ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾದ ಮುನ್ಸೂಚನೆ, ಕಾಗ್ನಿಜೆಂಟ್ ಹಿರಿಯ ಅಧಿಕಾರಿ ಹೊರಕ್ಕೆ

|
Google Oneindia Kannada News

ಬೆಂಗಳೂರು, ಮೇ 14: ಯುಎಸ್ ಮೂಲದ ಪ್ರಮುಖ ಐಟಿ ಕಂಪನಿಯಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಸಾಧ್ಯತೆ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಹಿರಿಯ ಅಧಿಕಾರಿಯ ನಿರ್ಗಮನದ ಬಗ್ಗೆ ಸುದ್ದಿ ಬಂದಿದೆ.

ಕಳೆದ ಎರಡು ವರ್ಷಗಳಿಂದ ಉದ್ಯೋಗ ಕಡಿತ ಜಾರಿಯಲ್ಲಿದೆ. ಯುವ ಇಂಜಿನಿಯರ್ ಗಳಿಗೆ ಅವಕಾಶ ನೀಡಲು ಕಾಂಗ್ನಿಜೆಂಟ್ ಮುಂದಾಗಿದ್ದು, ಕಳೆದ ಆಗಸ್ಟ್ ನಲ್ಲಿ 200ಕ್ಕೂ ಅಧಿಕ ಉನ್ನತ ಹುದ್ದೆಯ ಅಧಿಕಾರಿಗಳನ್ನು ಸಂಸ್ಥೆ ತೊರೆಯುವಂತೆ ಸೂಚಿಸಲಾಗಿತ್ತು.

ಕಾಗ್ನಿಜೆಂಟ್ ನಿಂದ 400 ಉದ್ಯೋಗಿಗಳಿಗೆ ಹೊಸ ಪ್ಯಾಕೇಜ್ ಘೋಷಣೆ ಕಾಗ್ನಿಜೆಂಟ್ ನಿಂದ 400 ಉದ್ಯೋಗಿಗಳಿಗೆ ಹೊಸ ಪ್ಯಾಕೇಜ್ ಘೋಷಣೆ

ಈಗ ಕಾಗ್ನಿಜೆಂಟ್ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷ, ಜಾಗತಿಕ ವಲಯದ ಮುಖ್ಯಸ್ಥರಾಗಿದ್ದ ದೇಬಶೀಶ್ ಚಟರ್ಜಿ ಅವರು 23 ವರ್ಷಗಳ ನಂತರ ಕಾಗ್ನಿಜೆಂಟ್ ತೊರೆಯಲು ಸಿದ್ಧರಾಗಿರುವ ಸುದ್ದಿ ಬಂದಿದೆ. ಬ್ಯಾಕಿಂಗ್ ಕ್ಷೇತ್ರದಿಂದ ಶೇ 35 ರಷ್ಟು ಆದಾಯ ಗಳಿಸುತ್ತಿರುವ ಕಾಗ್ನಿಜೆಂಟ್ ಪ್ರಗತಿಗೆ ದೇಬಶೀಶ್ ಕಾರಣರಾಗಿದ್ದರು.

Cognizant Senior executive Debashis to quit the firm

ಮುಖ್ಯ ತಂತ್ರಗಾರಿಕಾ ತಜ್ಞ ಮಾಲ್ಕಂ ಫ್ರಾಂಕ್ ಅವರ ಬದಲಿಗೆ ಹಿರಿಯ ಅಧಿಕಾರಿ ಗಜೇನ್ ಕಂಡಯ್ಯ ಅವರನ್ನು ತರಲಾಗಿದೆ. ಬ್ಯಾಂಕಿಂಗ್ ಹಾಗೂ ಫೈನಾನ್ಸ್ ವಿಭಾಗಕ್ಕೆ ಪ್ರಸಾದ್ ಚಿತಾಮನೆನಿ ಅವರು ಮುಖ್ಯಸ್ಥರಾಗಲಿದ್ದಾರೆ.

ವಾರ್ಷಿಕವಾಗಿ ಸುಮಾರು 60 ಮಿಲಿಯನ್ ಡಾಲರ್ ಉಳಿತಾಯ ಮಾಡಲು ಐಟಿ ಸಂಸ್ಥೆ ಕಾಗ್ನಿಜೆಂಟ್ ಮುಂದಾಗಿದೆ. ಈ ನಿಟ್ಟಿನಲ್ಲಿ 400 ಕ್ಕೂ ಅಧಿಕ ಹಿರಿಯ ಕಾರ್ಯಕಾರಿ ಸಿಬ್ಬಂದಿಗೆ ಸ್ವಯಂ ಬೇರ್ಪಡುವಿಕೆ ಪ್ಯಾಕೇಜ್ (ವಿಎಸ್ ಪಿ) ಘೋಷಿಸಿ ಎರಡು ವರ್ಷಗಳು ಕಳೆದಿವೆ.

ತೆರಿಗೆ ಅವ್ಯವಹಾರ: ಕಾಗ್ನಿಜೆಂಟ್ ಬ್ಯಾಂಕ್ ಖಾತೆ ಜಪ್ತಿ ತೆರಿಗೆ ಅವ್ಯವಹಾರ: ಕಾಗ್ನಿಜೆಂಟ್ ಬ್ಯಾಂಕ್ ಖಾತೆ ಜಪ್ತಿ

ಇದಲ್ಲದೆ ಜ್ಯೂನಿಯರ್ ಮಟ್ಟದಲ್ಲಿರುವ ಕೆಲ ಉದ್ಯೋಗಿಗಳನ್ನು ವಾರ್ಷಿಕ ಅಪ್ರೈಸಲ್ ಹೆಸರಿನಲ್ಲಿ ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. 150 ಮಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಇನ್ನು 500 ಮಂದಿ ಈ ಸಾಲಿಗೆ ಸೇರುವ ನಿರೀಕ್ಷೆಯಿದೆ.

English summary
US listed major IT company Congizant is having changes in the senior levels. Executive Vice President and president of global delivery Debashis Chatterjee is set to leave the firm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X