ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಸರಣಿ ರಜೆ ಭಾಗ್ಯ

By Mahesh
|
Google Oneindia Kannada News

ಬೆಂಗಳೂರು, ಅ.15: ಕರ್ನಾಟಕದಲ್ಲಿ ಬಂದ್ ಪ್ರಯುಕ್ತ ಬ್ಯಾಂಕುಗಳು ಸಾಲು ಸಾಲು ರಜೆ ಪಡೆದುಕೊಂಡಿತ್ತು. ಈಗ ಅಕ್ಟೋಬರ್ ತಿಂಗಳಲ್ಲಿ ಐದು ದಿನಗಳ ಕಾಲ ಬ್ಯಾಂಕ್ ರಜೆ ಸಿಗಲಿದೆ. ಅಕ್ಟೋಬರ್ 21ರಿಂದ ರಜೆ ಸರಣಿ ಆರಂಭವಾಗಲಿದೆ.

ಈ ಮುಂಚೆ ಬಕ್ರೀದ್, ಕರ್ನಾಟಕ ಬಂದ್ ದೆಸೆಯಿಂದ ಬ್ಯಾಂಕ್ ನೌಕರರಿಗೆ ಸರಣಿ ರಜೆ ಸಿಕ್ಕಿತ್ತು. ಈಗ ಅಕ್ಟೋಬರ್ 21ರಿಂದ ಸರಣಿ ರಜೆಯ ಭಾಗ್ಯ ಮುಂದುವರೆಯಲಿದೆ. ಸರಣಿ ರಜೆ ಇರುವುದರಿಂದ ಸಂಬಳದಾರರ ಜೇಬು ತುಂಬಿಸಲು ಹಣ ಡ್ರಾ ಮಾಡಬೇಕಾಗುವ ಸಂಸ್ಥೆಗಳು ಅವಧಿಗೆ ಮುನ್ನ ದುಡ್ಡು ಡ್ರಾ ಮಾಡಿಕೊಳ್ಳಬೇಕಾಗಿದೆ. [ಶನಿವಾರ ದೊಡ್ಡ ಮೊತ್ತ ರವಾನೆ ಸಾಧ್ಯವಿಲ್ಲ]

ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರದ ಜತೆಗೆ ಅಕ್ಟೋಬರ್ ತಿಂಗಳಲ್ಲಿ ದಸರಾ ಹಬ್ಬಗಳ ಪ್ರಯುಕ್ತ ರಜೆ ದೊರೆಯಲಿದೆ. ಆಯುಧಪೂಜೆ, ವಿಜಯದಶಮಿ, ಮಹಾಲಯ ಅಮಾವಾಸ್ಯೆ ಬರುವ ಕಾರಣ ಬಂಪರ್ ರಜೆ ಸಿಗಲಿದೆ.

Consecutive bank holidays may pose problems Starting October 21

ಯಾವ ದಿನ ರಜೆ?: ಅಕ್ಟೋಬರ್ 21 ರಿಂದ ಅಕ್ಟೋಬರ್ 25ರ ತನಕ ರಜೆ ಇರುತ್ತದೆ. ಅಕ್ಟೋಬರ್ 21 : ದುರ್ಗಾಪೂಜೆ, 22 ಆಯುಧಪೂಜೆ, 23 ವಿಜಯದಶಮಿ, 24 ನಾಲ್ಕನೇ ಶನಿವಾರ, 25 ಭಾನುವಾರ, 27 ಮೊಹರಂ ಪ್ರಯುಕ್ತ ರಜೆ ಇರಲಿದೆ.

ಅಕ್ಟೋಬರ್ 26 ರಂದು ಒಂದು ದಿನ ರಜೆ ತೆಗೆದುಕೊಂಡರೆ 21 ರಿಂದ 27 ರವರೆಗೆ ಸರಣಿ ರಜೆಯ ಭಾಗ್ಯ ಸಿಗಲಿದೆ. ಸರ್ಕಾರಿ ಕಚೇರಿಯ ಜೊತೆಗೆ ಬ್ಯಾಂಕ್ ಗಳಿಗೂ ರಜೆ ಇರುವುದರಿಂದ ಮೊದಲೇ ಹಣವನ್ನು ಬ್ಯಾಂಕ್ ಗಳಿಂದ ಡ್ರಾ ಮಾಡಿಕೊಂಡರೆ ಒಳ್ಳೆಯದು.[11 ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಆರ್‌ಬಿಐ ಅಸ್ತು]

ಈ ಹಿಂದೆ ಈ ರೀತಿ ಸರಣಿ ರಜೆ ಬಂದಾಗಲೆಲ್ಲ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸಿ ಸರಣಿ ರಜೆ ಇರುವ ದಿನಗಳಲ್ಲಿ ಒಂದೆರಡು ದಿನ ಹೆಚ್ಚುವರಿ ಕೆಲಸ ನಿಯೋಜಿಸುತ್ತಿತ್ತು. ಅದರೆ, ಈ ಬಾರಿ ಯಾವುದೇ ಸೂಚನೆ ಬಂದಿಲ್ಲ ಎಂದು ಬ್ಯಾಂಕ್ ಒಕ್ಕೂಟ ಹೇಳಿದೆ.

ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಕಾಲದಲ್ಲಿ ಬ್ಯಾಂಕ್ ಗಳ ಸರಣಿ ರಜೆ ಅಷ್ಟಾಗಿ ಗ್ರಾಹಕರಿಗೆ ತೊಂದರೆ ನೀಡುವುದಿಲ್ಲ ಎಂಬ ಮಾತು ಕೇಳಿ ಬಂದಿದೆ. ಅದರೆ, ಈ ಪ್ರಮಾಣ ಇನ್ನೂ ಶೇ 50ರಷ್ಟು ದಾಟಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಬಿಕೆ ದಿವಾಕರ ಅಭಿಪ್ರಾಯಪಟ್ಟಿದ್ದಾರೆ.

English summary
Starting October 21, banks will be closed till October 25 on account of Ayudha Pooja, Vijay Dasami, Muharram and fourth Saturday on October 24. The Reserve Bank of India has mandated banks to observe holiday on the second and fourth Saturday of every month effective September 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X