ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ನಿಜೆಂಟ್ ನಿಂದ 6 ಸಾವಿರ ಮಂದಿ ಉದ್ಯೋಗಿಗಳಿಗೆ ಕೊಕ್ ?

ಕಾಂಗ್ನಿಜೆಂಟ್ ಈ ಬಾರಿ ಅಪ್ರೈಸಲ್ ಸಮಯದಲ್ಲಿ ಕಳಪೆ ಸಾಮರ್ಥ್ಯ ಹೊಂದಿರುವ 6 ಸಾವಿರ ಮಂದಿ ಉದ್ಯೋಗಳಿಗೆ ಕೊಕ್ ನೀಡಲು ಮುಂದಾಗಿರುವ ಸುದ್ದಿ ಬಂದಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 20: ಪ್ರಮುಖ ಐಟಿ ಕಂಪನಿ ಕಾಂಗ್ನಿಜೆಂಟ್ ಈ ಬಾರಿ ಅಪ್ರೈಸಲ್ ಸಮಯದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಳಪೆ ಸಾಮರ್ಥ್ಯ ಹೊಂದಿರುವ 6 ಸಾವಿರ ಮಂದಿ ಉದ್ಯೋಗಳಿಗೆ ಕೊಕ್ ನೀಡಲು ಮುಂದಾಗಿರುವ ಸುದ್ದಿ ಬಂದಿದೆ. ಇದು ಸಹಜ ಪ್ರಕ್ರಿಯೆಯಾಗಿದ್ದು, ಈ ಸಂಖ್ಯೆ 10 ಸಾವಿರ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ವಾರ್ಷಿಕ ಉದ್ಯೋಗ ಕಡಿತ ಪ್ರಕ್ರಿಯೆಯಂತೆ ಇದು ನಡೆಯಲಿದ್ದು, ಇದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಅಪ್ರೈಸಲ್ ಪ್ರಕ್ರಿಯೆ ನಡೆಯುವಾಗ ಹಿಂಬಡ್ತಿ ಹಾಗೂ ಉದ್ಯೋಗ ಕಡಿತ ನಡೆಯಲಿದ್ದು, ಇದು ಬಹುತೇಕ ಎಲ್ಲಾ ಐಟಿ ಕಂಪನಿಗಳು ಕೈಗೊಳ್ಳುವ ಕ್ರಮವಾಗಿದೆ ಎಂದು ತಿಳಿದು ಬಂದಿದೆ.

Cognizant may fire more than 6,000 in appraisal this year

ಕಾಂಗ್ನಿಜೆಂಟ್ ಇತಿಹಾಸ ಅವಲೋಕಿಸಿದರೆ ವಾರ್ಷಿಕವಾಗಿ ಶೇ 2ರಿಂದ 3ರಷ್ಟು ಉದ್ಯೋಗ ಕಡಿತ ಸಾಮಾನ್ಯಸಂಗತಿಯಾಗಿದೆ. ಸರಿ ಸುಮಾರು 265,000 ಉದ್ಯೋಗಿಗಳನ್ನು ಕಾಂಗ್ನಿಜೆಂಟ್ ಹೊಂದಿದೆ. ಈ ವರ್ಷ ಯುಎಸ್ ನಲ್ಲಿ ಹೆಚ್ಚಿನ ನೇಮಕಾತಿ ನಡೆಸುವ ಮುನ್ಸೂಚನೆಯೂ ಸಿಕ್ಕಿದೆ.

English summary
Cognizant is expected to fire more than 6,000 employees as part of its regular appraisal cycle this year, two sources told ET. Media reports have suggested as many as 10,000 could be let go though it has been specified that this is part of Cognizant's normal appraisal process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X