ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020-21 ರಲ್ಲಿ ಭಾರತದ ಜಿಡಿಪಿ ಶೇ. 1.5 ಕ್ಕೆ ಇಳಿಕೆ: ಸಮೀಕ್ಷೆ

|
Google Oneindia Kannada News

ನವದೆಹಲಿ, ಜೂನ್ 5: ಕೊರೊನಾವೈರಸ್ ನಿಂದಾಗಿ ಭಾರತಕ್ಕೆ ಆರ್ಥಿಕ ಹೊಡೆತದ ಬಿಸಿ ಕೂಡಾ ದೊಡ್ಡ ಪ್ರಮಾಣದಲ್ಲಿ ತಟ್ಟಿದೆ. ಈ ನಡುವೆ ಭಾರತದ ಜಿಡಿಪಿ ಪ್ರಮಾಣ 2020-21 ರಲ್ಲಿ ಶೇ. 1.5 ಕ್ಕೆ ಇಳಿಕೆಯಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿರುವ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸತತ 8 ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕುಸಿತ ಕಂಡಿದೆ. 2019-20ರ ಅವಧಿಯಲ್ಲಿ ಶೇ 4.2 ರಷ್ಟು ಜಿಡಿಪಿ ದಾಖಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 11 ವರ್ಷಗಳಲ್ಲೆ ಮಹಾ ಕುಸಿತ ಎನ್ನಲಾಗಿತ್ತು. 2018-19ರಲ್ಲಿ ಜಿಡಿಪಿ ಶೇ 6.1ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್ಎಸ್ಒ) ಇತ್ತೀಚೆಗೆ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2019-20ರ ಜಿಡಿಪಿ ಶೇ 4.2%, ಇದು 11 ವರ್ಷದಲ್ಲೇ ಮಹಾ ಕುಸಿತ2019-20ರ ಜಿಡಿಪಿ ಶೇ 4.2%, ಇದು 11 ವರ್ಷದಲ್ಲೇ ಮಹಾ ಕುಸಿತ

ಭಾರತದಲ್ಲಿ ಮೇ ತಿಂಗಳಲ್ಲಿ Current Situation Index ಕುಸಿದಿದೆ, ಹೀಗಾಗಿ, ಗ್ರಾಹಕರಿಗೆ ವಿಶ್ವಾಸ ಮೂಡಿಲ್ಲ, ಭವಿಷ್ಯದ ನಿರೀಕ್ಷೆ ಸೂಚ್ಯಂಕ(Future Expectations Index) ಕೂಡಾ ನೆಲಕಚ್ಚಿದೆ. ಆದರೆ, 2021-22 ರಲ್ಲಿ ಜಿಡಿಪಿ ಗಣನೀಯ ಚೇತರಿಕೆ ಕಾಣಲಿದ್ದು, ಶೇ. 7.2 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ Consumer Confidence Survey ತಿಳಿಸಿದೆ.

Consumer confidence collapses, economy may contract by 1.5% in FY21: RBI survey

2020-21 ರಲ್ಲಿ ಖಾಸಗಿ ಬಳಕೆ ಮತ್ತು ವೆಚ್ಚಗಳ ಪ್ರಮಾಣ ಶೇ. 0.5 ಇಳಿದರೂ, ಮುಂದಿನ ವರ್ಷ ದಾಖಲೆಯ ಶೇ.6.9ಕ್ಕೆ ಏರಿಕೆಯಾಗಲಿದೆ ಎಂಬ ವಿಶ್ವಾಸವನ್ನು ಆರ್ ಬಿಐ ಸಮೀಕ್ಷೆ ನೀಡಿದೆ.

ಕೊವಿಡ್ 19 ಮಹಾಮಾರಿ ನಡುವೆ ಲಾಕ್ಡೌನ್ ಸಡಿಲಿಕೆಯಾಗಿ ಗ್ರಾಹಕರು ಖರೀದಿಯತ್ತ ಮನಸ್ಸು ಮಾಡಿದ್ದಾರೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ ಲಕ್ನೋ, ಮುಂಬೈ ಹಾಗೂ ಪಾಟ್ನಾ ಮುಂತಾದ ನಗರಗಳಲ್ಲಿ ಫೋನ್ ಕರೆ ಮೂಲಕ ಸಮೀಕ್ಷೆ ಮಾಡಲಾಗಿದೆ. ಸುಮಾರು 5761 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಜಿಡಿಪಿ ದರ ಇತಿಹಾಸ:
2012-13ರಲ್ಲಿ ಜಿಡಿಪಿ ದರ ಶೇ 4.3ಕ್ಕೆ ಕುಸಿದಿತ್ತು. ನಂತರ ಏಳು ತ್ರೈಮಾಸಿಕ ಅವಧಿಗಳಲ್ಲಿ ಸತತ ಕುಸಿತ ಅನುಭವಿಸಿತ್ತು. 2017-18ರ 4ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ ಶೇ 8.13 ರಷ್ಟಿತ್ತು. 2018-19ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅದು ಶೇ 7.95ಕ್ಕೆ ಕುಸಿತ ಕಂಡಿತ್ತು. 2018-19ರ 2ನೇ ತ್ರೈಮಾಸಿಕ ಅವಧಿಯಲ್ಲಿ 7.00%ಕ್ಕೆ ಇಳಿದಿತ್ತು. 2018-19ರ 3ನೇ ತ್ರೈಮಾಸಿಕ ಅವಧಿಯಲ್ಲಿ 6.58%ಕ್ಕೆ ಹಿನ್ನಡೆ ಅನುಭವಿಸಿತ್ತು. 2018-19ರ ಕೊನೆಯ ಹಾಗೂ 4ನೇ ತ್ರೈಮಾಸಿಕ ಅವಧಿಯಲ್ಲಿಯೂ ಜಿಡಿಪಿ ತತ್ತರಿಸಿತ್ತು. ಆಗ ಅದು 5.83%ರ ಸಾಧನೆ ಮಾಡಿತ್ತು.

English summary
Consumer confidence has collapsed amid the coronavirus pandemic and it may result in contraction of the economy by 1.5 per cent during 2020-21, surveys released by the Reserve Bank showed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X