ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಇಂಡಿಯಾ : 4.5 ಲಕ್ಷ ಕೋಟಿ ಹೂಡಿಕೆ, 18 ಲಕ್ಷ ನೇಮಕಾತಿ

By Mahesh
|
Google Oneindia Kannada News

ನವದೆಹಲಿ, ಜು.02: 'ಮೇಕ್ ಇನ್ ಇಂಡಿಯಾ' ಮೂಲಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈಗ 'ಡಿಜಿಟಲ್ ಇಂಡಿಯಾ' ಮೂಲಕ ಕಾರ್ಪೊರೇಟ್ ಜಗತ್ತನ್ನು ಮೆಚ್ಚಿಸಿದ್ದಾರೆ.

ಡಿಜಿಟಲ್ ಇಂಡಿಯಾ ಮೂಲಕ ಭಾರತದಲ್ಲಿ ಸುಮಾರು 4.5 ಲಕ್ಷ ಕೋಟಿ ರು ಹೂಡಿಕೆಯಾಗುತ್ತಿದ್ದು, 18 ಲಕ್ಷ ನೇಮಕಾತಿ ನಡೆಯಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. [ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]

* ರಿಲಯನ್ಸ್ ಸಂಸ್ಥೆ 2.5 ಲಕ್ಷ ಕೋಡಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, 5 ಲಕ್ಷಕ್ಕೂ ಅಧಿಕ ನೇಮಕಾತಿ ಮಾಡುವುದಾಗಿ ಘೋಷಿಸಿದೆ.

Corporates Back Digital India
* ಇ ಆಡಳಿತ, ಡಿಜಿಟಲ್ ಶಿಕ್ಷಣ, ಡಿಜಿಟಲ್ ಆರೋಗ್ಯ ಸೇವೆ, ಸ್ಮಾರ್ಟ್ ಸಿಟಿ ಹಾಗೂ ಗ್ರಾಮೀಣ ಇಂಟರ್ನೆಟ್ ಸೇವೆಯಲ್ಲಿ ರಿಲಯನ್ಸ್ ಹೂಡಿಕೆ ಮಾಡುತ್ತಿದೆ. [ಡಿಜಿಟಲ್ ಇಂಡಿಯಾ: ಮೋದಿ ಭಾಷಣದ ಹೈಲೈಟ್ಸ್]

* ಭಾರ್ತಿ ಏರ್ ಟೆಲ್ ನ ಸುನಿಲ್ ಮಿತ್ತಲ್: ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರು(16 ಬಿಲಿಯನ್ ಡಾಲರ್) ಹೂಡಿಕೆ ಮಾಡುತ್ತಿದೆ.

* ಆದಿತ್ಯಾ ಬಿರ್ಲಾ ಸಮೂಹ: ಮುಂದಿನ ಐದು ವರ್ಷಗಳಲ್ಲಿ 9 ಬಿಲಿಯನ್ ಡಾಲರ್ ಹೂಡಿಕೆ.

* ಬಿರ್ಲಾ ಸಮೂಹದಿಂದ ನೆಟ್ವರ್ಕ್ ಸಂಪರ್ಕ, ಬ್ರಾಡ್ ಬ್ಯಾಂಡ್, ವೈಫೈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತೇವೆ: ಕುಮಾರ್ ಮಂಗಲಂ ಬಿರ್ಲಾ. [ಡಿಜಿಟಲ್ ಇಂಡಿಯಾದಿಂದ ರಾಜ್ಯಕ್ಕಾಗುವ ಲಾಭಗಳೇನು?]
* ಟಾಟಾ ಸಮೂಹದ ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಿಸಿಎಸ್ (3 ಲಕ್ಷಕ್ಕೂ ಅಧಿಕ ಉದ್ಯೋಗಿಗಳು) ಈ ವರ್ಷ 61 ಸಾವಿರ ಹೊಸ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.


* ಅನಿಲ್ ಅಂಬಾನಿ ಗ್ರೂಪ್ ಸುಮಾರು 10,000 ಕೋಟಿ ಹೂಡಿಕೆ ಮಾಡಲಿದೆ.
* ಅನಿಲ್ ಅಗರ್ ವಾಲ್ ಅವರ ಸ್ಟರ್ಲೆಟ್ ಟೆಕ್ನಾಲಜೀಸ್ ಸುಮಾರು 40,000 ಕೋಟಿ ರು ಹೂಡಿಕೆ ಮಾಡಿ ಎಲ್ ಸಿಡಿ ಪ್ಯಾನೆಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಿದೆ. ಸುಮಾರು 50,000 ಉದ್ಯೋಗ ನೀಡಲಿದೆ.

* ದೇಶಿ ಮೊಬೈಲ್ ಕಂಪನಿ ಲಾವಾ ಮೊಬೈಲ್ಸ್ ಸುಮಾರು 1,200 ಕೋಟಿ ರು ವೆಚ್ಚದಲ್ಲಿ ಹೊಸ ಫ್ಯಾಕ್ಟರಿ ಸ್ಥಾಪಿಸಲಿದೆ. ಸುಮಾರು 1 ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. [ನಗರಗಳನ್ನು 'ಸ್ಮಾರ್ಟ್' ಮಾಡುವ 3 ಯೋಜನೆಗೆ ಚಾಲನೆ]

* ತೈವಾನಿನ ಕಂಪನಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಮುಂದಿನ 10 ವರ್ಷಗಳಲ್ಲಿ 500 ಮಿಲಿಯನ್ ಡಾಲರ್ ಹೂಡಿಕೆ. (ಒನ್ ಇಂಡಿಯಾ ಸುದ್ದಿ)

English summary
Corporates Back Digital India Investment and Jobs. Prime Minister said amounted to over Rs 4.5 lakh crore with a potential to generate 18 lakh jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X