ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ, ಯುದ್ಧದ ದೆಸೆಯಿಂದ ಕಾಫಿ, ಚಹಾ ಬೆಲೆ ಏರಿಕೆ

|
Google Oneindia Kannada News

ರಷ್ಯಾ ಉಕ್ರೇನ್ ಯುದ್ಧ, ಫೆಬ್ರವರಿಯ ರೀಟೈಲ್ ಮಾರುಕಟ್ಟೆ ಹಣದುಬ್ಬರ ಏರಿಕೆ ಪರಿಣಾಮದಿಂದ ನಿತ್ಯ ಬಳಕೆ ವಸ್ತುಗಳ ದರ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಪ್ರಮುಖ ಸಂಸ್ಥೆಗಳು ತಮ್ಮ ದರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿವೆ. ಮುಖ್ಯವಾಗಿ ಬ್ರಾಂಡೆಡ್ ಕಾಫಿ, ಟೀ ಪ್ರಿಯರಿಗೆ ಆಘಾತ ಕಾದಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಮತ್ತು ನೆಸ್ಲೆ ಇಂಡಿಯಾ (ನೆಸ್ಲೆ) ವಿವಿಧ ದೈನಂದಿನ ಸರಕುಗಳ ಬೆಲೆಗಳನ್ನು ಹೆಚ್ಚಿಸಿವೆ. ಬ್ರೂ ಕಾಫಿಯ ಬೆಲೆಯನ್ನು ಶೇ 3 ರಿಂದ 7 ರಷ್ಟು ಹೆಚ್ಚಿಸಿದ್ದರೆ, ತಾಜ್ ಮಹಲ್ ಚಹಾದ ಬೆಲೆಯನ್ನು ಶೇ 3.7 ರಿಂದ 5.8 ಕ್ಕೆ ಹೆಚ್ಚಿಸಲಾಗಿದೆ. ಫೆಬ್ರವರಿ 2022 ರ ಚಿಲ್ಲರೆ ಹಣದುಬ್ಬರ ದತ್ತಾಂಶವನ್ನು ಬಿಡುಗಡೆ ಮಾಡುವ ಮೊದಲು ಬೆಲೆಗಳ ಹೆಚ್ಚಳವು ಬರುತ್ತದೆ.

ಮಾರ್ಚ್ 14ರಿಂದಲೇ ಹೊಸ ದರ ಜಾರಿಗೆ ಬಂದಿವೆ. ನೆಸ್ಲೆ ತನ್ನ ಉತ್ಪನ್ನಗಳ ಪೈಕಿ ಮ್ಯಾಗಿ ಬೆಲೆ ಕೂಡಾ ಏರಿಕೆ ಮಾಡಿವೆ. 70 ಗ್ರಾಮ್ ಪ್ಯಾಕ್ ಮ್ಯಾಗಿ ಬೆಲೆ 12 ರಿಂದ 14 ರು ಗೆ ಏರಿಕೆಯಾಗಿದೆ. ಉತ್ಪದಾನಾ ವೆಚ್ಚ, ಬೇಡಿಕೆಗೆ ತಕ್ಕ ಪೂರೈಕೆ ಸಮತೋಲನ ಮಾಡಲು ಬೆಲೆ ಏರಿಕೆ ಅನಿವಾರ್ಯ ಎಂದಿದ್ದಾರೆ.

Coffee, Tea, Others Daily Products Become Dearer. Full List of Expensive Items

ಬೆಲೆ ಏರಿಕೆಯಾಗಿರುವ ಪ್ರಮುಖ ಉತ್ಪನ್ನಗಳು
ಮ್ಯಾಗಿ (70 ಗ್ರಾಂ): 14 ರು
ಮ್ಯಾಗಿ (140 ಗ್ರಾಂ): 25 ರು
ಮ್ಯಾಗಿ (560 ಗ್ರಾಂ): 78 ರು
ನೆಸ್ಲೆ ಎ+ ಹಾಲು (1 ಲೀಟರ್): 78 ರು
ನೆಸ್ಲೆ ಕ್ಲಾಸಿಕ್ ಕಾಫಿ (25 ಗ್ರಾಮ್): 80 ರು
ನೆಸ್ಲೆ ಕ್ಲಾಸಿಕ್ ಕಾಫಿ (50 ಗ್ರಾಮ್): 150 ರು
ತಾಜ್ ಮಹಲ್ ಟೀ ಶೇ 3.7 ರಿಂದ ಶೇ 5.8 ರಷ್ಟು ಏರಿಕೆ
ಬ್ರೂ ಕಾಫಿ ಶೇ 3 ರಿಂದ ಶೇ 7ರಷ್ಟು ಪ್ರತಿ ಪ್ಯಾಕ್ ಮೇಲೆ ಏರಿಕೆ
ಬ್ರೂಕ್ ಬಾಂಡ್ ಶೇ 1.4 ರಿಂದ ಶೇ 1.5 ರಷ್ಟು ಪ್ರತಿ ಪ್ಯಾಕ್ ಮೇಲೆ ಏರಿಕೆ

ರಿಟೇಲ್ ಹಣದುಬ್ಬರ ದರ ಸತತವಾಗಿ ಎರಡನೇ ತಿಂಗಳು ಏರುಮುಖವಾಗಿ ಸಾಗಿದೆ. ಇದರ ಜೊತೆಗೆ ಹೋಲ್ ಸೇಲ್ ದರ ಕೂಡಾ ಶೇ 13.11ಕ್ಕೇರಿದೆ. ಜಾಗತಿಕವಾಗಿ ಕಚ್ಚಾತೈಲ ಹಾಗೂ ಆಹಾರೇತರ ಉತ್ಪನ್ನಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜೂನ್ 2021ರಲ್ಲಿ ಶೇ 6.26ರಷ್ಟು ರಿಟೇಲ್ ಹಣದುಬ್ಬರ ಏರಿಕೆಯಾಗಿತ್ತು. ಇದಾದ ಬಳಿಕ ಮತ್ತೊಮ್ಮೆ ದರ ಏರಿಕೆಯಾಗಿದೆ.

ರಿಟೇಲ್ ಹಣದುಬ್ಬರದ ಮೇಲೆ ಗ್ರಾಹಕ ದರ ಸೂಚ್ಯಂಕ (CPI) ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಆರ್ಥಿಕ ಮಾರ್ಗದರ್ಶಿಯನ್ನು ಪ್ರಕಟಿಸಲಿದೆ.

English summary
In a big jolt to tea and coffee lovers, consumer goods giants Hindustan Unilever Limited (HUL) and Nestle India (Nestle) have raised the prices of various daily commodities. While the prices of Bru Coffee have been hiked by 3-7%, the price of Taj Mahal tea has been increased from 3.7 to 5.8 per cent. The hike in prices comes ahead of the release of the retail inflation data for Feb 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X