• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಫಿ ಡೇ ಅಂಗ ಸಂಸ್ಥೆ ಸಿಕಾಲ್ ಮಾರಾಟ ಪ್ರಕ್ರಿಯೆ ಮತ್ತೆ ಚುರುಕು

|
Google Oneindia Kannada News

ಬೆಂಗಳೂರು, ಡಿಸೆಂಬರ್ 04: ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಸಂಸ್ಥೆಯು ಸಾಲದ ಹೊರೆಯನ್ನು ತಗ್ಗಿಸಲು ಅಂಗ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ.

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟಕ್ಕಿಟ್ಟ ಬಳಿಕ ಲಾಜಿಸ್ಟಿಕ್ ಕಂಪನಿ ಸಿಕಾಲ್ ಕೂಡಾ ಮಾರಾಟಕ್ಕಿಟ್ಟಿರುವ ಸುದ್ದಿ ಮತ್ತೆ ಬಂದಿದೆ. ಸಿಕಾಲ್ ಲಾಜಿಸ್ಟಿಕ್ ಲಿಮಿಟೆಡ್ ಕೂಡಾ 1,488 ಕೋಟಿ ರು ಸಾಲ ಹೊಂದಿದೆ.

ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ಜುಲೈ 31, 2019ರ ಪ್ರಕಟಣೆಯಂತೆ ಸಂಸ್ಥೆ 3,472 ಕೋಟಿ ರು ಸಾಲ ಹೊಂದಿತ್ತು. ಕೆಫೆ ಕಾಫಿ ಡೇ ಮಾಲೀಕರಾದ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಹೂಡಿಕೆದಾರರು ಒಟ್ಟು 2,437.29 ಕೋಟಿ ರು ಕಳೆದುಕೊಂಡಿದ್ದಾರೆ. ಜುಲೈ 29ರಂದು 4, 067.65 ಕೋಟಿ ರು ಇದ್ದ ಸಂಸ್ಥೆಯ ಮಾರುಕಟ್ಟೆ ಮೌಲ್ಯ 1630. 86 ಕೋಟಿ ರುಗೆ ಕುಸಿದಿದೆ.

ಲಾಜಿಸ್ಟಿಕ್ ಲಿಮಿಟೆಡ್ ಕಂಪನಿ ಸಿಕಾಲ್ ಮೂಲಕ ಕಂಟೇನರ್ ಫ್ರೇಟ್ ಕೇಂದ್ರ, ಪೋರ್ಟ್ ಟರ್ಮಿನಲ್ ಗಳನ್ನು ನಿಭಾಯಿಸಲಾಗುತ್ತಿದೆ. ಸಿಕಾಲ್ ಸಂಸ್ಥೆ ಕೊಳ್ಳಲು ಜೆಎಸ್ ಡಬ್ಲ್ಯೂ ಸಮೂಹ, ಅದಾನಿ ಗ್ರೂಪ್ ಮುಂಚೂಣಿಯಲ್ಲಿವೆ. ಇದಲ್ಲದೆ ದುಬೈ ಸರ್ಕಾರ ಸ್ವಾಮ್ಯದ ಡಿಪಿ ವರ್ಲ್ಡ್ ಕೂಡಾ ಆಸಕ್ತಿ ತೋರಿದೆ.

ವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿ

ಚೆನ್ನೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಕಾಲ್ ನಲ್ಲಿ ಕಾಫಿ ಡೇ ಎಂಟರ್ ಪ್ರೈಸಸ್ (ಸಿಡಿಇಎಲ್) ಶೇ 53ರಷ್ಟು ಪಾಲು ಹೊಂದಿದೆ. ತಮಿಳುನಾಡಿನ ಕಾಮರಾಜರ್ ಪೋರ್ಟ್ ನಲ್ಲಿ ಶೇ 74ರಷ್ಟು, ತೂತ್ತುಕುಡಿಯಲ್ಲಿ ಖಾಸಗಿ- ಸರ್ಕಾರಿ ಸಹಭಾಗಿತ್ವದ ವಿಒಸಿ ಬಂದರಿನಲ್ಲಿ ಶೇ49ರಷ್ಟು ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಶೇ 37ರಷ್ಟು ಆದಾಯವನ್ನು ಸಿಕಾಲ್ ಹೊಂದಿದೆ. ಇದಲ್ಲದೆ, ಭಾರತೀಯ ರೈಲ್ವೆಯಿಂದ ಕೆಟಗೆರಿ 1 ಲೈಸನ್ಸ್ ಹೊಂದಿದ್ದು, ಕಂಟೇನರ್ ರೈಲುಗಳನ್ನು ಭಾರತದಾದ್ಯಂತ ಓಡಿಸಲು ಅನುಮತಿ ಪಡೆದುಕೊಂಡಿದೆ. ಇದೆಲ್ಲರ ಜೊತೆಗೆ ಎಲ್ಲಾ ಕಡೆಗಳಿಂದಲೂ ಸಿಕಾಲ್ ಸಾಲ ಹೊಂದಿದೆ.

ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ.

English summary
The Coffee Day Group, founded by the late VG Siddhartha, is likely to seek bids to sell off its controlling stake in multimodal logistics solutions provider Sical Logistics, people privy to the matter said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X