ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಟದ ಸಂದರ್ಭದಲ್ಲೂ ಹೆಚ್ಚುವರಿ ಸಂಬಳ ಘೋಷಿಸಿದ ಐಟಿ ಕಂಪನಿ

|
Google Oneindia Kannada News

ಬೆಂಗಳೂರು, ಮಾರ್ಚ್ 27: ಕೊರೊನಾವೈರಸ್ ಸೋಂಕಿನ ಭೀತಿ ಐಟಿ-ಬಿಟಿ ಉದ್ಯಮವನ್ನು ಬಹುವಾಗಿ ಕಾಡಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದಲ್ಲಷ್ಟೇ ಅಲ್ಲದೆ ಅಮೆರಿಕ, ಯುರೋಪ್ ದೇಶಗಳಲ್ಲಿರುವ ಸಂಸ್ಥೆಯ ಕಚೇರಿಗಳನ್ನು ಬಂದ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂ ಆಯ್ಕೆ ಬಯಸಿದ್ದಾರೆ. ಕೆಲ ಐಟಿ ಪಾರ್ಕ್ ಗಳಲ್ಲಿ ಕದ್ದು ಮುಚ್ಚಿ ಕಚೇರಿಯಲ್ಲಿ ತುರ್ತು ಕೆಲಸ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಹಲವು ಕಂಪನಿಗಳಿಗೆ ಇದು ಅಪ್ರೈಸಲ್ ಅವಧಿ ಹೀಗಾಗಿ ಐಟಿ ಉದ್ಯೋಗಿಗಳಿಗೆ ತಿಂಗಳ ಸಂಬಳ ಹಾಗೂ ಹೈಕ್ ಎಷ್ಟು ಸಿಗಬಹುದು ಎಂಬ ಚಿಂತೆ ಕಾಡುತ್ತಿದೆ.

2020ರ ಜೂನ್ ಹೊತ್ತಿಗೆ ಕಾಗ್ನಿಜಂಟ್ ನ 7000 ಹುದ್ದೆಗಳಿಗೆ ಕತ್ತರಿ 2020ರ ಜೂನ್ ಹೊತ್ತಿಗೆ ಕಾಗ್ನಿಜಂಟ್ ನ 7000 ಹುದ್ದೆಗಳಿಗೆ ಕತ್ತರಿ

ಪುಣ್ಯಕ್ಕೆ ಇವತ್ತು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ನೀಡಿದ ಆರ್ಥಿಕ ಶಕ್ತಿಯಿಂದ ಟೆಕ್ಕಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಮುಂದಿನ ಮೂರು ತಿಂಗಳುಗಳ ಕಾಲ ಗೃಹಸಾಲ, ವಾಹನ ಸಾಲ, ಚಿನ್ನದ ಸಾಲ, ವೈಯಕ್ತಿಕ ಸಾಲ ಪಡೆದಿದ್ದರು ಸಾಲದ ಮೇಲಿನ ಇಎಂಐ ಕಂತನ್ನು ಕಟ್ಟುವುದು ಬೇಕಿಲ್ಲ ಎಂಬ ಶುಭ ಸುದ್ದಿ ಸಿಕ್ಕಿದೆ. ಹೀಗಾಗಿ ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂಬ ಮಾತನ್ನು ವೇದವಾಕ್ಯದಂತೆ ಪಾಲಿಸಿ, ಅಪಾರ್ಟ್ಮೆಂಟ್, ಎಸ್ ಯುವಿ ಖರೀದಿಸಿದ್ದ ಟೆಕ್ಕಿಗಳು ನೆಮ್ಮದಿಯಿಂದಿದ್ದಾರೆ.

Cognizant To Give 25% Extra Pay To Indian Employees For Working During COVID-19 Pandemic

ಈ ನಡುವೆ ಕಾಗ್ನಿಜೆಂಟ್ ಕಂಪನಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಉದ್ಯೋಗಿಗಳಿಗೆ ಒಳ್ಳೆ ಸುದ್ದಿ ನೀಡಿದೆ. ಅಸೋಸಿಯೇಟ್ ಹಾಗೂ ಅದಕ್ಕಿಂತ ಕೆಳಮಟ್ಟದ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮೂಲ ಸಂಬಳದ ಆಧಾರದ ಮೇಲೆ ಶೇ 25 ರಷ್ಟು ಹೆಚ್ಚುವರಿ ಸಂಬಳವನ್ನು ಏಪ್ರಿಲ್ ತಿಂಗಳಿನಲ್ಲಿ ನೀಡಲಿದೆ. ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಸಂಸ್ಥೆ ಸಹಕರಿಸುತ್ತಿದೆ. ಈ ಹೆಚ್ಚುವರಿ ಸಂಬಳದಿಂದ ಸುಮಾರು 1,30,000 ಉದ್ಯೋಗಿಗಳಿಗೆ ಲಾಭವಾಗಲಿದೆ. ಅಮೆರಿಕದ ನ್ಯೂಜೆರ್ಸಿ ಮೂಲದ ಈ ಕಂಪನಿ 1994ರಲ್ಲಿ ಸ್ಥಾಪನೆಯಾಗಿದ್ದು, ಐಟಿ, ಡಿಜಿಟಲ್, ತಂತ್ರಜ್ಞಾನ ಸೇವೆ ಒದಗಿಸುತ್ತಿದೆ.

English summary
Cognizant to give India employees, who are at associate level and below, 25 pc additional payment over base pay for April. Additional payment, recognising biz continuity efforts amid Coronavirus outbreak, to benefit over 1,30,000 Cognizant staff in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X