• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಚ್ಚು ಡೇಟಾ ಬಳಸಿ, ಇನ್ನಷ್ಟು ಮಾತನಾಡಿ ಜಿಯೋ ಆಫರ್

|

ಬೆಂಗಳೂರು, ಮಾರ್ಚ್ 22: ಕೊರೊನಾವೈರಸ್ ಭೀತಿಯಿಂದ ಜನತಾ ಕರ್ಫ್ಯೂ ಆಚರಿಸುತ್ತಿರುವ ಸಂದರ್ಭದಲ್ಲಿ ಮೊಬೈಲ್ ಬಳಕೆದಾರರು ಹೊರ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕಾಗಿ ಜಿಯೋ ತನ್ನ ಬಳಕೆದಾರರಿಗೆ ತನ್ನ ಹಳೆಯ ರಿಚಾರ್ಜ್ ವೋಚರ್‌ಗಳ ಬದಲಾಯಿಸಿದೆ. ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮಂದಾಗಿದೆ. ಹೀಗಾಗಿ ಜಿಯೋ 4G ಡೇಟಾ ವೋಚರ್‌ಗಳಿಂದ ಗ್ರಾಹಕರಿಗೆ ಭರ್ಜರಿ ಲಾಭವಾಗಲಿದೆ. ಜೊತೆಗೆ ವೃತ್ತಿಪರರಿಗೆ ವರ್ಕ್ ಫ್ರಂ ಹೋಂ ಆಫರ್ ಪ್ಯಾಕೇಜ್ ಆಫರ್ ನೀಡುತ್ತಿದೆ.

ಜಿಯೋ ಅಪ್‌ಗ್ರೇಡ್‌ ಮಾಡಿರುವ ಪ್ಲಾನ್‌ಗಳ ಮಾಹಿತಿ ಇಲ್ಲಿದೆ, ರೂ.11, ರೂ.21, ರೂ. 51 ಮತ್ತು ರೂ.101 ರೀಚಾರ್ಜ್ ವೋಚರ್‌ ಪ್ಲಾನ್‌ಗಳು ಇನ್ನು ಮುಂದೆ ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ. ಈ ಪ್ಲಾನ್‌ಗಳು ಕ್ರಮವಾಗಿ 800 MB, 2GB, 6GB ಮತ್ತು 12 GB ಹೈಸ್ಪೀಡ್ ಡೇಟಾದೊಂದಿಗೆ ದೊರೆಯಲಿದೆ. ಇದಲ್ಲದೇ ಈ ವೋಚರ್‌ಗಳಲ್ಲಿ ಜಿಯೋ ಬಿಟ್ಟು ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್ ಟೈಮ್ ಸಹ ನೀಡಲಿದೆ. ಕ್ರಮವಾಗಿ 75, 200, 500 ಮತ್ತು 1000 ನಿಮಿಷಗಳ ಟಾಕ್ ಟೈಮ್‌ ಅನ್ನು ಬಳಕೆದಾರರು ಆನಂದಿಸಬಹುದಾಗಿದೆ. ಈ ಪ್ಲಾನ್‌ಗಳ ಭಾರತದಾದ್ಯಂತ ದೊರೆಯಲಿದೆ.

ಎಲ್ಲಾ ಉದ್ಯಮಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು (ವರ್ಕ್‌ ಫ್ರಮ್ ಹೋಮ್) ಪ್ರೋತ್ಸಾಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಸಹಾಯ ಮಾಡಲು ಮುಂದಾಗಿದೆ. ಸಂವಹನಗಳ ಅಗತ್ಯತೆ ಮತ್ತು ಕುಟುಂಬಗಳು ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲು ಇಡುವ ಕಾರಣಕ್ಕಾಗಿ ತಡೆರಹಿತ ಮತ್ತು ಹೆಚ್ಚಿನ ಡೇಟಾ ಬಳಕೆ ಅಗತ್ಯತೆ ಹೆಚ್ಚುತ್ತಿದೆ. ಹಾಗಾಗಿ ಈ ಮೇಲಿನ ವೋಚರ್‌ಗಳ ಲಾಭವನ್ನು ಹೆಚ್ಚು ಮಾಡಿದೆ. ಈ ಮೂಲಕ ಜಿಯೋ ಬಳಕೆದಾರರಿಗೆ ಸಹಾಯವನ್ನು ವಿಸ್ತರಿಸುತ್ತಿದೆ ಮತ್ತು ಭಾರತೀಯರಿಗೆ ಸಂಪರ್ಕ ಅಗತ್ಯಗಳನ್ನು ಪೂರೈಸಲು ನಿರಂತರವಾದ, ಹೇರಳವಾದ ಮತ್ತು ಕೈಗೆಟುಕುವ ಬೆಲೆಯಲ್ಲಿ ಡೇಟಾವನ್ನು ಪಡೆದುಕೊಳ್ಳಳು ಅವಕಾಶವನ್ನು ಮಾಡಿಕೊಟ್ಟಿದೆ.

ವರ್ಕ್ ಫ್ರಂ ಹೋಂ ಆಫರ್: ಪ್ರತಿನಿತ್ಯ 2ಜಿಬಿಯಂತೆ ಡೇಟಾ ಸಿಗಲಿದ್ದು, ನಿಗದಿತ ಮಿತಿ ದಾಟಿದರೆ, 64 ಕೆಬಿಪಿಎಸ್ ವೇಗದಲ್ಲಿ ಮತ್ತೆ ಪಡೆಯಬಹುದು. 51 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆ 251 ರುಗಳ ಪ್ಯಾಕ್ ಇದಾಗಿದೆ. ಈ ಯೋಜನೆಯಲ್ಲಿ ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಸಿಗುವುದಿಲ್ಲ.

English summary
Coronavirusoutbreak:Reliance Jio increases data limit of Rs 51, Rs 101 prepaid plans: Here’s everything you need to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X