ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಲೋಬಲ್ ವಿಲೇಜ್ ಟೆಕ್ ಮಾರಾಟ, ತಗ್ಗಿದ ಕಾಫಿ ಡೇ ಸಾಲದ ಹೊರೆ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ ದಿನದಿನಕ್ಕೆ ಕುಸಿಯುತ್ತಿದೆ, ಷೇರುಪೇಟೆಯಲ್ಲಿ ಕಾಫಿ ಡೇ ಷೇರುಗಳು ನೆಲಕಚ್ಚಿವೆ ಎಂಬ ಕಹಿ ಸುದ್ದಿ ನಡುವೆ, ಸಾಲದ ಹೊರೆ ತಗ್ಗಿರುವ ಸಿಹಿ ಸುದ್ದಿ ಬಂದಿದೆ.

ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಸುಮಾರು 4970 ಕೋಟಿ ರು ಸಾಲ ಹೊಂದಿದೆ ಎಂದು ಸಂಸ್ಥೆ ಪ್ರಕಟಿಸಿತ್ತು.ಈ ನಡುವೆ ಟ್ಯಾಂಗ್ಲಿನ್ ಡೆವಲ್ಮೆಂಟ್ಸ್ ಒಡೆತನದಲ್ಲಿರುವ 90 ಎಕರೆ ವಿಸ್ತೀರ್ಣ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟಕ್ಕಿಡಲಾಗಿದ್ದು, ಬ್ಲಾಕ್ ಸ್ಟೋನ್ ಸಂಸ್ಥೆ ಖರೀದಿಗೆ ಮುಂದಾಗಿರುವ ಸುದ್ದಿ ಬಂದಿದೆ. 2,600 ಕೋಟಿ ರು ನಿಂದ 3,000 ಕೋಟಿ ರು ಮೌಲ್ಯಕ್ಕೆ ಮಾರಾಟವಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿತ್ತು.

ವಿಜಿ ಸಿದ್ದಾರ್ಥ ಅಕಾಲಿಕ ಮರಣ, ಸಂಸ್ಥೆ ಮೌಲ್ಯ, ಸಿಸಿಡಿ ಷೇರು ಪಾತಾಳಕ್ಕೆ ವಿಜಿ ಸಿದ್ದಾರ್ಥ ಅಕಾಲಿಕ ಮರಣ, ಸಂಸ್ಥೆ ಮೌಲ್ಯ, ಸಿಸಿಡಿ ಷೇರು ಪಾತಾಳಕ್ಕೆ

ಈಗ ಮಾರಾಟ ಸುದ್ದಿಯನ್ನು ಖಚಿತಪಡಿಸಿರುವ ಕಾಫಿ ಡೇ ಸಂಸ್ಥೆ, ಸಾಲದ ಹೊರೆ 1,000 ಕೋಟಿ ರುಗೆ ಇಳಿಯಲಿದೆ ಎಂದು ಪ್ರಕಟಿಸಿದೆ. ಜುಲೈ 31, 2019ರ ಪ್ರಕಟಣೆಯಂತೆ ಸಂಸ್ಥೆ 3,472 ಕೋಟಿ ರು ಸಾಲ ಹೊಂದಿತ್ತು.

Coffee Day Enterprises says debt to fall to Rs 1,000 cr post sale of Bengaluru tech park

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟದ ಬಳಿಕ ಲಾಜಿಸ್ಟಿಕ್ ಕಂಪನಿ ಸಿಕಾಲ್ ಕೂಡಾ ಮಾರುವ ಮುನ್ಸೂಚನೆ ಸಿಕ್ಕಿದೆ. ಸಿಕಾಲ್ ಲಾಜಿಸ್ಟಿಕ್ ಲಿಮಿಟೆಡ್ ಕೂಡಾ 1,488 ಕೋಟಿ ರು ಸಾಲ ಹೊಂದಿದೆ.

ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಸತ್ಯವೇ? ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಸತ್ಯವೇ?

ಕೆಫೆ ಕಾಫಿ ಡೇ ಮಾಲೀಕರಾದ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಹೂಡಿಕೆದಾರರು ಒಟ್ಟು 2,437.29 ಕೋಟಿ ರು ಕಳೆದುಕೊಂಡಿದ್ದಾರೆ. ಜುಲೈ 29ರಂದು 4, 067.65 ಕೋಟಿ ರು ಇದ್ದ ಸಂಸ್ಥೆಯ ಮಾರುಕಟ್ಟೆ ಮೌಲ್ಯ 1630. 86 ಕೋಟಿ ರುಗೆ ಕುಸಿದಿದೆ

ಸಿದ್ದಾರ್ಥ ಸಾವಿನ ತನಿಖೆಗೆ ಎಸ್. ಆರ್ ಹಿರೇಮಠ ಆಗ್ರಹ ಸಿದ್ದಾರ್ಥ ಸಾವಿನ ತನಿಖೆಗೆ ಎಸ್. ಆರ್ ಹಿರೇಮಠ ಆಗ್ರಹ

ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ

English summary
Cafe chain operator Coffee Day Enterprises on Saturday said its total debt is expected to reduce to around Rs 1,000 crore after adjusting the proceeds from sale of its Global Village Tech Park in Bengaluru to Blackstone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X