ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 2ನೇ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಇಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮಹತ್ವದ ಸೂಚನೆಯನ್ನು ನೀಡಿದೆ. ಕೊವಿಡ್19 ವಿರುದ್ಧ ಹೋರಾಟದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿಲ್ಲವಾದ್ದರಿಂದ ಉದ್ಯೋಗಿಗಳಿಗೆ ಸದ್ಯಕ್ಕೆ ಸಂಬಳ ಏರಿಕೆ, ಬಡ್ತಿ ನೀಡಲು ಸಾಧ್ಯವಿಲ್ಲ ಎಂದಿದೆ.

ಆದರೆ, ಹೊಸ ಉದ್ಯೋಗಿಗಳಿಗೆ ನೀಡಿರುವ ಆಫರ್ ನಲ್ಲಿ ಬದಲಾವಣೆಯಿಲ್ಲ. ಫ್ರೆಶರ್ಸ್ ನೇಮಕಾತಿ ಮುಂದುವರೆಯಲಿದೆ ಎಂದು ಇನ್ಫೋಸಿಸ್ ಹೇಳಿದೆ. ಈ ಮೂಲಕ ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ ರೀತಿಯಲ್ಲೇ ಇನ್ಫೋಸಿಸ್ ಕೂಡಾ ಫ್ರೆಶರ್ಸ್ ಕೈ ಹಿಡಿಯಲಿದೆ.

ಕೊರಾನಾ ಭೀತಿ ನಡುವೆ ಈ ಕಂಪನಿ ಟೆಕ್ಕಿಗಳಿಗೆ ಸಂಬಳ ಏರಿಕೆ ! ಕೊರಾನಾ ಭೀತಿ ನಡುವೆ ಈ ಕಂಪನಿ ಟೆಕ್ಕಿಗಳಿಗೆ ಸಂಬಳ ಏರಿಕೆ !

ಮಾರ್ಚ್ 2020ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ನಿವ್ವಳ ಲಾಭ ಶೇ 6.3 ರಷ್ಟು ಏರಿಕೆ ಕಂಡು, 4,335 ಕೋಟಿ ರು ಗಳಿಕೆಯಾಗಿದೆ. ಪ್ರಸಕ್ತ ಲಾಕ್ಡೌನ್ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಸಂಸ್ಥೆಯ ಶೇ 93 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ಅನುಸರಿಸುತ್ತಿದ್ದಾರೆ ಎಂದು ಇನ್ಫೋಸಿಸ್ ಸಿಇಒ ಹಾಗೂ ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.

Coronavirus Impact: Infosys suspends promotions and salary hikes

ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ 4.5 ಲಕ್ಷ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ. ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕಾರಣ ಸಂಸ್ಥೆಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದು ಘೋಷಿಸಿದೆ.

English summary
The country's second-largest IT services player Infosys on Monday suspended promotions and salary increments in view of the ongoing coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X