English summary
Corona lock down leads to 35 crore loss to Air India. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X