ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಿತ್ ಡೋವಲ್ ಪುತ್ರನಿಂದ ವಿದೇಶದಲ್ಲಿ ಹೂಡಿಕೆ, ತನಿಖೆಗೆ ಆಗ್ರಹ

|
Google Oneindia Kannada News

ನವದೆಹಲಿ, ಜನವರಿ 18: ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ಡೋವಲ್ ಅವರ ಪುತ್ರ ವಿವೇಕ್ ಡೋವಲ್ ಅವರು ಕೇಮನ್ ದ್ವೀಪದಲ್ಲಿ ಹೂಡಿಕೆ ಮಾಡಿರುವುದರ ಬಗ್ಗೆ ಆರ್ ಬಿಐನಿಂದ ತನಿಖೆಯಾಗಬೇಕು ಎಂದು ಹಿರಿಯ ಕಾಂಗ್ರೆಸ್ಸಿನ ಜೈರಾಮ್ ರಮೇಶ್ ಅವರು ಆಗ್ರಹಿಸಿದ್ದಾರೆ.

'ಪ್ರಧಾನಿ ಮೋದಿ ಅವರು ಅಪನಗದೀಕರಣ ಘೋಷಿಸಿದ 13 ದಿನದೊಳಗೆ ವಿವೇಕ್ ಅವರು ಕೇಮನ್ ದ್ವೀಪದಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ವಿದೇಶದಲ್ಲಿ ಭಾರಿ ಮೊತ್ತ ಹೂಡಿಕೆ ಮಾಡಿ, ತೆರಿಗೆ ವಂಚಿಸುವವರಿಗೆ ಕೇಮನ್ ದ್ವೀಪ ಸ್ವರ್ಗ ಎನಿಸಿಕೊಂಡಿದೆ. ಕೇಮನ್ ದ್ವೀಪದಲ್ಲಿ ಖಾತೆ ಆರಂಭಿಸುವುದು ಅಕ್ರಮವಲ್ಲ.

ಸಿಬಿಐ ಅಧಿಕಾರಿ ವಿರುದ್ಧದ ತನಿಖೆಯಲ್ಲಿ ಅಜಿತ್ ದೋವಲ್ ಮೂಗು ತೂರಿಸಿದರೇ? ಸಿಬಿಐ ಅಧಿಕಾರಿ ವಿರುದ್ಧದ ತನಿಖೆಯಲ್ಲಿ ಅಜಿತ್ ದೋವಲ್ ಮೂಗು ತೂರಿಸಿದರೇ?

ಆದರೆ, ಆರ್ ಬಿಐ ನೀಡಿರುವ 2000 ರಿಂದ 2017ರ ಅಂಕಿ ಅಂಶದ ಪ್ರಕಾರ, ಭಾರತಕ್ಕೆ 8,300 ಕೋಟಿ ರು ವಿದೇಶಿ ಬಂಡವಾಳ ಹೂಡಿಕೆ(ಎಫ್ ಡಿಐ) ಕೇಮನ್ ನಿಂದ ಬಂದಿದೆ. ಆದರೆ, ಭಾರತದಲ್ಲಿ ನೋಟ್ ಬ್ಯಾನ್ ಅದಮೇಲೆ ಕೂಡಾ ಇಷ್ಟೇ ಮೊತ್ತ ಒಂದು ವರ್ಷದಲ್ಲೇ ಬಂದಿದೆ' ಎಂದು ರಮೇಶ್ ಹೇಳಿದರು.

Congress seeks RBI probe into Ajit Doval’s son’s tax haven hedge fund

ಭಾರತದ ಕಪ್ಪುಹಣ ವಿದೇಶದಲ್ಲಿ ಠೇವಣಿ ಎಂಬ ವಿಷಯವಾಗಿ ಬಿಜೆಪಿ ರಚಿಸಿದ್ದ ಸಮಿತಿಯಲ್ಲಿ ಆರ್ ಬಿಐ ನಿರ್ದೇಶಕ ಎಸ್ ಗುರುಮೂರ್ತಿ, ಡೋವಲ್, ಐಐಎಂ ಬೆಂಗಳೂರು ಪ್ರೊಫೆಸರ್ ಆರ್ ವೈದ್ಯನಾಥನ್ ಹಾಗೂ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಇದ್ದರು. ಈ ಸಮಿತಿಯ ವರದಿಯಂತೆ, ಎಫ್ ಡಿಐ ಮೂಲಗಳನ್ನು ಕೂಡಾ ಬಹಿರಂಗಗೊಳಿಸಬೇಕಾಗುತ್ತದೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ದಲ್ಲಾಳಿ ಹಸ್ತಾಂತರದ ಹಿಂದೆ ಮಾಸ್ಟರ್ ಮೈಂಡ್ ಅಜಿತ್ ದೋವಲ್ಅಗಸ್ಟಾ ವೆಸ್ಟ್ ಲ್ಯಾಂಡ್ ದಲ್ಲಾಳಿ ಹಸ್ತಾಂತರದ ಹಿಂದೆ ಮಾಸ್ಟರ್ ಮೈಂಡ್ ಅಜಿತ್ ದೋವಲ್

ಪನಾಮಾ ಹಾಗೂ ಪ್ಯಾರಡೈಸ್ ಪೇಪರ್ಸ್ ನಲ್ಲಿ ಹೆಸರುಳ್ಳ ಡಾನ್ ಡಬ್ಲ್ಯೂ ಇಬ್ಯಾಂಕ್ ಎಂಬಾತ ಡೋವಲ್ ಕಂಪನಿಯ ನಿರ್ದೇಶಕನಾಗಿದ್ದಾನೆ. ಡೋವಲ್ ಅವರ ಮತ್ತೊಬ್ಬ ಪುತ್ರ ಶೌರ್ಯ ಅವರ ಕಂಪನಿ ಜ್ಯೂಸ್ ಸ್ಟ್ರಾಟಜಿಕ್ ಮ್ಯಾನೇಜ್ಮೆಂಟ್ ಅಡ್ವೈಸರ್ ಪ್ರೈ ಲಿಮಿಟೆಡ್ ಹಾಗೂ ಜಿಎನ್ ವೈ ಏಷ್ಯಾ ಕೂಡಾ ಪ್ರಶ್ನಾರ್ಹ ಎಂದಿದ್ದಾರೆ.

English summary
Seeking investigation by the Reserve Bank of India (RBI) on National Security Advisor (NSA) Ajit Doval’s son Vivek Doval’s Cayman Islands hedge fund, senior Congress leader Jairam Ramesh on Thursday said the central bank must publish the source of funds received from tax havens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X