ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ

|
Google Oneindia Kannada News

ಲಂಡನ್, ಜೂನ್ 9: ಜಾಗತಿಕವಾಗಿ ಅತಿ ದೊಡ್ಡ ತೈಲ ಕಂಪನಿ ಬ್ರಿಟಿಷ್ ಪೆಟ್ರೋಲಿಯಂ(BP)ಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಜಾಗತಿಕವಾಗಿ ತೈಲ ಕ್ಷೇತ್ರ ಕುಸಿತ ಕಾಣುತ್ತಿದ್ದಂತೆ, ಬಿಪಿ ಸಂಸ್ಥೆಯಿಂದ ಶೇ 15 ರಷ್ಟು ಉದ್ಯೋಗ ಕಡಿತ ಘೋಷಿಸಲಾಗಿದೆ.

ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ ಬೆರ್ನಾರ್ಡ್ ಲೂನಿ ಅವರು ತೈಲ ಮಾರುಕಟ್ಟೆ ಏರಿಳಿತದಿಂದಾಗಿ ಸಂಸ್ಥೆ ತನ್ನ ಗಮನವನ್ನು ಪುನರ್ ಬಳಕೆ ಇಂಧನ ಕ್ಷೇತ್ರದತ್ತ ಇರಿಸಲಿದೆ ಎಂದು ಪ್ರಕಟಿಸಿದೆ.

ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್

ಲಂಡನ್ ಮೂಲದ ಬಿಪಿ ಸಂಸ್ಥೆ ವಿಶ್ವದೆಲ್ಲೆಡೆ ಸುಮಾರು 70,100 ಮಂದಿ ಉದ್ಯೋಗಿಗಳಿದ್ದು, ಸುಮಾರು 10,000 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಲೂನಿ ಹೇಳಿದ್ದಾರೆ.

Coronavirus crisis: Oil major BP to lay off 10,000 workers globally

ಈ ವರ್ಷಾಂತ್ಯದೊಳಗೆ ಉದ್ಯೋಗಿಗಳ ಸಂಖ್ಯೆಯಲ್ಲಿ 10, 000 ಕಡಿತಗೊಳ್ಳಲಿದೆ. ಕಚೇರಿ ನಿರ್ವಹಣಾ ಹಿರಿಯ ಅಧಿಕಾರಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚಿದೆ.

ಇತರೆ ತೈಲ ಕಂಪನಿಗಳಂತೆ ಬಿಪಿ ಕೂಡಾ ಕೊರೊನಾವೈರಸ್ ನ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. 12 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದು, ಉದ್ಯೋಗ ಕಡಿತ ನಂತರ 2021ರಲಿ 2.5 ಯುಎಸ್ ಡಾಲರ್ ಉಳಿತಾಯವಾಗಲಿದೆ.

ಜೊತೆಗೆ ಮಾರ್ಚ್ 2021ರ ತನಕ ಹಿರಿಯ ಅಧಿಕಾರಿಗಳಿಗೆ ಸಂಬಳ ಏರಿಕೆ, ಬೋನಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಸುಮಾರು 111 ವರ್ಷ ಇತಿಹಾಸ ಹೊಂದಿರುವ ಸಂಸ್ಥೆಯ 49 ವರ್ಷ ವಯಸ್ಸಿನ ಅಧಿಕಾರಿ ಲೂನಿ ಹೇಳಿದರು.

English summary
"We will now begin a process that will see close to 10,000 people leaving BP - most by the end of this year," BP's Chief Executive Looney said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X