ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ ಹೊಡೆತ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

|
Google Oneindia Kannada News

ನವದೆಹಲಿ ಏಪ್ರಿಲ್ 01: ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರು ತ್ತಲೇ ಇದೆ. ಈ ನಡುವೆ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಬ್ಬಕ್ಕೂ ಮುನ್ನ ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಬೆಲೆ ಏರಿಕೆ ಮಾಡಲಾಗಿದ್ದು ಸಾರ್ವಜನಿಕರಿಗೆ ಬಾರೀ ತೊಂದರೆಯನ್ನುಂಟು ಮಾಡಿದೆ.

ಯುಗಾದಿ ಹಬ್ಬಕ್ಕೆ ಸಾರ್ವಜನಿಕರು ಹಣದುಬ್ಬರದ ದೊಡ್ಡ ಆಘಾತ ಎದುರಿಸುವಂತಾಗಿದೆ. ತಿಂಗಳ ಮೊದಲ ದಿನವೇ ವಾಣಿಜ್ಯ ಎಲ್ಪಿಜಿ ಬೆಲೆಗಳನ್ನು ಹೆಚ್ಚಿಸಲಾಗಿದ್ದು ಇಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 250 ರೂ. ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಇದರ ಬೆಲೆ 2253 ರೂ. ಆಗಲಿದೆ.

LPG Price Hike:ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಹೆಚ್ಚಳLPG Price Hike:ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಹೆಚ್ಚಳ

ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗದಿದ್ದರೂ ವಾಣಿಜ್ಯ LPG ಸಿಲಿಂಡರ್‌ನ ಬೆಲೆಗಳನ್ನು ಹೆಚ್ಚಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಮಾರ್ಚ್ 22 ರಂದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 50ರೂ ಹೆಚ್ಚಿಸಲಾಗಿತ್ತು. ಆದರೆ ಅದಕ್ಕೂ ಮೊದಲು ಅಕ್ಟೋಬರ್ 6, 2021 ರಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಮತ್ತೆ ಬದಲಾಯಿಸಲಾಯಿತು. ನಂತರ ಇದರ ಬೆಲೆ 899.50 ಕ್ಕೆ ಏರಿಸಲಾಗಿದೆ.

Commercial LPG gas price hiked by Rs 250

6 ಅಕ್ಟೋಬರ್ 2021 ರಂದು ಬೆಲೆಯನ್ನು ಹೆಚ್ಚಿಸಲಾಯಿತು. ಅದರ ನಂತರ 14.2 ಕೆಜಿ ತೂಕದ ಸಬ್ಸಿಡಿ ರಹಿತ ಸಿಲಿಂಡರ್ ದೆಹಲಿಯಲ್ಲಿ 949.50 ರೂ ಆದರೆ, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2003.50ರೂ ಆಗಿದೆ. ಜೊತೆಗೆ 5 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಈಗ ರೂ. 349 ತಲುಪಿತ್ತು.

Commercial LPG gas price hiked by Rs 250

ಇತ್ತೀಚೆಗಷ್ಟೇ ಕೆಲವು ಮಾಧ್ಯಮಗಳಲ್ಲಿ ಏಪ್ರಿಲ್‌ನಲ್ಲಿ ಎಲ್‌ಪಿಜಿ ಗ್ಯಾಸ್‌ ಬೆಲೆ ಏರಿಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಇಂದು ವಾಣಿಜ್ಯ ಸಿಲಿಂಡರ್‌ನ ಬೆಲೆ ಏರಿಕೆಯಾಗಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿರುವುದು ಸಮಾಧಾನದ ಸಂಗತಿ. ಅದರ ಬೆಲೆಗಳಿ ಸ್ಥಿರವಾಗಿರುವುದು ಸಮಾಧಾನ ತಂದಿದೆ.

9 ದಿನದೊಳಗೆ 8 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಹಣದುಬ್ಬರದಿಂದ ಜನಸಾಮಾನ್ಯರು ಪರದಾಡುತ್ತಿರುವುದು ಗೊತ್ತೇ ಇದೆ. ಕಳೆದ 9 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 8 ಬಾರಿ ಏರಿಕೆಯಾಗಿದೆ. ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಈ ಎಂಟು ದಿನಗಳ ಬೆಲೆ ಏರಿಕೆಯ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 101.81 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 93.07 ರೂ.ಗೆ ತಲುಪಿದ್ದರೆ, ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 116.72 ರೂ.ಗೆ ಏರಿದೆ.

Commercial LPG gas price hiked by Rs 250

Recommended Video

ಲೇಟ್ ಆಗಿ ಬಂದ್ರು ಲೇಟೆಸ್ಟ್ ಆಗಿ ಪರ್ಫಾರ್ಮ್ ಮಾಡ್ತಾರೆ ಡಿಕೆ | Dk next level | Oneindia Kannada

ಹೀಗಾಗಿ ಸಾಮಾನ್ಯ ಜನರು ಅಸಮಾಧಾನಗೊಂಡಿದ್ದಾರೆ. ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟಿಸುತ್ತದೆ. ಇದು ಮಾತ್ರವಲ್ಲ, ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ, ಅಮುಲ್ ಮತ್ತು ಮದರ್ ಡೈರಿಯಂತಹ ದೊಡ್ಡ ಹಾಲು ಉತ್ಪಾದಕರು ಕೂಡ ಹಾಲಿನ ಬೆಲೆಯನ್ನು ಹೆಚ್ಚಿಸಿದ್ದಾರೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ಗುರುವಾರವೂ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಅಡುಗೆ ಎಣ್ಣೆ ಬೆಲೆ ಕೂಡ ಹೆಚ್ಚಾಗಿದ್ದರಿಂದ ಬೆಂಗಳೂರಿನಲ್ಲಿ ಹೋಟೆಲ್ ಊಟ-ತಿಂಡಿಗಳ ಬೆಲೆಯನ್ನೂ ಇಂದಿನಿಂದ ಏರಿಕೆ ಮಾಡಲಾಗಿದೆ.

English summary
Liquefied petroleum gas (LPG) prices for commercial cylinders were hiked by ₹ 250 on Monday(April 01). In the national capital, 19-kg commercial cylinders will cost ₹ 2,253.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X