ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟ

|
Google Oneindia Kannada News

Recommended Video

ಕಾಫಿ ಡೆ ಸಿದ್ದಾರ್ಥ್ ಆಸ್ತಿ ಖರೀದಿಸಿದ್ದು ಯಾರು ಗೊತ್ತಾ..? | Oneindia Kannada

ಬೆಂಗಳೂರು, ಸೆಪ್ಟೆಂಬರ್ 19 : ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ ಸಾವಿನ ಬಳಿಕ ಸಿಡಿಇಎಲ್ ಬೆಂಗಳೂರಿನಲ್ಲಿರುವ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ಅನ್ನು ಮಾರಾಟ ಮಾಡಲಿದೆ. ಇದರಿಂದಾಗಿ ಸಂಸ್ಥೆಯ ಸಾಲದ ಮೊತ್ತ ಇಳಿಕೆಯಾಗಲಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ 2,700 ಕೋಟಿ ರೂ.ಗಳಿಗೆ ಮಾರಾಟವಾಗುತ್ತಿದೆ. ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದೆ.

ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?

ಗ್ಲೋಬಲ್ ವಿಲೇಜ್ ಮಾರಾಟದ ಬಗ್ಗೆ ಸಿಡಿಇಎಲ್ ಷೇರುಪೇಟೆಗೆ ಅಧಿಕೃತವಾಗಿ ಮಾಹಿತಿ ನೀಡಿದೆ. 2000 ಕೋಟಿ ಮತ್ತು 700 ಕೋಟಿಯಲ್ಲಿ ಎರಡು ಹಂತದಲ್ಲಿ ಮಾರಾಟ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 31ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕೆಫೆ ಕಾಫಿ ಡೇ ಅಂಗ ಸಂಸ್ಥೆ ಕೊಳ್ಳಲು ಮುಂದಾದ ಜಿಂದಾಲ್, ಅದಾನಿಕೆಫೆ ಕಾಫಿ ಡೇ ಅಂಗ ಸಂಸ್ಥೆ ಕೊಳ್ಳಲು ಮುಂದಾದ ಜಿಂದಾಲ್, ಅದಾನಿ

2019ರ ಜುಲೈ 31ರ ಅಂತ್ಯಕ್ಕೆ ಸಿಡಿಇಎಲ್ ಸಾಲದ ಮೊತ್ತ 3, 472 ರೂ. ಗಳಾಗಿತ್ತು. ಈಗ 2700 ಕೋಟಿ ರೂ. ಮಾರಾಟದಿಂದಾಗಿ ಸಂಸ್ಥೆಯ ಸಾಲದಲ್ಲಿ ಇಳಿಕೆಯಾಗಲಿದೆ. ವಿ.ಜಿ ಸಿದ್ದಾರ್ಥ ಸಾವಿನ ಬಳಿಕ ಟೆಕ್ ಪಾರ್ಕ್ ಮಾರಾಟಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿ

ಯಾರಿಗೆ ಮಾರಾಟವಾಗಿದೆ?

ಯಾರಿಗೆ ಮಾರಾಟವಾಗಿದೆ?

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ ಅನ್ನು ಅಮೆರಿಕ ಮೂಲದ ಬ್ಲ್ಯಾಕ್ ಸ್ಟೋನ್ ಮತ್ತು ಸಾಲರ್ ಪುರಿಯಾ ಸತ್ವಾ ಕಂಪನಿಗಳಿಗೆ ಮಾರಾಟವಾಗಿದೆ. ಬ್ಲ್ಯಾಕ್ ಸ್ಟೋನ್ ಗ್ರೂಪ್ ಶೇ 80ರಷ್ಟು ಮತ್ತು ಸಾಲರ್ ಪುರಿಯಾ ಸತ್ವಾ ಕಂಪನಿ ಶೇ 20ರಷ್ಟುಮಾಲಿಕತ್ವವನ್ನು ಗ್ಲೋಬಲ್ ವಿಲೇಜ್‌ನಲ್ಲಿ ಹೊಂದಿರುತ್ತವೆ.

ಅಕ್ಟೋಬರ್ 31ರೊಳಗೆ ಪೂರ್ಣ

ಅಕ್ಟೋಬರ್ 31ರೊಳಗೆ ಪೂರ್ಣ

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ ಸಿಡಿಇಎಲ್ ಅಂಗ ಸಂಸ್ಥೆ ಟ್ಯಾಂಗ್ಲಿನ್ ಡೆವಲಪ್‌ಮೆಂಟ್ಸ್ ಲಿಮಿಡೆಡ್ ಒಡೆತನದಲ್ಲಿದೆ. ಅದನ್ನು ಪ್ರತ್ಯೇಕಿಸಿದ ಬಳಿಕ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಅಕ್ಟೋಬರ್ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಿಡಿಇಎಲ್ ಹೇಳಿದೆ.

ಮಾರಾಟ ಮಾಡಲು ಸಲಹೆ ನೀಡಲಾಗಿತ್ತು

ಮಾರಾಟ ಮಾಡಲು ಸಲಹೆ ನೀಡಲಾಗಿತ್ತು

2019ರ ಜುಲೈ 31ರ ಅಂತ್ಯಕ್ಕೆ ಸಿಡಿಇಎಲ್ ಸಾಲದ ಮೊತ್ತ 3, 472 ರೂ. ಗಳಾಗಿತ್ತು. ವಿ. ಜಿ. ಸಿದ್ದಾರ್ಥ ಸಾವಿನ ಬಳಿಕ ಕಾಫಿ ಡೇ ಷೇರುಗಳು ನೆಲ ಕಚ್ಚಿದ್ದವು ಇದರಿಂದಾಗಿ ಸಾಲದ ಮೊತ್ತ 4970 ಕೋಟಿಗೆ ಏರಿಕೆಯಾಗಿತ್ತು. ಸಿಡಿಇಎಲ್ ಆಡಳಿತ ಮಂಡಳಿ ಪುನಾರಚನೆಗೊಂಡ ಬಳಿಕ ಐಡಿಎಫ್‌ಸಿ ಗ್ಲೋಬಲ್ ವಿಲೇಜ್ ಮಾರಾಟ ಮಾಡಲು ಸಲಹೆ ನೀಡಿತ್ತು.

ಇನ್ನೊಂದು ಅಂಗ ಸಂಸ್ಥೆ ಮಾರಾಟ

ಇನ್ನೊಂದು ಅಂಗ ಸಂಸ್ಥೆ ಮಾರಾಟ

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ ಜೊತೆಗೆ ಮತ್ತೊಂದು ಅಂಗ ಸಂಸ್ಥೆಯಾಗಿರುವ ಸೋಶಿಯಲ್ ಲಾಜಿಸ್ಟಿಕ್ಸ್ ತನ್ನ ಕೆಲವು ಆಸ್ತಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಇದರ ಒಟ್ಟಾರೆ ಸಾಲ 1488 ಕೋಟಿ ಇದೆ. ಈ ಎರಡೂ ಮಾರಾಟ ಪ್ರಕ್ರಿಯೆಯಿಂದಾಗಿ ಸಾಲದ ಪ್ರಮಾಣ ಕಡಿಯೆಯಾಗಲಿದೆ.

English summary
Global Village Tech park in Rajarajeshwari Nagar Bengaluru will sell to Blackstone Group and Sallapuria Sattva Group for Rs 2,700 crore announced Coffee Day Enterprises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X