ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್‌ : ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆ

|
Google Oneindia Kannada News

ನವದೆಹಲಿ, ಜುಲೈ 27: ಕೊರೊನಾವೈರಸ್ ಹರಡುವುದನ್ನು ನಿಯಂತ್ರಿಸಲು ಕೈಗೊಂಡ ಲಾಕ್‌ಡೌನ್ ಹಾಗೂ ಇತರೇ ಕ್ರಮಗಳಿಂದಾಗಿ 2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಹೇಳಿದೆ.

ಒಟ್ಟು ಪ್ರಯಾಣಿಕರ ವಾಹನ (ಪಿವಿ) ರಫ್ತು ಪ್ರಮಾಣ ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ 1,73,054ರಷ್ಟು ಯುನಿಟ್‌ಗಳಿಗೆ ಹೋಲಿಸಿದರೆ, 43,748 ಯುನಿಟ್‌ಗಳು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ.

ಜೂನ್ ತ್ರೈಮಾಸಿಕದಲ್ಲಿ ವಾಹನ ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತಜೂನ್ ತ್ರೈಮಾಸಿಕದಲ್ಲಿ ವಾಹನ ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತ

'ಲಾಕ್‌ಡೌನ್‌ನಿಂದಾಗಿ ತಯಾರಿಕಾ ಘಟಕಗಳು ಮತ್ತು ವಿತರಣಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತಾಯಿತು. ಪೂರೈಕೆ ವ್ಯವಸ್ಥೆಗೂ ಅಡಚಣೆಯಾಯಿತು. ನಗರಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ಜಾರಿಯಾಗಿದ್ದು ಹಾಗೂ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅಡ್ಡಿಯಾಗಿದ್ದರಿಂದ ರಫ್ತು ಪ್ರಮಾಣ ಕುಸಿತ ಕಂಡಿದೆ' ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.

Corona Impact: Passenger Vehicle Exports From India Fell 75 Percent In Q1

ಕಾರು ರಫ್ತು ವಹಿವಾಟಿನಲ್ಲಿ ಶೇ. 76.58ರಷ್ಟು ತಗ್ಗಿದ್ದು, 31,896 ವಾಹನಗಳು ಮಾರಾಟವಾಗಿವೆ. ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಕೇವಲ 39 ವ್ಯಾನ್‌ಗಳು ರಫ್ತಾಗಿದ್ದು, ರಫ್ತು ಪ್ರಮಾಣ 91ರಷ್ಟು ಕುಸಿದಿದೆ.

English summary
Coronavirus pandemic related disruptions across globe, passenger vehicle exports from India decline 75 Percent in the first quarter of the fiscal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X