ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 36 ರೂ. ಕಡಿತ

|
Google Oneindia Kannada News

ನವದೆಹಲಿ,ಆಗಸ್ಟ್‌. 1: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಸಿಲಿಂಡರ್‌ ಬೆಲೆಯನ್ನು 36 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಸೋಮವಾರ ತಿಳಿಸಿದೆ.

ಈ ಇತ್ತೀಚಿನ ಕಡಿತದೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಸಿ ಸಿಲಿಂಡರ್ ದೆಹಲಿಯಲ್ಲಿ 2012.50 ರೂ ಬದಲಿಗೆ 1,976 ರೂ.ಗೆ ಲಭ್ಯವಾಗಲಿದೆ. ಇದುವೇ ಕೋಲ್ಕತ್ತಾದಲ್ಲಿ 2132 ರೂಪಾಯಿ ಬದಲಾಗಿ ವಾಣಿಜ್ಯ ಎಲ್‌ಪಿಜಿ 2,095.50 ರೂ.ಗೆ ಲಭ್ಯವಿರುತ್ತದೆ. ಇದರ ಬೆಲೆ ಮುಂಬೈನಲ್ಲಿ 1,936.50 ರೂ ಮತ್ತು ಚೆನ್ನೈನಲ್ಲಿ 2,141 ರೂಪಾಯಿಗೆ ಇಳಿದಿದೆ.

ವಾಣಿಜ್ಯ ಎಲ್‌ಪಿಜಿ ದರದಲ್ಲಿ ಇಳಿಕೆಯಾಗಿದ್ದರೂ, 14.2 ಕೆಜಿ ದೇಶೀಯ ಎಲ್‌ಪಿಜಿ ದರದಲ್ಲಿ ಇನ್ನೂ ಇಳಿಕೆಯಾಗಿಲ್ಲ. ಇದನ್ನು ಕೊನೆಯ ಬಾರಿಗೆ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಯಿತು. ಕಳೆದ ವರ್ಷದಲ್ಲಿ ದರವನ್ನು ಎಂಟನೇ ಬಾರಿಗೆ ಹೆಚ್ಚಳ ಮಾಡಲಾಯಿತು.

Commercial LPG cylinder price cut by Rs 36

ಏಪ್ರಿಲ್ ಮತ್ತು ಮಾರ್ಚ್‌ನಲ್ಲಿ ಸಹ 19 ಕೆಜಿ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು 250 ರೂ. ಮತ್ತು ಸಿಲಿಂಡರ್‌ಗೆ 105 ರೂ.ಗಳಷ್ಟು ಹೆಚ್ಚಿಸಲಾಗಿದೆ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಸಿಕ ಪರಿಷ್ಕರಿಸಲಾಗುತ್ತದೆ.

ಜುಲೈನಲ್ಲಿ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 198 ರೂ. ಕಡಿತಗೊಳಿಸಲಾಗಿದೆ. ಈ ಮೊದಲು ಜೂನ್ 1 ರಿಂದ ಜಾರಿಗೆ ಬರುವಂತೆ 135 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು. ಆದರೆ, 14.2 ಕೆಜಿ ಗೃಹಬಳಕೆಯ ಅಡುಗೆ ಸಿಲಿಂಡರ್‌ನ ಬೆಲೆ ಹಾಗೆಯೇ ಬದಲಾಗದೆ ಉಳಿದಿದೆ.

ಜುಲೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳದಿಂದ ಗ್ರಾಹಕರು ತತ್ತರಿಸಿದ್ದಾರೆ. ಜುಲೈ 6 ರಂದು ದೇಶೀಯ ಅಡುಗೆ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ರೂ 50 ಏರಿಕೆಯಾಗಿದೆ.

Recommended Video

ಫಾಝಿಲ್ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಚೇಸ್ ಮಾಡಿ ಅರೆಸ್ಟ್ ಮಾಡಿದ್ದು ಹೇಗೆ? | *Crime |Oneindia Kannada

ಇತ್ತೀಚಿನ ಹೆಚ್ಚಳದ ನಂತರ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ರೂ 1,053 ದೆಹಲಿಯಲ್ಲಿ, ಪ್ರತಿ ಸಿಲಿಂಡರ್‌ಗೆ ಹಿಂದಿನ 1,003 ರೂ.ನಿಂದ 50 ರೂ. ಇತ್ತು. ಇದಕ್ಕೂ ಮೊದಲು ಮೇ ತಿಂಗಳಿನಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಮೇ 7 ರಂದು ಮೊದಲ ಬಾರಿಗೆ ಲೀಟರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಮೇ 19 ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿತ್ತು.

English summary
Indian Oil said on Monday that the price of commercial LPG (Liquefied Petroleum Gas) cylinder has been cut by Rs 36 in many cities including New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X