ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ಪರಿಹಾರ ನಿಧಿಗೆ 500 ಕೋಟಿ ನೀಡಿದ ರಿಲೆಯನ್ಸ್ ಇಂಡಸ್ಟ್ರೀಸ್

|
Google Oneindia Kannada News

ಮುಂಬೈ, ಮಾರ್ಚ್‌ 30: ಕೊರೊನಾ ವೈರಸ್‌ ನಿಯಂತ್ರಣಕ್ಕೆ ರಿಲೆಯನ್ಸ್ ಇಂಡಸ್ಟ್ರೀಸ್ 500 ಕೋಟಿ ನೀಡುವುದಾಗಿ ಘೋಷಣೆ ಮಾಡಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ವಾರದ ಹಿಂದೆ ಮಹಾರಾಷ್ಟ್ರ ಹಾಗೂ ಗುಜರಾತ್‌ ಸರ್ಕಾರ 5 ಕೋಟಿ ಹಣವನ್ನು ನೀಡುವುದಾಗಿ ರಿಲೆಯನ್ಸ್ ಇಂಡಸ್ಟ್ರೀಸ್ ಘೋಷಣೆ ಮಾಡಿತ್ತು.

ಕೊರೊನಾ ತಡೆಗೆ 5 ಲಕ್ಷ ಹಣವನ್ನು ದಾನ ಮಾಡಿದ ವೃದ್ದೆಕೊರೊನಾ ತಡೆಗೆ 5 ಲಕ್ಷ ಹಣವನ್ನು ದಾನ ಮಾಡಿದ ವೃದ್ದೆ

''ಕೊರೊನಾ ವೈರಸ್ ಬಿಕ್ಕಟ್ಟನ್ನು ಭಾರತವು ಶೀಘ್ರದಲ್ಲೇ ಜಯಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ ಇಡೀ ರಿಲೆಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಂಡವು ರಾಷ್ಟ್ರದೊಂದಿಗಿದೆ ಮತ್ತು ಕೋವಿಡ್ -19 ವಿರುದ್ಧದ ಈ ಯುದ್ಧವನ್ನು ಗೆಲ್ಲಲು ಎಲ್ಲವನ್ನೂ ಮಾಡುತ್ತದೆ'' ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

Coronavirus Reliance Industries Announced 500 Crore Donation

ಪ್ರತಿದಿನ 100,000 ಫೇಸ್ ಮಾಸ್ಕ್ ಮತ್ತು ಹೆಚ್ಚಿನ ಸಂಖ್ಯೆಯ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಉತ್ಪಾದಿಸುವ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಮುಂದಿನ ಹತ್ತು ದಿನಗಳಲ್ಲಿ ಹತ್ತು ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ರಿಲೆಯನ್ಸ್ ಸಂಸ್ಥೆ ಮಾಡಲಿದೆಯಂತೆ.

''ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ತಂದ ಸವಾಲುಗಳ ವಿರುದ್ಧ ಹೋರಾಡಲು ಮತ್ತು ಗೆಲ್ಲಲು ರಾಷ್ಟ್ರವು ಸಿದ್ಧವಾಗಿದೆ. ಕೋವಿಡ್ -19 ವಿರುದ್ಧದ ಕ್ರಿಯಾ ಯೋಜನೆಯಲ್ಲಿ ಆರ್‌ಐಎಲ್ ಈಗಾಗಲೇ ರಿಲಯನ್ಸ್ ಕುಟುಂಬದ ಸಾಮರ್ಥ್ಯವನ್ನು ನಿಯೋಜಿಸಿದೆ.'' ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

English summary
Coronavirus in India: Reliance Industries announced a donation of 500 crores to PM cares fund to combat coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X