ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ನಿಜೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾದ ಟೆಕ್ಕಿಗಳು

ಅಮೆರಿಕದ ಉದ್ಯೋಗ ನೀತಿ, ವೀಸಾ ನೀತಿಯ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯರನ್ನು ಉದ್ಯೋಗದಿಂದ ಹೊರದಬ್ಬಲು ಮುಂದಾಗಿರುವ ಆತಂಕ ಸುದ್ದಿ ಬಂದಿದೆ. ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿಯನ್ನು ಮನೆಗೆ ಕಳಿಸುವ ಸಾಧ್ಯತೆಯಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 09:ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿ ಭಾರತೀಯ ಉದ್ಯೋಗಿಗಳನ್ನು ಯು ಎಸ್ ಟೀಂನಿಂದ ಹೊರ ತಬ್ಬುವ ಸುದ್ದಿ ಹೊರ ಬರುತ್ತಿದ್ದಂತೆ, ಚೆನ್ನೈನ ಘಟಕದಲ್ಲಿ ಆತಂಕ ಹೆಚ್ಚಾಗಿದೆ. ಎರಡು ಐಟಿ ಉದ್ಯೋಗಿಗಳ ಹಿತರಕ್ಷಣಾ ಸಂಘಟನೆಗಳು ಕಾಂಗ್ನಿಜೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ.

ಐಟಿ ಸಂಘಟನೆಗಳಾದ FITE ಹಾಗೂ ನ್ಯೂ ಡೆಮಾಕ್ರಾಟಿಕ್ ಲೇಬರ್ ಫ್ರಂಟ್ (NDLF) ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಉದ್ಯೋಗಿಗಳನ್ನು ಕಾರ್ಯಕ್ಷಮತೆ ಅಧಾರದ ಮೇಲೆ ತೆಗೆದು ಹಾಕುವುದು ಸರಿಯಲ್ಲ ಎಂದು ವಾದಿಸಿವೆ. 2,60,000 ಉದ್ಯೋಗಿಗಳ ಪೈಕಿ ಶೇ 5ರಷ್ಟು ಉದ್ಯೋಗಗನ್ನು ಮನೆಗೆ ಕಳಿಸಿತ್ತು.

ನ್ಯೂ ಡೆಮಾಕ್ರಾಟಿಕ್ ಲೇಬರ್ ಫ್ರಂಟ್ ಸದ್ಯ ತಮಿಳುನಾಡು ಹಾಗೂ ಪುದುಚೇರಿಯಲ್ಲಿದ್ದು, ಶೀಘ್ರದಲ್ಲೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ತನ್ನ ಘಟಕ ಅರಂಭಿಸಲು ಮುಂದಾಗಿದೆ.

Cognizant relieving 6,000 Indians to hire in US

ಅಮೆರಿಕದ ಉದ್ಯೋಗ ನೀತಿ, ವೀಸಾ ನೀತಿಯ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯರನ್ನು ಉದ್ಯೋಗದಿಂದ ಹೊರದಬ್ಬಲು ಮುಂದಾಗಿರುವ ಆತಂಕ ಸುದ್ದಿ ಬಂದಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಎಂಬ ಮಂತ್ರ ಪಠಿಸುತ್ತಿರುವ ಎಂಎನ್ ಸಿ ಕಂಪನಿಗಳ ಸಲಿಗೆ ಭಾರತದ ಇನ್ಫೋಸಿಸ್, ವಿಪ್ರೋ ಹಾಗೂ ಟಿಸಿಎಸ್ ಕೂಡಾ ತಲೆದೂಗಲು ಆರಂಭಿಸಿವೆ.

ಈಗ ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿ ಭಾರತೀಯ ಉದ್ಯೋಗಿಗಳನ್ನು ಯು ಎಸ್ ನಿಂದ ಮನೆಗೆ ಕಳಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ. ಆದರೆ, ಇದು ಪ್ರತಿವರ್ಷ ನಡೆಯುವ ಪ್ರಕ್ರಿಯೆ ಇದಕ್ಕೂ ಅಮೆರಿಕದ ಉದ್ಯೋಗ ನೀತಿಗೂ ಸಂಬಂಧವಿಲ್ಲ ಎಂದು ಕಾಂಗ್ನಿಜೆಂಟ್ ಸ್ಪಷ್ಟನೆ ನೀಡಿದೆ.

ಆದರೆ, ಕಂಪನಿ ವಿರುದ್ಧ ಉದ್ಯೋಗಿಗಳ ಒಕ್ಕೂಟ ತಿರುಗಿ ಬೀಳಲು ಮುಂದಾಗಿದೆ. ಈ ಹಿಂದೆ ಚೆನ್ನೈನ ಟಿಸಿಎಸ್ ಕಂಪನಿಯ ಉದ್ಯೋಗಿಯನ್ನು ಕಡಿಮೆ ಕಾರ್ಯಕ್ಷಮತೆ ಹೆಸರಿನಲ್ಲಿ ಕೆಲಸದಿಂದ ವಜಾಗೊಳಿಸಿದ್ದು ಭಾರಿ ವಿವಾದ ಎಬ್ಬಿಸಿತ್ತು. ಉದ್ಯೋಗಿ ಪರ ತೀರ್ಪು ನೀಡಿದ್ದ ಹೈಕೋರ್ಟ್, ಐಟಿ ಕಂಪನಿಗಳನ್ನು ಕೈಗಾರಿಕಾ ವ್ಯಾಜ್ಯ ಕಾಯ್ದೆಯಡಿಗೆ ತರಲು ಸಾಧ್ಯವೇ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.

English summary
Cognizant relieving 6,000 Indians to hire in US. Reportedly, Cognizant may also increase involuntary exits from its workforce during the current appraisal cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X