ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಪ್ರಸ್ತುತದ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸಂಸ್ಥೆಯಾಗಿ ಹೆರಿಟೇಜ್ ಫುಡ್ಸ್ ಲಿಮಿಟೆಡ್, ತನ್ನ ಗ್ರಾಹಕರು ಮತ್ತು ಉದ್ಯೋಗಿಗಳ ಕಲ್ಯಾಣಕ್ಕೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ, ಗ್ರಾಹಕರಿಗೆ ನಮ್ಮ ಉತ್ಪನ್ನ ಬಳಸುವಾಗ ಕೊರೊನಾ ಭೀತಿ ಬೇಡ ಎಂದು ಸಂಸ್ಥೆ ಪ್ರಕಟಿಸಿದೆ.

ಹೆರಿಟೇಜ್ ಫುಡ್ಸ್ ಉತ್ಕೃಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಐಎಸ್‍ಓ ಹಾಗೂ ಎಫ್‍ಎಸ್‍ಎಸ್‍ಎಐ ಮಾನದಂಡಕ್ಕೆ ಅನುಗುಣವಾಗಿ ನೀಡುವಲ್ಲಿ ನಂಬಿಕೆ ಇರಿಸಿ, ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ತನ್ನ ಸಂಸ್ಕರಣಾ ಘಟಕಗಳಲ್ಲಿ ಕಂಪನಿ ಎಲ್ಲ ಅಗತ್ಯ ಆಹಾರ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನ ಸಿಬ್ಬಂದಿ ಸೇರಿದಂತೆ ಫ್ಯಾಕ್ಟರಿಯ ಎಲ್ಲ ಉದ್ಯೋಗಿಗಳಿಗೆ ಪ್ರತಿದಿನ ಘಟಕಕ್ಕೆ ಪ್ರವೇಶಿಸುವ ಮುನ್ನ ತಪಾಸಣೆ ನಡೆಸಲಾಗುತ್ತದೆ.

21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ

ಪ್ರವೇಶಿಸುವ ಪ್ರತಿಯೊಬ್ಬ ಉದ್ಯೋಗಿ/ ಕಾರ್ಮಿಕರನ್ನು ಭದ್ರತಾ ಗೇಟ್‍ನಲ್ಲೇ ಥರ್ಮಸ್ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ಯಾವುದೇ ಉದ್ಯೋಗಿಗಳಿಗೆ ರೋಗಲಕ್ಷಣಗಳು ಕಂಡುಬಂದಲ್ಲಿ, ಅವರಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಕಾಶ ನೀಡುವುದಿಲ್ಲ ಹಾಗೂ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗುತ್ತದೆ. ಭದ್ರತಾ ಸಿಬ್ಬಂದಿಗೆ ಪ್ರತಿದಿನ ಸೂಕ್ತವಾದ ಹಾಗೂ ಮಹತ್ವದ ನೈರ್ಮಲ್ಯ ಮಾನದಂಡಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

Coronavirus Scare: Heritage Foods Ltd safety precautions

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಗೊಂಡಿರುವ ಸುರಕ್ಷಾ ಕ್ರಮಗಳ ಬಗ್ಗೆ ಮಾತನಾಡಿದ ಹೆರಿಟೇಜ್ ಫುಡ್ಸ್ ಲಿಮಿಡೆಟ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಿಣಿ ನಾರಾ, "ಉತ್ಪನ್ನಗಳನ್ನು ಸುರಕ್ಷಿತವಾಗಿ ವಿತರಿಸಲು ಹಾಗೂ ಪೂರೈಸಲು ನಾವು ಮುಖದ ಮಾಸ್ಕ್‍ಗಳು, ಕೈ ಗವಸು ಮತ್ತು ಸ್ಯಾನಿಟೈಸರ್‍ಗಳನ್ನು ನಮ್ಮ ಎಲ್ಲ ವ್ಯಾಪಾರ ಸಿಬ್ಬಂದಿ ಮತ್ತು ವಿತರಣಾ ತಂಡಕ್ಕೆ ಒದಗಿಸಲಾಗುತ್ತದೆ.

ನಮ್ಮ ವಿತರಣಾ ವಾಹನದ ಚಾಲಕ, ಮಾರಾಟ ಸಿಬ್ಬಂದಿ, ವಿತರಣಾ ತಂಡದ ಸದಸ್ಯರಿಗೆ ನಿರಂತರವಾಗಿ ಆರೋಗ್ಯ ತಪಾಸಣೆಗಳನ್ನು ಮಾಡುತ್ತಿದ್ದೇವೆ ಹಾಗೂ ಯಾವುದೇ ರೋಗಲಕ್ಷಣ ಕಂಡುಬರುವ ಉದ್ಯೋಗಿಗಳಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ಸೌಲಭ್ಯ ಕಲ್ಪಿಸಲಾಗುತ್ತದೆ. ಹೆರಿಟೇಜ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಲಿತವಾಗಿ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದೆ. ಮನೆಗಳಿಗೇ ನೇರವಾಗಿ ವಿತರಿಸುವ ಹಾಗೂ ಇ-ಕಾಮರ್ಸ್ ವಾಹಿನಿ ಮೂಲಕ ಕ್ರಮಗಳನ್ನು ಕೈಗೊಂಡಿದೆ. ನಮ್ಮ ಗ್ರಾಹಕರು ಹೆಚ್ಚುವರಿ ಮುಂಜಾಗ್ರತಾ ಕ್ರಮವಾಗಿ ಹಾಲು/ ಮೊಸರು ಪ್ಯಾಕೆಟ್‍ಗಳನ್ನು ಬಳಸುವ ಮುನ್ನ ನೀರಿನಿಂದ ತೊಳೆದು, ಒರೆಸಿದ ಬಳಿಕ ಪ್ಯಾಕೆಟ್ ತೆರೆಯಬೇಕು'' ಎಂದು ಸಲಹೆ ಮಾಡಿದ್ದಾರೆ.

English summary
Coronavirus Scare: In the prevailing public health scenario, Heritage Foods Limited, being a responsible organisation is implementing safety measures for ensuring well-being of its employees and consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X