• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಇಂಪ್ಯಾಕ್ಟ್‌: 10,000 ಉದ್ಯೋಗ ಕಡಿತದ ನಿರೀಕ್ಷೆಯಲ್ಲಿ ಬ್ರಿಟಿಷ್ ಏರ್‌ವೇಸ್

|

ಲಂಡನ್, ಸೆಪ್ಟೆಂಬರ್ 16: ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ವೇಳೆಯಲ್ಲಿ ಬ್ರಿಟಿಷ್ ಏರ್‌ವೇಸ್ 10,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರೀಕ್ಷೆಯಲ್ಲಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹಾರಾಟ ಸ್ಥಗಿತ ಮತ್ತು ನಷ್ಟವು ವಿಮಾನಯಾನ ಸಂಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ವಿಮಾನಯಾನವು ತನ್ನ ವಿವಿಧ ಒಕ್ಕೂಟಗಳೊಂದಿಗೆ ತಾತ್ವಿಕವಾಗಿ ಒಪ್ಪಂದಗಳನ್ನು ತಲುಪಿದೆ.

''ಕಳೆದ ಶುಕ್ರವಾರದ ವೇಳೆಗೆ 7,200 ಜನರು ಹೊರ ಹೋಗಿದ್ದಾರೆ'' ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೆಕ್ಸ್ ಕ್ರೂಜ್ ಲಂಡನ್‌ನಲ್ಲಿರುವ ಶಾಸಕರಿಗೆ ಬುಧವಾರ ತಿಳಿಸಿದರು. ಕಂಪನಿಯು ಕೆಲವು ಕಾರ್ಮಿಕ ಗುಂಪುಗಳೊಂದಿಗೆ ಚರ್ಚೆಯಲ್ಲಿದೆ, ಮತ್ತು ಹೊಸ ಒಪ್ಪಂದಗಳ ಮೇಲೆ ಸಿಬ್ಬಂದಿಯನ್ನು ವಜಾ ಮಾಡುವ ಮತ್ತು ಮರು ನೇಮಕ ಮಾಡುವ ಯೋಜನೆಗೆ ಮರಳಿದೆ ಎಂದು ಅವರು ಹೇಳಿದರು.

   RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada

   ಐಎಜಿ ಎಸ್‌ಎಯ ಭಾಗವಾಗಿರುವ ಬ್ರಿಟಿಷ್ ಏರ್‌ವೇಸ್ ಈ ಹಿಂದೆ 12,000 ಕಾರ್ಮಿಕರನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿತ್ತು. ಸಾಂಕ್ರಾಮಿಕವು ವಾಯುಯಾನ ಉದ್ಯಮದಲ್ಲಿ ದಶಕಗಳ ಬೆಳವಣಿಗೆಯನ್ನು ಹಿಮ್ಮೆಟ್ಟಿಸಿದೆ, ವಿಮಾನಗಳನ್ನು ಸ್ಥಗಿತಗೊಳಿಸಿದೆ ಮತ್ತು ಕುಸಿತಕ್ಕೆ ಕಾರಣವಾಗಿದೆ.

   English summary
   British Airways is expecting to cut as many as 10,000 jobs due to the Covid-19 pandemic
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X