ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃತ್ತಿಪರ ತಂಡವಿದೆ, ಉದ್ಯಮ ನಿಲ್ಲಿಸೊಲ್ಲ: ಷೇರು ಮಾರುಕಟ್ಟೆಗಳಿಗೆ ಕಾಫಿ ಡೇ ಪತ್ರ

|
Google Oneindia Kannada News

ಬೆಂಗಳೂರು, ಜುಲೈ 30: ತಮ್ಮ ಮಾಲೀಕನ ಹಠಾತ್ ಕಣ್ಮರೆಯ ಕುರಿತು ಕಾಫಿ ಡೇ ಸಂಸ್ಥೆಯು ಮುಂಬೈನಲ್ಲಿರುವ ಎರಡು ಪ್ರಮುಖ ಷೇರು ಮಾರುಕಟ್ಟೆಗಳಿಗೆ ಪತ್ರ ಬರೆದಿದೆ.

CCD Owner VG Siddhartha Missing LIVE: 'ಮಾದರಿ ಉದ್ಯಮಿ'ಯ ಹಠಾತ್ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿCCD Owner VG Siddhartha Missing LIVE: 'ಮಾದರಿ ಉದ್ಯಮಿ'ಯ ಹಠಾತ್ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿ

ಸಿದ್ಧಾರ್ಥ ಅವರ ಕಣ್ಮರೆ ಉದ್ಯಮ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ದಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (ನಿಫ್ಟಿ) ಮತ್ತು ಬಿಎಸ್‌ಇ ಲಿಮಿಟೆಡ್‌ಗೆ ಪತ್ರ ಬರೆದಿರುವ ಕಾಫಿ ಡೇ ಕಂಪೆನಿ ಸೆಕ್ರೆಟರಿ ಸದಾನಂದ ಪೂಜಾರಿ ಅವರು ತಮ್ಮ ಮಾಲೀಕನ ಕಣ್ಮರೆ ಕುರಿತು ಮಾಹಿತಿ ನೀಡಿದ್ದಾರೆ.

ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ಜತೆಗೆ ಸಿದ್ಧಾರ್ಥ ಅವರ ಅನುಪಸ್ಥಿತಿಯಲ್ಲಿಯೂ ಕಂಪೆನಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅದು ಸಮರ್ಥವಾಗಿದೆ ಎಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡುವ ಮೂಲಕ ಕಂಪೆನಿಯ ಷೇರುಗಳು ನೆಲಕಚ್ಚದಂತೆ ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Coffee Day Letter To NSE And BSE Will Continue Business

'ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವಿ.ಜಿ. ಸಿದ್ಧಾರ್ಥ ಅವರು ನಿನ್ನೆ ಸಂಜೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಬಂಧಪಟ್ಟ ಆಡಳಿತದಿಂದ ನಾವು ನೆರವು ಪಡೆದುಕೊಳ್ಳುತ್ತಿದ್ದೇವೆ. ಕಂಪೆನಿಯು ವೃತ್ತಿಪರ ಸ್ಪರ್ಧಾತ್ಮಕ ನಾಯಕತ್ವದ ತಂಡದ ನೇತೃತ್ವದಲ್ಲಿ ಮುನ್ನಡೆಯುತ್ತಿದೆ ಮತ್ತು ನಿರ್ವಹಣೆಯಾಗುತ್ತಿದೆ. ನಾವು ಉದ್ಯಮದ ಮುಂದುವರಿಕೆಯನ್ನು ಖಚಿತಪಡಿಸುತ್ತೇವೆ. ಮುಂದಿನ ಮಾಹಿತಿ ಪಡೆದ ಬಳಿಕ ನಿಮಗೆ ವಿವರ ನೀಡುತ್ತೇವೆ' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?

ಆದರೆ, ಕಾಫಿ ಡೇ ಸೇರಿದಂತೆ ಸಿದ್ಧಾರ್ಥ ಅವರ ಮಾಲೀಕತ್ವದ ಸಂಸ್ಥೆಗಳು ಮಂಗಳವಾರ ಬಂದ್ ಆಗಿವೆ. ಜತೆಗೆ ಷೇರುಪೇಟೆಯಲ್ಲಿ ಕಾಫಿ ಡೇ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿದೆ.

Coffee Day Letter To NSE And BSE Will Continue Business

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರುಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು

ಬಿಎಸ್‌ಇ ಷೇರುಪೇಟೆಯಲ್ಲಿ ಮಂಗಳವಾರ ಬೆಳಿಗ್ಗೆ 154.05 ರೂ. ನಂತೆ ವಹಿವಾಟು ಆರಂಭವಾಗಿದ್ದು, 19.90%ರಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇಯಲ್ಲಿ 20%ರಷ್ಟು ಕುಸಿತ ಉಂಟಾಗಿದೆ.

English summary
Coffee Day Company Secretary in a letter to top stock exchanges NSE and BSE informed that company will continue its business as it has professionally managed and led by competent leadership team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X