ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಲ್ಲಿ 23 ಸಾವಿರ ಮಂದಿ ನೇಮಕ: ಕಾಂಗ್ನಿಜೆಂಟ್ ಎಂಡಿ

|
Google Oneindia Kannada News

ಬೆಂಗಳೂರು, ಡಿ. 9: ಭಾರತದ ಪ್ರಮುಖ ಐಟಿ ಸಂಸ್ಥೆ, ಯುಎಸ್ ಮೂಲದ ಕಾಗ್ನಿಜೆಂಟ್ 2020ರಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿತ್ತು. 18 ಸಾವಿರಕ್ಕೂ ಅಧಿಕ ಮಂದಿಗೆ ಯಾವುದೇ ಪ್ರಾಜೆಕ್ಟ್ ನೀಡದೆ ಬೆಂಚ್ ನಲ್ಲಿರಿಸಲಾಗಿತ್ತು. 9ಸಾವಿರ ಮಂದಿಗೆ ಪಿಂಕ್ ಸ್ಲಿಪ್ ನೀಡಲಾಗಿತ್ತು.

ಆದರೆ, 2021ರಲ್ಲಿ ಪರಿಸ್ಥಿತಿ ಬದಲಾಗಲಿದ್ದು, ಸರಿ ಸುಮಾರು 23,000 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆಯ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ನಂಬಿಯಾರ್ ಹೇಳಿದ್ದಾರೆ.

9 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟ ಕಾಗ್ನಿಜೆಂಟ್9 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟ ಕಾಗ್ನಿಜೆಂಟ್

ಕಳೆದ ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ನಂಬಿಯಾರ್ ಅವರು ಸದ್ಯ ಸಿಇಒ ಬ್ರಿಯಾನ್ ಹಂಪ್ ಶೈರ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿರುವ ಸುಮಾರು 2,00,000 ಸಿಬ್ಬಂದಿಗಳ ಕಾರ್ಯಕಾರಿ ಸಮಿತಿ ಪ್ರತಿನಿಧಿಯಾಗಿದ್ದಾರೆ. ಸರ್ಕಾರದ ನೀತಿ ನಿಯಮಕ್ಕೆ ಅನುಗುಣವಾಗಿ ಭಾರತದಲ್ಲಿ ಸಂಸ್ಥೆ ವಿಸ್ತರಣೆಯ ಹೊಣೆಯೂ ನಂಬಿಯಾರ್ ಮೇಲಿದೆ.

Cognizant campus recruitment 2021: Likely to hire 23,000 people

"2020ರಲ್ಲಿ ಉದ್ಯೋಗ ಕಡಿತದ ನಡುವೆಯೂ ನಾವು 17,000 ನೇಮಕಾತಿಗಳನ್ನು ಕ್ಯಾಂಪಸ್ ಗಳಲ್ಲಿ ನಡೆಸಿದ್ದೇವೆ. 2016ರಿಂದ ಇಲ್ಲಿ ತನಕ ಇದು ದೊಡ್ಡ ಮಟ್ಟದ ನೇಮಕಾತಿ ಎನ್ನಬಹುದು. 2021ರಲ್ಲಿ ಸುಮಾರು 23, 000 ನೇಮಕಾತಿಯನ್ನು ಕ್ಯಾಂಪಸುಗಳಿಂದ ನಡೆಸಲಾಗುತ್ತದೆ'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Recommended Video

ಭಾರತದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಇಂದು ನಿವೃತ್ತಿ | Parthiv Patel | Oneindia Kannada

ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಿಶ್ವವಿದ್ಯಾಲಯ, ಚೇಂಬರ್ ಆಫ್ ಕಾಮರ್ಸ್, ನಾಸ್ಕಂ ಮುಂತಾದ ಸಂಸ್ಥೆಗಳ ಜೊತೆಗೆ ಒಡನಾಟ ಇಟ್ಟುಕೊಂಡು ಸಂಸ್ಥೆ ಬೆಳೆಸಲಾಗುತ್ತದೆ ಎಂದು ಹೇಳಿದರು.

English summary
Cognizant campus recruitment 2021: Cognizant likely to 23,000 people from campuses in 2021 said newly appointed India managing director Rajesh Nambiar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X